Home Advertisement
Home ಸುದ್ದಿ ದೇಶ ಕೋವಿಡ್ ದಿನಗಳನ್ನು ಪ್ರಧಾನಿ ಮೋದಿ ಮರೆತಿದ್ದಾರೆ

ಕೋವಿಡ್ ದಿನಗಳನ್ನು ಪ್ರಧಾನಿ ಮೋದಿ ಮರೆತಿದ್ದಾರೆ

0
141

ನವದೆಹಲಿ: ಕೋವಿಡ್ ಸಂದರ್ಭದಲ್ಲಿ ದೇಶದಲ್ಲಿ ಏನೆಲ್ಲ ಘಟನೆಗಳು ನಡೆದಿವೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮರೆತಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, “ಕೋವಿಡ್‌ನಂತಹ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ” ಎಂದು ಮೋದಿ ಹೇಳಿದ್ದಾರೆ. ಆದರೆ, ಅಂದು ಏನಾಗಿತ್ತು? ದುರುಂತಗಳು ನಡೆದವು, ಎಷ್ಟೋ ಜನರು ಸಾವನ್ನಪ್ಪಿದರು. ಅದೆಲ್ಲವನ್ನೂ ಅವರು ಮರೆತಿದ್ದಾರೆ ಎಂದರು.

ಲೋಕಸಭೆಯ ಭಾಷಣದಲ್ಲಿ ಮೋದಿ ಅಮೆರಿಕ ಆಗಲಿ, ಡೊನಾಲ್ಡ್ ಟ್ರಂಪ್ ಅವರ ಹೆಸರಾಗಲಿ ಉಲ್ಲೇಖಿಸಿಲ್ಲ. ಮೋದಿಯವರ ಮೌನ ನಮ್ಮ ದೇಶಕ್ಕೆ ಗಂಭೀರ ಸಮಸ್ಯೆಯ ಸೂಚನೆ ಎಂದು ಹೇಳಿದರು.

ಮಧ್ಯಪ್ರಾಚ್ಯ ಸಂಘರ್ಷದಿಂದ ಭಾರತ ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿ ನಿರ್ವಹಿಸಲು ಮೋದಿ ಸರ್ಕಾರಕ್ಕೆ ನಿರ್ದೇಶನ ಮತ್ತು ಕಾರ್ಯತಂತ್ರ ಎರಡೂ ಇಲ್ಲ ಎಂದು ಆರೋಪಿಸಿರು ಅವರು, ಮೋದಿಯವರು ಏನೂ ಮಾಡಲು ಸಾಧ್ಯವಿಲ್ಲ ಎಂದರು.