ಸಮುದ್ರ ಕಿನಾರೆಗೆ ಅಪ್ಪಳಿಸಿದ ಮೀನುಗಾರಿಕೆ ಬೋಟ್ : 12 ಲಕ್ಷ ರೂ. ನಷ್ಟ

0
7

ಕುಂದಾಪುರ : ಬೆಂಗ್ರೆ ನಿವಾಸಿ ಸಂದೀಪ್ ತೋಳಾರ್ ಮಾಲೀಕತ್ವದ ಶ್ರೀ ದುರ್ಗಾಪರಮೇಶ್ವರೀ ರುಕ್ಮಯ್ಯ ಹೆಸರಿನ ಮೀನುಗರಿಕಾ ಬೋಟ್ ಒಂದು ಪಾರಂಪಳ್ಳಿ ಪಡುಕರೆ ಸಮೀಪ ಕಡಲಲ್ಲಿ ಮುಳುಗಿದ ಬಗ್ಗೆ ವರದಿಯಾಗಿದೆ. ಮೀನುಗಾರಿಕೆ ನಡೆಸುತ್ತಿರುವಾಗ ತೇಲಿ ಬಂದ ಬಲೆಯು ಬೋಟಿನ ಫ್ಯಾನಿಗೆ ಸಿಲುಕಿದ ಪರಿಣಾಮ ಬೋಟ್ ನ ಇಂಜಿನ್ ಸ್ಥಬ್ದಗೊಂಡಿತ್ತು. ಅಕ್ಕಪಕ್ಕದ ಬೋಟ್ ಗಳು ಸಹಾಯಕ್ಕೆ ಬಂದರೂ ಕೂಡ ಪ್ರಯೋಜನವಾಗದೆ ಗಾಳಿಯ ರಭಸಕ್ಕೆ ಮರಳು ದಿಬ್ಬಕ್ಕೆ ಬೊಟ್ ಅಪ್ಪಳಿಸಿ ಮುಳುಗಲಾರಂಭಿಸಿತು.ಬೋಟಿನಲ್ಲಿದ್ದ ಕಾರ್ಮಿಕರನ್ನು ಬೇರೆ ಬೋಟಿನವರು ಸುರಕ್ಷಿತವಾಗಿ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು. ಆದರೆ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಹಾಗೂ ಮೀನುಗಾರಿಕೆ ಪರಿಕರಗಳು ಬೋಟಿನೊಂದಿಗೆ ಮುಳುಗಡೆಯಾಗಿದ್ದು ಸುಮಾರು ಅಂದಾಜು 12 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ.

Previous articleಕಾರು-ದ್ವಿಚಕ್ರವಾಹನ ಮಧ್ಯೆ ಡಿಕ್ಕಿ: ಕಾರ್ಮಿಕ ಸಾವು
Next articleಜೂನ್ ೪ ರಂದು ಹೈದ್ರಾಬಾದ್ ಚಲೋ