ಬೆಂಗಳೂರು: ಸ್ಟಾರ್ಟ್ ಅಪ್‌ಗಳಿಗೆ ಕರ್ನಾಟಕ ರಾಜ್ಯವು ನೆಚ್ಚಿನ ತಾಣವಾಗಿದೆ ಎಂದು ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಉದ್ಯಮ ಸ್ನೇಹಿ ನೀತಿಗಳ ಪರಿಣಾಮ ನಮ್ಮ ರಾಜ್ಯವು ಸ್ಟಾರ್ಟ್ ಅಪ್ ಗಳ ನೆಚ್ಚಿನ ತಾಣವಾಗಿದೆ. 2022 ರಲ್ಲಿ 2,568 ರಷ್ಟಿದ್ದ ಸ್ಟಾರ್ಟ್ ಅಪ್ ಸಂಖ್ಯೆ 2023ಕ್ಕೆ 3,036ಕ್ಕೆ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಶೇ. 18.2 ರಷ್ಟು ಏರಿಕೆ ದಾಖಲಿಸಿದ್ದು ದೇಶದ ಒಟ್ಟು ಸ್ಟಾರ್ಟ್ ಅಪ್ ಗಳ ಪೈಕಿ ಶೇ. 8.7 ರಷ್ಟು ಪಾಲನ್ನು ಕರ್ನಾಟಕ ಹೊಂದಿದ್ದು ಸುಸ್ಥಿರ ಅಭಿವೃದ್ಧಿಯ ಕಡೆ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.