ಕೂಡ್ಲಿಗಿ: ಹೊಟ್ಟೆನೋವು ತಾಳದ ವಿದ್ಯಾರ್ಥಿನಿಯೋರ್ವಳು ನೇಣು ಹಾಕಿಕೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ.
ಎಂ. ಕವನ(೧೮) ಆತ್ಮಹತ್ಯೆಗೆ ಶರಣಾದ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಳೆ. ಕಳೆದ ನಾಲ್ಕೈದು ತಿಂಗಳುಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡರು ಫಲಕಾರಿಯಾಗದೆ, ಚಿಂತಿತಳಾಗಿದ್ದಾಳೆ. ಭಾನುವಾರ ಮಧ್ಯಾಹ್ನ ಪುನಃ ನೋವು ಕಾಣಿಸಿಕೊಂಡಿದೆ. ನಾಗರಪಂಚಮಿ ಹಬ್ಬಕ್ಕೆ ಹೊಸಬಟ್ಟೆ ಹಾಕಿಕೊಂಡು ಬರುವುದಾಗಿ ಮನೆಯ ಬೆಡ್ ರೂಂಗೆ ಹೋದವಳು, ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.