ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: 8ನೇ ವೇತನ ಆಯೋಗಕ್ಕೆ ಅಧಿಕೃತ ಒಪ್ಪಿಗೆ

0
63

ನವದೆಹಲಿ: ಬಹುದಿನಗಳಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ನಿರೀಕ್ಷಿಸುತ್ತಿದ್ದ 8ನೇ ವೇತನ ಆಯೋಗಕ್ಕೆ ಕೇಂದ್ರ ಸರ್ಕಾರ ಕೊನೆಗೂ ಅಧಿಕೃತವಾಗಿ ಮುನ್ನುಡಿ ಬರೆದಿದೆ. ಮಂಗಳವಾರ ನಡೆದ ಕೇಂದ್ರ ಮಂತ್ರಿಮಂಡಲ ಸಭೆಯಲ್ಲಿ 8ನೇ ವೇತನ ಆಯೋಗ ರಚನೆಗೆ ಅಂತಿಮ ಅನುಮೋದನೆ ದೊರೆತಿದ್ದು, ಆಯೋಗವು ಮುಂದಿನ 18 ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಸರ್ಕಾರ ಶೀಘ್ರದಲ್ಲೇ ವೇತನ ಆಯೋಗದ ತಾತ್ಕಾಲಿಕ ಸಮಿತಿಯನ್ನು ಕಾರ್ಯರೂಪಕ್ಕೆ ತರುವ ನಿರೀಕ್ಷೆಯಿದೆ. ವೇತನ ಆಯೋಗವನ್ನು ರಚನೆ ಮಾಡುವುದು ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಪ್ರಕ್ರಿಯೆಯಾಗಿದ್ದು, ಅದರ ಶಿಫಾರಸುಗಳ ಆಧಾರದ ಮೇಲೆ ದೇಶದಾದ್ಯಂತ ಕೇಂದ್ರ ನೌಕರರ ವೇತನ ಮತ್ತು ಪಿಂಚಣಿಗಳನ್ನು ಪರಿಷ್ಕರಿಸಲಾಗುತ್ತದೆ.

ಈ ಬಾರಿ ಆಯೋಗದ ಅಧ್ಯಕ್ಷೆಯಾಗಿ ಜಸ್ಟಿಸ್ ರಂಜನಾ ದೇಸಾಯಿ, ಸದಸ್ಯರಾಗಿ ಪ್ರೊ. ಫುಲಕ್ ಘೋಶ್, ಹಾಗೂ ಸದಸ್ಯ-ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಪಂಕಜ್ ಜೈನ್ ಅವರನ್ನು ನೇಮಕ ಮಾಡಲಾಗಿದೆ. ಆಯೋಗವು ಎಲ್ಲಾ ಕೇಂದ್ರ ನೌಕರರ ವೇತನ, ಪಿಂಚಣಿ, ಭತ್ಯೆಗಳು ಮತ್ತು ಇತರ ಹಣಕಾಸು ಸೌಲಭ್ಯಗಳ ಬಗ್ಗೆ ಅಧ್ಯಯನ ಮಾಡಿ ಶಿಫಾರಸು ನೀಡಲಿದೆ.

ಸರ್ಕಾರ ತಿಳಿಸಿರುವ ಪ್ರಕಾರ, ಹೊಸ ವೇತನ ಶಿಫಾರಸುಗಳು 2026ರ ಜನವರಿ 1ರಿಂದಲೇ ಜಾರಿಗೆ ಬರಲಿವೆ.

ಇಲ್ಲಿಯವರೆಗಿನ ವೇತನ ಆಯೋಗಗಳ ಪಟ್ಟಿ:

1ನೇ ವೇತನ ಆಯೋಗ — 1947ರ ಜುಲೈ 1

2ನೇ ವೇತನ ಆಯೋಗ — 1959ರ ಜುಲೈ 1

3ನೇ ವೇತನ ಆಯೋಗ — 1973ರ ಜನವರಿ 1

4ನೇ ವೇತನ ಆಯೋಗ — 1986

5ನೇ ವೇತನ ಆಯೋಗ — 1996

6ನೇ ವೇತನ ಆಯೋಗ — 2006

7ನೇ ವೇತನ ಆಯೋಗ — 2016

8ನೇ ವೇತನ ಆಯೋಗ — 2024 (ವರದಿ 2026ರಿಂದ ಜಾರಿಗೆ)

ಈ ನಿರ್ಧಾರವು ಲಕ್ಷಾಂತರ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಮಟ್ಟದ ಸುವಾರ್ತೆಯಾಗಿದೆ. ವೇತನ ಪರಿಷ್ಕರಣೆಗೊಂಡರೆ ಖರ್ಚು ಸಾಮರ್ಥ್ಯ ಹೆಚ್ಚಾಗುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೂ ಬಲ ಸಿಗಲಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

Previous articleನಗರಸಭಾ ಸದಸ್ಯರಿಂದ ಅವಧಿ ಕೊನೆ ಹಂತದಲ್ಲಿ ಮೋಜಿನ ಅಧ್ಯಯನ ಪ್ರವಾಸ
Next articleಪೊಲೀಸ್ ಆಕಾಂಕ್ಷಿಗಳಿಗೆ ಬಂಪರ್: 8500 ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

LEAVE A REPLY

Please enter your comment!
Please enter your name here