Home Advertisement
Home ಸುದ್ದಿ ದೇಶ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: DA ಹೆಚ್ಚಳ ಘೋಷಣೆ

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: DA ಹೆಚ್ಚಳ ಘೋಷಣೆ

0
141

ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮಹತ್ವದ ನಿರ್ಧಾರವಾಗಿ, ಕೇಂದ್ರ ಸಚಿವ ಸಂಪುಟವು ತುಟ್ಟಿ ಭತ್ಯೆ (Dearness Allowance – DA)ಯನ್ನು ಮೂಲ ವೇತನದ 58%ರಿಂದ 60%ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.2 ರಷ್ಟು ಡಿಎ ಹೆಚ್ಚಳಕ್ಕೆ ಸಂಪುಟ ಅನುಮೋದನೆ ನೀಡಿದ್ದು. ಈ ಹೆಚ್ಚಳವು 2026ರ ಜನವರಿ 1ರಿಂದ ಅನ್ವಯವಾಗಲಿದ್ದು, ಮೊದಲ ಮೂರು ತಿಂಗಳ ಬಾಕಿ ಮೊತ್ತವನ್ನು ಸಹ ಒಟ್ಟಿಗೆ ನೀಡಲಾಗುತ್ತದೆ.

ಈ ನಿರ್ಧಾರದಿಂದ ದೇಶದಾದ್ಯಂತ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ 68 ಲಕ್ಷ ಪಿಂಚಣಿದಾರರಿಗೆ ನೇರ ಲಾಭ ದೊರೆಯಲಿದೆ. ಹಣದುಬ್ಬರವನ್ನು ಸಮತೋಲನಗೊಳಿಸಲು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಆಧಾರವಾಗಿ ಈ ತುಟ್ಟಿ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ.

ಕಡಿಮೆ ವೇತನದ ಉದ್ಯೋಗಿಗಳಿಗೆ ಹೆಚ್ಚಿನ ಅನುಪಾತದ ಲಾಭ ದೊರೆಯುವ ನಿರೀಕ್ಷೆಯಿದೆ. ಉದಾಹರಣೆಗೆ, ಲೆವೆಲ್-1 ಹಂತದಲ್ಲಿ ₹18,000 ಮೂಲ ವೇತನ ಹೊಂದಿರುವ ಉದ್ಯೋಗಿಗೆ ಪ್ರತಿ ತಿಂಗಳು ಸುಮಾರು ₹360 ಹೆಚ್ಚುವರಿ ಲಾಭ ಸಿಗಲಿದೆ. ಈ ಹೆಚ್ಚಳವು ಕುಟುಂಬದ ಖರ್ಚುಗಳನ್ನು ನಿರ್ವಹಿಸಲು ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಕೇಂದ್ರ ಸರ್ಕಾರದ ಈ ಘೋಷಣೆಯ ನಡುವೆ 8ನೇ ವೇತನ ಆಯೋಗ ರಚನೆಗೆ ಒತ್ತಾಯಗಳು ಮತ್ತಷ್ಟು ಜೋರಾಗಿವೆ. ವಿವಿಧ ಕಾರ್ಮಿಕ ಸಂಘಟನೆಗಳು, ವೇತನ ವಿನ್ಯಾಸದಲ್ಲಿ ಸಮಗ್ರ ಪರಿಷ್ಕರಣೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.