Home Advertisement
Home ಸುದ್ದಿ ದೇಶ “ಸೇವೆ ಎಂದರೆ ಶ್ರೇಷ್ಠತೆ” – ಶ್ರೀಗಳ ಸ್ಮರಣೆಯಲ್ಲಿ ಮೋದಿ ಮಾತು

“ಸೇವೆ ಎಂದರೆ ಶ್ರೇಷ್ಠತೆ” – ಶ್ರೀಗಳ ಸ್ಮರಣೆಯಲ್ಲಿ ಮೋದಿ ಮಾತು

0
111

ಬೆಂಗಳೂರು/ನವದೆಹಲಿ: ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಅವರ ಜಯಂತಿಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗೌರವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲೇ ಭಾವಪೂರ್ಣ ಸಂದೇಶ ಹಂಚಿಕೊಂಡಿದ್ದು, ಶ್ರೀಗಳ ಸೇವಾ ಜೀವನವನ್ನು ಸ್ಮರಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ, “ಮನುಕುಲದ ಬಗೆಗಿನ ಕರುಣೆ, ನಮ್ರತೆ ಮತ್ತು ಅಚಲ ಸೇವೆಯ ಸಂಕೇತವಾಗಿ ಶ್ರೀಗಳು ಜನರ ಸ್ಮೃತಿಯಲ್ಲಿ ಸದಾ ನೆಲೆಸಿದ್ದಾರೆ. ಇತರರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರು, ನಿಜವಾದ ಶ್ರೇಷ್ಠತೆ ಸೇವೆಯಲ್ಲಿ ಅಡಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ” ಎಂದು ಕೊಂಡಾಡಿದ್ದಾರೆ.

ಶ್ರೀಗಳ ಶಿಕ್ಷಣ, ಸಮಾಜ ಸೇವೆ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಅವರ ಸೇವೆಗಳು ಸಮಾಜದ ಮೇಲೆ ಶಾಶ್ವತ ಛಾಪು ಮೂಡಿಸಿದ್ದಾಗಿ ಹೇಳಿದ್ದಾರೆ. ಇಂದಿಗೂ ಶ್ರೀಗಳ ಜೀವನ ಅಸಂಖ್ಯಾತ ಜನರಿಗೆ ನಿಸ್ವಾರ್ಥ ಸೇವೆಯ ದಾರಿಗೆ ಪ್ರೇರಣೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶ್ರೀ ಶಿವಕುಮಾರ ಸ್ವಾಮಿಗಳ ಜೀವನವೇ ಸೇವೆ, ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಪ್ರತಿರೂಪವಾಗಿದ್ದು, ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ.