Home Advertisement
Home ಸುದ್ದಿ ದೇಶ ರಾಷ್ಟ್ರಪತಿಗೆ ಅಪಮಾನ: ಟಿಎಂಸಿ ಶೀಘ್ರ ಧೂಳೀಪಟ ಎಂದ ಮೋದಿ

ರಾಷ್ಟ್ರಪತಿಗೆ ಅಪಮಾನ: ಟಿಎಂಸಿ ಶೀಘ್ರ ಧೂಳೀಪಟ ಎಂದ ಮೋದಿ

0
106

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಡಿದ ಅವಮಾನ ಪಶ್ಚಿಮ ಬಂಗಾಳದ ಜನ ಕ್ಷಮಿಸುವುದಿಲ್ಲ. ಟಿಎಂಸಿಯ ದುರಹಂಕಾರ ಮತ್ತು ಕೊಳಕು ರಾಜಕೀಯವನ್ನು ಬಂಗಾಳದ ಜನತೆ ಶೀಘ್ರದಲ್ಲೇ ಧೂಳೀಪಟ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ಓರ್ವ ಮಹಿಳಾ ಮುಖ್ಯಮಂತ್ರಿ ಇರುವ ರಾಜ್ಯದಲ್ಲಿ, ಮಹಿಳಾ ರಾಷ್ಟ್ರಪತಿಗಳಿಗೆ ಗೌರವ ಸಿಗುತ್ತಿಲ್ಲ ಎನ್ನುವುದು ವಿಷಾದನೀಯ.

ಟಿಎಂಸಿಯ ಕೊಳಕು ರಾಜಕೀಯ ಬಹಳ ದಿನ ನಡೆಯುವುದಿಲ್ಲ. ಜನರೇ ಅವರ ಅಹಂಕಾರವನ್ನು ಶೀಘ್ರದಲ್ಲೇ ಶಮನ ಮಾಡಲಿದ್ದಾರೆ. ಬಂಗಾಳದ ಮಹಿಳೆಯರು ಮತ್ತು ಬುಡಕಟ್ಟು ಸಹೋದರ-ಸಹೋದರಿಯರು ಈ ಅವಮಾನಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಬುಡಕಟ್ಟು ಸಂಪ್ರದಾಯ ಗೌರವಿಸುವ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಷ್ಟ್ರಪತಿ ಬಂಗಾಳಕ್ಕೆ ಭೇಟಿ ನೀಡಿದ್ದರು. ಆದರೆ ಆ ಕಾರ್ಯಕ್ರಮ ಬಹಿಷ್ಕರಿಸುವ ಮೂಲಕ ಟಿಎಂಸಿ, ರಾಷ್ಟ್ರಪತಿಯವರಿಗೆ, ಬುಡಕಟ್ಟು ಸಮುದಾಯದವರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.