ಸರ್ಕಾರಕ್ಕೆ ಕಿಚ್ಚನ ಪತ್ರ: ರಾಜ್ಯ ಪ್ರಶಸ್ತಿ ನಿರಾಕರಿಸಿದ ಸುದೀಪ್

0
34

ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ ಜನರನ್ನು ರಂಜಿಸುವ ನನ್ನ ಕಾರ್ಯ ಸದಾ ಸಂತಸ ತರಲಿದೆ.

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿದ್ದ 2019ನೇ ಸಾಲಿನ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಸುದೀಪ್‌ ನಿರಾಕರಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ‘ಆಯ್ಕೆ ಮಾಡಿದ ತೀರ್ಪುಗಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಹಲವಾರು ವರ್ಷಗಳಿಂದ ಪ್ರಶಸ್ತಿ ಪಡೆಯುವುದನ್ನು ನಿಲ್ಲಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ಕಲೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡ ಅನೇಕ ಅರ್ಹ ನಟರಿದ್ದಾರೆ. ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುವುದಕ್ಕಿಂತ, ಆ ಅರ್ಹರೊಬ್ಬರು ಪ್ರಶಸ್ತಿ ಪಡೆಯುವುದನ್ನು ನೋಡುವುದು ನನಗೆ ಸಂತೋಷವೆನಿಸುತ್ತದೆ. ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ ಜನರನ್ನು ರಂಜಿಸುವ ನನ್ನ ಕಾರ್ಯ ಸದಾ ಸಂತಸ ತರಲಿದೆ. ಈ ನನ್ನ ನಿರ್ಧಾರ ಉಂಟು ಮಾಡಬಹುದಾದ ನಿರಾಶೆಗಾಗಿ ನಾನು ತೀರ್ಪುಗಾರರ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ನೀವು ನಾನು ಆಯ್ಕೆ ಮಾಡಿದ ರೀತಿಯನ್ನು ಗೌರವಿಸುವಿರಿ ಹಾಗೂ ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದಿದ್ದಾರೆ.

Previous article“ನಮ್ಮನ್ನು ಕ್ಷಮಿಸಿ” ಎಂದು ಆತ್ಮಹತ್ಯೆಗೆ ಶರಣಾದ ದಂಪತಿ
Next articleಮಸಾಜ್‌ ಪಾರ್ಲರ್‌ ಮೇಲೆ ದಾಳಿ ಪ್ರಕರಣ: ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರ ಬಂಧನ