Home Advertisement
Home ಸುದ್ದಿ ದೇಶ ಪೆಟ್ರೋಲ್-ಡೀಸೆಲ್ ಸುಂಕದಲ್ಲಿ ಭಾರೀ ಕಡಿತ: ಕೇಂದ್ರದ ಮಹತ್ವದ ಘೋಷಣೆ

ಪೆಟ್ರೋಲ್-ಡೀಸೆಲ್ ಸುಂಕದಲ್ಲಿ ಭಾರೀ ಕಡಿತ: ಕೇಂದ್ರದ ಮಹತ್ವದ ಘೋಷಣೆ

0
131

ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಮಹತ್ವದ ಕಡಿತ ಘೋಷಿಸಿದೆ. ಪೆಟ್ರೋಲ್ ಮೇಲೆ ವಿಧಿಸಲಾಗುತ್ತಿದ್ದ ಸುಂಕವನ್ನು ಲೀಟರ್‌ಗೆ ₹13ರಿಂದ ₹3ಕ್ಕೆ ಇಳಿಸಲಾಗಿದ್ದು, ಡೀಸೆಲ್ ಮೇಲಿನ ₹10 ಸುಂಕವನ್ನು ಸಂಪೂರ್ಣವಾಗಿ ಶೂನ್ಯಕ್ಕೆ ತಗ್ಗಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ವಿಶೇಷವಾಗಿ ಹಾರ್ಮುಜ್ ಜಲಸಂಧಿ (Hormuz Strait) ಪ್ರದೇಶದಲ್ಲಿ ಉಂಟಾದ ದಿಗ್ಬಂಧನದಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳು ಭಾರೀ ಏರಿಕೆಯಾಗಿವೆ. ಇರಾನ್‌ ವಿರುದ್ಧ ಅಮೇರಿಕ ಮತ್ತು ಇಸ್ರೇಲ್‌ ನಡುವಿನ ಉದ್ವಿಗ್ನ ಪರಿಸ್ಥಿತಿ ಪರಿಣಾಮವಾಗಿ ತೈಲದ ಬೆಲೆ ಬ್ಯಾರೆಲ್‌ಗೆ $114 ದಾಟಿರುವುದು ಗಮನಾರ್ಹ.

ಸುಂಕ ಕಡಿತ – ಸರ್ಕಾರದ ಪ್ರಮುಖ ನಿರ್ಧಾರ: ಈ ಬೆಳವಣಿಗೆಗಳ ನಡುವೆಯೇ, ಸಾಮಾನ್ಯ ಜನರಿಗೆ ಪರೋಕ್ಷವಾಗಿ ರಿಲೀಫ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಬಕಾರಿ ಸುಂಕದಲ್ಲಿ ದೊಡ್ಡ ಮಟ್ಟದ ಕಡಿತ ಕೈಗೊಂಡಿದೆ. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳ (OMCs) ವೆಚ್ಚ ಕಡಿಮೆಯಾಗಲಿದ್ದು, ಭವಿಷ್ಯದಲ್ಲಿ ಇಂಧನ ಬೆಲೆಯಲ್ಲಿ ಸ್ಥಿರತೆ ತರಲು ಸಹಾಯಕವಾಗಲಿದೆ.

ತಕ್ಷಣ ಲಾಭ ಇಲ್ಲ, ಆದರೆ ಭವಿಷ್ಯದಲ್ಲಿ ಇಳಿಕೆ ಸಾಧ್ಯ : ತಜ್ಞರ ಪ್ರಕಾರ, ಈ ಸುಂಕ ಕಡಿತದಿಂದ ಗ್ರಾಹಕರಿಗೆ ತಕ್ಷಣ ಪೆಟ್ರೋಲ್-ಡೀಸೆಲ್ ದರದಲ್ಲಿ ಇಳಿಕೆ ಕಾಣಿಸದೇ ಇರಬಹುದು. ಆದರೆ ಸಾರಿಗೆ ವೆಚ್ಚ ಕಡಿಮೆಯಾಗುವ ಸಾಧ್ಯತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ
ವಿಮಾನ ಇಂಧನ ವೆಚ್ಚ ಕಡಿಮೆಯಿಂದ ಟಿಕೆಟ್ ದರ ಇಳಿಕೆ ಸಾಧ್ಯ ಎನ್ನಲಾಗಿದೆ.

ಜಾಗತಿಕ ಬಿಕ್ಕಟ್ಟಿನ ಪರಿಣಾಮ : ಮಧ್ಯಪ್ರಾಚ್ಯದ ಯುದ್ಧಭೀತಿ, ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ, ಜಾಗತಿಕ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಅನೇಕ ದೇಶಗಳಲ್ಲಿ ದರ ಏರಿಕೆಯ ಆತಂಕ ಮೂಡಿಸಿದೆ. ಈ ಹಿನ್ನೆಲೆ ಭಾರತ ಮುಂಚಿತ ಕ್ರಮ ಕೈಗೊಂಡಿದೆ.

ತೈಲ ಕಂಪನಿಗಳು (OMCs) ಬೆಲೆ ಪರಿಷ್ಕರಣೆ ಕುರಿತು ಮುಂದಿನ ಕೆಲವು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು ಕೇಂದ್ರದ ಕ್ರಮದ ನಂತರ ಕೆಲವು ರಾಜ್ಯಗಳು VAT ಕಡಿತಕ್ಕೂ ಯೋಚನೆ ನಡೆದಿದೆ ಎನ್ನಲಾಗಿದೆ. ಜಾಗತಿಕ ತೈಲ ಮಾರುಕಟ್ಟೆ ಸ್ಥಿರವಾದರೆ, ಮುಂದಿನ ವಾರಗಳಲ್ಲಿ ದರ ಇಳಿಕೆ ಸಾಧ್ಯತೆ ಇದೆ.