9 ಗಂಟೆಯಲ್ಲಿ 31 ಟನ್ ಕಬ್ಬು ಹೇರಿದ ಯುವಕ

0
13

ಬಾಗಲಕೋಟೆ(ಕಲಾದಗಿ): ಕೇವಲ 9 ಗಂಟೆಯಲ್ಲಿ 31 ಟನ್ ಕಬ್ಬನ್ನು ತಾನೊಬ್ಬನೇ ಟ್ರ್ಯಾಕ್ಟರ್‌ಗೆ ಲೋಡ್ ಮಾಡುವುದರ ಮೂಲಕ ಸಮೀಪದ ಅಂಕಲಗಿಯ ಅಭಿಷೇಕ ಚಿಕ್ಕಪ್ಪ ಮಾದರ ಸಾಹಸ ಮೆರೆದಿದ್ದಾನೆ.
ಮಂಗಳವಾರದಂದು ಶ್ರೀಕಾಂತ ಮಾದರ ಎಂಬುವವರ ಜಮೀನಿನಲ್ಲಿ ಕಬ್ಬನ್ನು ಕಟಾವು ಮಾಡುತ್ತಿದ್ದಾಗ ಅಭಿಷೇಕ್ ಈ ಸಾಧನೆ ಮಾಡಿದ್ದು, ಗುಲಾಲನ್ನು ತೂರುತ್ತಾ, ಊರಲ್ಲಿ ಮೆರವಣಿಗೆ ಮಾಡಿ ಸಂಭ್ರಮಾಚರಣೆ ಮಾಡಲಾಯಿತು. ಜೊತೆಗೆ ಸಾಧನೆ ಮಾಡಿದ ಯುವಕನನ್ನು ಊರವರು ಬೆಳ್ಳಿಯ ಖಡೆಯನ್ನು ಕೈಗೆ ತೊಡಿಸುವುದರ ಮೂಲಕ ಅಭಿನಂದಿಸಿದರು.

Previous articleಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ಬಿಡುಗಡೆ
Next articleಹೆಸ್ಕಾಂ ನಿವೃತ್ತ ಇಂಜಿನಿಯರ್ ಮನೆಯಲ್ಲಿ 97 ಲಕ್ಷ ನಗದು ಪತ್ತೆ