ಧರ್ಮವೇ ಮನುಷ್ಯತ್ವದ ಮಾನದಂಡ

0
67

ಇಂದಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಬರೆದಿರುವ ಗುರುಬೋಧೆ

ಇಷ್ಟವಾದುದನ್ನು ಕಷ್ಟ ಪಟ್ಟು ಪಡೆದು ಊಟ ಮಾಡುವುದು, ದಣಿವಾದಾಗ ಮಲಗಿ ನಿದ್ರೆ ಮಾಡುವುದು, ತನಗಿಂತ ಬಲಿಷ್ಠರಾದವರನ್ನು ಕಂಡು ಭಯ ಪಡುವುದು ಮತ್ತು ಸಾಂಸಾರಿಕ ಸುಖವನ್ನು ಅನುಭವಿಸುವುದು ಈ ಎಲ್ಲ ಕಾರ್ಯಗಳನ್ನು ಕೇವಲ ಮನುಷ್ಯ ಮಾತ್ರ ಮಾಡುವುದಿಲ್ಲ. ಪ್ರಪಂಚದ ಮನುಷ್ಯೇತರ ಪ್ರಾಣಿಗಳೂ ಮಾಡುತ್ತವೆ. ಮನುಷ್ಯನು ತನ್ನ ಬದುಕನ್ನು ಇವುಗಳಿಗಷ್ಟೇ ಸೀಮಿತಗೊಳಿಸಿದರೆ ಮನುಷ್ಯನಿಗೆ ಮತ್ತು ಇನ್ನಿತರ ಪ್ರಾಣಿಗಳಿಗೆ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ.

ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ಶ್ರೇಷ್ಠನನ್ನಾಗಿಸುವುದು ಅವನು ಅನುಸರಿಸುವ ಧರ್ಮ ಮತ್ತು ಸಂಪಾದಿಸಿದ ಜ್ಞಾನ. ಅಂತೆಯೇ ಭರ್ತೃಹರಿಗಳು ಮನುಷ್ಯನನ್ನು ಹೊರತುಪಡಿಸಿ ಪ್ರಪಂಚದ ಯಾವ ಪ್ರಾಣಿಗಳಿಗೂ ಧರ್ಮವನ್ನು ಆಚರಿಸಲು ಮತ್ತು ಜ್ಞಾನವನ್ನ ಗಳಿಸಲು ಅವಕಾಶವಿರುವುದಿಲ್ಲ. ಮನುಷ್ಯನಿಗೆ ಮಾತ್ರ ಧರ್ಮವನ್ನು ಆಚಿರಿಸುವ ಅವಕಾಶವಿದೆ. ಆದುದರಿಂದ ಪ್ರತಿಯೊಬ್ಬ ಮನುಷ್ಯನೂ ಇದನ್ನು ಅವಶ್ಯವಾಗಿ ಸಂಪಾದಿಸಬೇಕು.

ಈ ಧರ್ಮವೇ ಮನುಷ್ಯನನ್ನು ಇತರ ಪ್ರಾಣಿಗಿಂತ ಶ್ರೇಷ್ಠವಾಗಿಸಲು ಕಾರಣವಾಗಿದೆ.ವಿದ್ಯೆ, ತಪಸ್ಸು, ದಾನ, ಜ್ಞಾನ, ಶೀಲ(ಸಚ್ಚಾರಿತ್ರ‍್ಯ) ಸದ್ಗುಣ ಮತ್ತು ಧರ್ಮ ಇವುಗಳಲ್ಲಿ ಕೊನೆಯ ಪಕ್ಷ ಒಂದು ಗುಣವಾದರೂ ಯಾರಲ್ಲಿ ಇರುವುದಿಲ್ಲವೋ ಆವರು ಭೂಮಿಗೆ ಭಾರವಾಗಿ ಬೂಮಿಯ ಮೇಲೆ ಸಂಚರಿಸುವ ಮನುಷ್ಯ ರೂಪದ ಮೃಗಗಳಿದ್ದಂತೆ. ಆದ್ದರಿಂದ ಮನುಷ್ಯ ಪಶುವಾಗದೇ ಮನುಷ್ಯನಾಗಿ ಉಳಿಯಬೇಕಾದರೆ ಧರ್ಮ ಮತ್ತು ಧರ್ಮದ ಪ್ರಮುಖ ಅಂಗಗಳಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯೆ, ಕ್ಷಮೆ, ದಾನ, ಪೂಜೆ, ಜಪ ಮತ್ತು ಧ್ಯಾನ ಎಂಬ ಹತ್ತು ಮೌಲ್ಯಗಳನ್ನು ಪ್ರತಿನಿತ್ಯ ಪರಿಪಾಲಿಸಬೇಕು.

ಹಗಲುಗನಸು ಕಾಣುವ ಅಗಸನೊರ್ವನ ಮಾತು ಕೇಳಿ ಶ್ರೀರಾಮನು ಸೀತೆಯನ್ನು ಕಾಡಲ್ಲಿ ಬಿಟ್ಟು ಬರಲು ಲಕ್ಷಣನಿಗೆ ಹೇಳಿದನು. ಅಣ್ಣನ ಆದೇಶವೆಂದು ತಿಳಿದು ಲಕ್ಷ್ಮಣನು ಒಲ್ಲದ ಮನಸ್ಸಿನಿಂದ ಸೀತೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ರಥದ ಕೆಳಗೆ ಇಳಿಸಿ, ಮರಳಿ ಬರುವಾಗ ಸೀತೆಯು ಲಕ್ಷ್ಮಣನಿಗೆ “ಯಾವ ಕಾರಣಕ್ಕಾಗಿ ನಿನ್ನ ಅಣ್ಣ ಶ್ರೀರಾಮನು ನನ್ನನ್ನು ಕಾಡಿಗೆ ಬಿಟ್ಟು ಬರಲು ಹೇಳಿದ್ದಾನೆ” ಎಂದು ಕೇಳಿದಾಗ ಲಕ್ಷ್ಮಣನು “ಒಬ್ಬ ಅಗಸನ ಮಾತನ್ನು ಕೇಳಿ ನಿನ್ನನ್ನು ಬಿಡುವ ನಿರ್ಧಾರ ಮಾಡಿದ್ದಾನೆ” ಎಂದು ಹೇಳಿದನು.

Previous articleಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ
Next article2ನೇ ಅಣು ವಿದ್ಯುತ್ ಸ್ಥಾಪನೆ ಚರ್ಚೆ: ಅಣು ವಿದ್ಯುತ್ ಸೆರಗಿನಲ್ಲಿ ಕೆಂಡ

LEAVE A REPLY

Please enter your comment!
Please enter your name here