ಸಾಧನೆ ಅಮರ; ಸಿರಿವಂತಿಕೆ ನಶ್ವರ

0
10

ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ. ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.
ಅಲ್ಲಮಪ್ರಭುದೇವರು ೧೨ ನೇ ಶತಮಾನದ ಶರಣ ಚಳವಳಿ ಕಾಯಕ ಮತ್ತು ದಾಸೋಹ ತತ್ವವನ್ನು ಜಗತ್ತಿಗೆ ಪರಿಚಯಿಸಿತು. ದುಡಿದು ಉಣ್ಣುವುದು ಕಾಯಕ ಸಂಪಾದಿಸುವುದರಲ್ಲಿ ಅಲ್ಪವನ್ನಾದರೂ ಪರರಿಗೆ ಕೊಡುವುದು ದಾಸೋಹ. ಬದುಕಿಗೆ ಅಗತ್ಯವಾದುದನ್ನು ನಮ್ಮ ಶ್ರಮದ ಮೂಲಕಗಳಿಸುವುದು ಈ ಮಾತಿನ ಸಾರಾಂಶ ಅಗತ್ಯಕ್ಕಿಂತ ಹೆಚ್ಚು ಸಂಗ್ರಹ ಮಾಡುವುದನ್ನು ದಾರ್ಶನಿಕರು ವಿರೋಧಿಸುತ್ತಾರೆ ಆದರೆ ಆಧುನಿಕ ಜಗತ್ತು ವಿಪರೀತ ಆಸೆ ಆಮಿಷಗಳಿಗೆ ಒಳಗಾಗಿದೆ ವಸ್ತುಗಳ ಬಗೆಗಿನ ವಿಪರೀತ ಸೆಳೆತ ಅಗತ್ಯವಿಲ್ಲದಿದ್ದರೂ ಖರೀದಿಸುವ ಮೂಲಕ ಅಗತ್ಯವಲ್ಲದ ವಸ್ತುಗಳ ಬಗ್ಗೆ ವ್ಯಾಮೋಹ ಹೆಚ್ಚುತ್ತಿರುವುದು ಒಳ್ಳೆಯದಲ್ಲ. ಆಡಂಬರದ ತೋರಿಕೆಯ ಜೀವನಕ್ಕಿಂತ ಸರಳ, ಸಹಜ ಜೀವನ ಶೈಲಿ ಮನುಷ್ಯನಿಗೆ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಏಕೆಂದರೆ ಈ ಜಗತ್ತು ಸ್ಮರಿಸುವುದು ಸಾಧಕರನ್ನೇ ಹೊರತು ಶ್ರೀಮಂತರನ್ನಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಹೇಗಾದರೂ ಮಾಡಿ ಹಣ, ಆಸ್ತಿ, ಅಧಿಕಾರಗಳಿಸಿಕೊಳ್ಳಬೇಕೆಂಬ ಹಂಬಲಕ್ಕೆ ಬಿದ್ದಿರುವ ಮಾನವ ಸುಳ್ಳು ಮೋಸ ವಂಚನೆಯ ಹಾದಿ ಹಿಡಿದು ಸ್ವಾರ್ಥಕ್ಕಾಗಿ ಸಮಾಜದ ನೆಮ್ಮದಿ ಕೆಡಿಸುತ್ತಿದ್ದಾನೆ.
ನಿಶ್ಚಿತವಾಗಿ ಮನುಷ್ಯನ ಬದುಕಿಗೆ ಬೇಕಿರುವುದು ನೀರು, ಆಹಾರ ಹಾಗೂ ವಸ್ತ್ರ ಸೇರಿದಂತೆ ಕೆಲವು ಅನಿವಾರ್ಯತೆಗಳೇ ವಿನಃ ಅನಗತ್ಯ ಆಡಂಬರಗಳಲ್ಲ ಪುಕ್ಕಟೆಯಾಗಿ ಸಿಗುವ ಸೌಲಭ್ಯಗಳಿಗಾಗಿ ಹಾತೊರೆಯುವ ಬದಲು ಶ್ರಮದ ಮೂಲಕ ಗಳಿಸುದದರಲ್ಲಿ ಗೌರವದ ಜೀವನ ನಡೆಸೋಣ ಯಾರೋ ಕೊಡುವ ಗ್ಯಾರಂಟಿ ವಸ್ತುಗಳಿಗಾಗಿ ಹಂಬಲಿಸುವದು ಸರಿಯಲ್ಲ ಹಾಗೆಯೇ ನಮ್ಮ ಸ್ವಾರ್ಥಕ್ಕಾಗಿ ಗ್ಯಾರಂಟಿಗಳ ಆಸೆ ಭರವಸೆ ಕೊಡುವುದೂ ತಪ್ಪು.

Previous articleಸಚಿವಗಿರಿ ಜೊತೆಗೆ ಮನೆಗೆ ಮಹಾಲಕ್ಷ್ಮೀ
Next articleನೂತನ ಸಚಿವರಿಗೆ ಭಾನುವಾರ ಭರ್ಜರಿ ಸ್ವಾಗತ