SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ಸುಂದರಿಯ ಮೋಹದ ಬಲೆಗೆ ಬಿದ್ದ ಯುವಕ ಕಿಡ್ನ್ಯಾಪ್; ಆಮೇಲೇನಾಯ್ತು ಗೊತ್ತಾ?

ಸಿಲಿಕಾನ್ ಸಿಟಿಯಲ್ಲಿ ಸುಂದರಿಯ ಮೋಹದ ಬಲೆಗೆ ಬಿದ್ದ ಯುವಕ ಕಿಡ್ನ್ಯಾಪ್; ಆಮೇಲೇನಾಯ್ತು ಗೊತ್ತಾ?

0
56

ಬೆಂಗಳೂರು: ಡೇಟಿಂಗ್ ಆಪ್ ಮೂಲಕ ಪರಿಚಯವಾದ ಯುವಕನನ್ನು ಪಬ್‌ಗೆ ಕರೆದು ಅಪಹರಿಸಿ 3.7 ಲಕ್ಷರೂ ದೋಚಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಿ ಹಾಗೂ ಚಂದಾಪೂರ ನಿವಾಸಿಯೂ ಆಗಿರುವ ಜೇಕಬ್(33). ಹಲವು ದಿನಗಳಿಂದ ಡೇಟಿಂಗ್ ಆಪ್ ಬಳಸುತ್ತಿದ್ದ ಜೇಕಬ್, ಇತ್ತಿಚಿಗೆ ಆತನಿಗೆ ಪೂನಂ ಎಂಬ ಹೆಸರಿನ ಯುವತಿ ಪರಿಚಯವಾಗಿತ್ತು. ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ಎಂದು ಪರಿಚಯಿಸಿದ್ದ ಯುವತಿ, ಜೇಕಬ್‌ನೊಂದಿಗೆ ಮೊಬೈಲ್ ನಂಬರ್ ಹಂಚಿಕೊಂಡು ಮಾತನಾಡುತ್ತಿದ್ದಳು.

ಆ.19 ರಾತ್ರಿ ಎಲೆಕ್ಟ್ರಾನಿಕ್ ಸಿಟಿಯ ಹುಲಿಮಂಗಲ ಮುಖ್ಯರಸ್ತೆಯ ಪಬ್ ಒಂದರ ಬಳಿ ಸಿಗುವಂತೆ ಪೂನಂ ಆತನಿಗೆ ಆಹ್ವಾನಿಸಿದಳು. ರಾತ್ರಿ ಜೇಕಬ್ 9.45 ಸುಮಾರಿಗೆ ಸ್ಥಳಕ್ಕೆ ತಲುಪಿದನು. ಪೂನಂ ಬಿಳಿ ಬಣ್ಣದ ಎಸ್ಯುವಿ ಕಾರಿನಲ್ಲಿ ಬಂದಿದ್ದಳು. ಕಾರಿಗೆ ಇಂಧನ ತುಂಬಿಸಿಕೊಂಡು ಬರೋಣ ಎಂದು ಜೇಕಬ್‌ನನ್ನು ಕಾರಿಗೆ ಹತ್ತಿಸಿಕೊಂಡು ಶೌಚಾಲಯಕ್ಕೆ ಹೋಗಬೇಕು ಎಂದು ನೆಪ ಹೇಳಿ ಕಾರನ್ನು ಕತ್ತಲಾದ ನಿರ್ಜಲ ಸ್ಥಳಕ್ಕೆ ನಿಲ್ಲಿಸಿದಳು.

ಈ ವೇಳೆ ಇದ್ದಕ್ಕಿದಂತೆ ನಾಲ್ವರು ಅಪರಿಚಿತ ವ್ಯಕ್ತಿಗಳು ಜೇಕಬ್‌ ಅನ್ನು ಬೆದರಿಸಿ ಅದೇ ಕಾರಿನಲ್ಲಿ ಕರೆದೊಯ್ದು ನಂತರ ಬೇರೆ ಬೂದು ಬಣ್ಣದ ಕಾರಿನಲ್ಲಿ ನಗರದ ವಿವಿಧ ಭಾಗಗಳಲ್ಲಿ ಸುತ್ತಾಡಿಸಿ ಆ.20ರ ಬೆಳಗಿನ ಜಾವ ಜೇಕಬ್‌ನ ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಬದಲಿಸಿ 3.7 ಲಕ್ಷ ರೂಪಾಯಿ ಬೇರೊಂದು ಖಾತೆಗೆ ವರ್ಗಾಯಿಸಿ ಬೆಳ್ಳಗೆ 10 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಜೇಕಬ್‌ನಿಗೆ ಇಳಿಸಿ, ಪೊಲೀಸರಿಗೆ ದೂರು ನೀಡಿದರೆ ನೆಟ್ಟಗಿರುವುದಿಲ್ಲ ಎಂದು ಬೇದರಿಕೆ ಹಾಕಿ ಪರಾರಿಯಾಗಿದ್ದಾರೆ.
ಮನೆಗೆ ಮರಳಿದ ಜೇಕಬ್ ಮನೆಯವರಿಗೆ ಯುವತಿ ಮೋಸ ಮಾಡಿರುವ ವಿಷಯ ತಿಳಿಸಿ, ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ಪಡೆದು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೂರಿನ ಆಧಾರದ ಮೇಲೆ ಅಪಹರಣ ಮತ್ತು ಸುಲಿಗೆ ಪ್ರಕರಣ ಕೇಸ್ ದಾಖಲಿಸಿಕೊಂಡಿದ್ದಾರೆ.