Home Advertisement
Home ಸುದ್ದಿ ಸೊಸೆ ಮಾತಿಗೆ ನೊಂದು ಮಾವ ಆತ್ಮಹತ್ಯೆ

ಸೊಸೆ ಮಾತಿಗೆ ನೊಂದು ಮಾವ ಆತ್ಮಹತ್ಯೆ

0
9

ಸೋಲಾಪುರ: ಮನೆಯಿಂದ ಹೊರ ಹಾಕುವೆ ಎಂಬ ಸೊಸೆಯ ಮಾತಿನಿಂದ ನೊಂದ ಮಾವ ವಿಷ ಸೇವಿಸಿ ಆತ್ಮಹತ್ಯೆ ಘಟನೆ ಬಾರ್ಶಿ ತಾಲೂಕಿನಲ್ಲಿ ಬುಧವಾರ ಜರುಗಿದೆ.

ಸರ್ಜೆರಾವ್ (78) ಸ್ವಂತ ಮನೆಯಲ್ಲಿಯೇ ಪರಕೀಯನಂತೆ ಕಾಣುವ ಸೊಸೆಯ ಅವಮಾನ, ಮನಸ್ಸಿಗೆ ನೋವು ತರುವಂತಹ ಮಾತು ಹಾಗೂ ಮನೆಯ ಹೊರಕ್ಕೆ ತಳ್ಳುವ ಹೆದರಿಕೆ ಹಾಕುವ ಸೊಸೆಯ ಮಾತುಗಳಿಗೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತನ್ನ ಮಗ ಮಹೇಶ-ಸೊಸೆ ಸಾರಿಕಾಳೊಂದಿಗೆ ನಾಯಿಕವಾಡಿ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಇವರ ಇನ್ನೊಬ್ಬ ಮಗ ತಾಯಿ (ಸರ್ಜೆರಾವರ ಪತ್ನಿ) ಜತೆ ಕುರ್ಡುವಾಡಿ ರಸ್ತೆಯಲ್ಲಿನ ಮನೆಯಲ್ಲಿದ್ದರು.

ಕೆಲ ತಿಂಗಳುಗಳಿಂದ ಸೊಸೆ ಸಾರಿಕಾ ಮಾವನನ್ನು ಮೇಲಿಂದ ಮೇಲೆ ಸಣ್ಣಪುಟ್ಟ ಕಾರಣಗಳಿಗೆ ಅವಮಾನಿಸುತ್ತಿದ್ದಳು. ಸೊಸೆ ಸಾರಿಕಾ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.