SK Home Ad
Home ಸುದ್ದಿ ದೇಶ ಇಂದು ರಾತ್ರಿ 8:30ಕ್ಕೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಮೋದಿ

ಇಂದು ರಾತ್ರಿ 8:30ಕ್ಕೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಮೋದಿ

0
363

ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದೆ ಉಳಿದಿರುವ ಹಿನ್ನಲೆಯಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ಮುಂದುವರಿದಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8:30ಕ್ಕೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದ್ದು, ಮಹಿಳಾ ಮೀಸಲಾತಿ ವಿಚಾರವೇ ಅವರ ಭಾಷಣದ ಮುಖ್ಯ ಅಂಶವಾಗುವ ಸಾಧ್ಯತೆ ಹೆಚ್ಚಿದೆ.

ಭಾಷಣದ ವಿಷಯದ ಬಗ್ಗೆ ಪಿಎಂಒ ಯಾವುದೇ ದೃಢೀಕರಣವನ್ನು ನೀಡಿಲ್ಲವಾದರೂ, ಸರ್ಕಾರದ ವಿಧಾನದ ವಿರುದ್ಧ ವಿರೋಧ ಪಕ್ಷದ ಹಿನ್ನಡೆಯ ನಡುವೆ ಲೋಕಸಭೆಯಲ್ಲಿ ಡಿಲಿಮಿಟೇಶನ್ ಮತ್ತು ಸಂವಿಧಾನ (ತಿದ್ದುಪಡಿ) ಮಸೂದೆಗಳು ಸೋತ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಗತ್ಯವಾದ ಮೂರರಲ್ಲಿ ಎರಡು ಭಾಗದ ಬಹುಮತ ಸಿಗದ ಕಾರಣ ಮಸೂದೆ ಅಂಗೀಕಾರವಾಗಲಿಲ್ಲ. ಮತದಾನದ ವೇಳೆ 298 ಸದಸ್ಯರು ಪರವಾಗಿ ಮತ ಚಲಾಯಿಸಿದರೆ, 230 ಮಂದಿ ವಿರೋಧಿಸಿದರು. ಇದರಿಂದ ಕೇಂದ್ರ ಸರ್ಕಾರಕ್ಕೆ ರಾಜಕೀಯ ಹಿನ್ನಡೆ ಉಂಟಾಗಿದೆ.

ಸಂಸತ್ತಿನಲ್ಲಿ ಉನ್ನತ ಮಟ್ಟದ ಸಭೆಗಳ ಸರಣಿಯ ಅಧ್ಯಕ್ಷತೆ ವಹಿಸಿದ ನಂತರ ಈ ನಿರ್ದಾರ ಹೊರಬಂದಿದ್ದು ಭಾಷಣದ ಮೂಲಕ ಪಶ್ಚಿಮ ಏಷ್ಯಾದಲ್ಲಿ ಮುಂದುವರಿದ ಉದ್ವಿಗ್ನತೆ ಮತ್ತು ದೇಶೀಯ ಸಿದ್ಧತೆಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8:30 ಕ್ಕೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.