ಶಿಷ್ಟ ರಕ್ಷಣೆಗೆ ದುಷ್ಟ ನಿಗ್ರಹ ಅನಿವಾರ್ಯ

0
12
PRATHAPPHOTOS.COM

ಅನೇಕ ಜನ ವಿಚಾರವಂತರು, ಯುದ್ಧ ಮತ್ತು ರಕ್ತಪಾತ ಇರಲೇಬಾರದು ಎಂದು ಮಹಾಭಾರತದ ಯುದ್ಧವನ್ನು ವಿಮರ್ಶೆ ಮಾಡಿ ಖಂಡನೆ ಮಾಡಿದ್ದಾರೆ. ಯಾಕೆ ಬೇಕಾಗಿತ್ತು ಈ ಯುದ್ಧ ಮತ್ತು ರಕ್ತಪಾತಗಳು….
ನಿಜ; ಯುದ್ಧ ಎಲ್ಲಿವರೆಗೂ ನಡೆಯುವುದಿಲ್ಲವೋ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದಿಲ್ಲವೋ ಅಲ್ಲಿವರೆಗೂ ಸಮಾಜ ಸುಖಿಯಾಗಿರಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ಸತ್ಯ.
ಶಿಷ್ಟರ ರಕ್ಷಣೆಗಾಗಿ ದುಷ್ಟರ ನಿಗ್ರಹ ಅಥವಾ ಸಂಹಾರ ಅನಿವಾರ್ಯವಾಗುತ್ತದೆ. ಒಬ್ಬ ಮನುಷ್ಯನು ವಿಷಪೂರಿತವಾದ ಜಂತುಗಳು ಕಷ್ಟಕೊಡುತ್ತಾನೆ. ಒಬ್ಬರನಲ್ಲ ಹತ್ತಾರು ಜನರಿಗೆ ಪೀಡೆಯನ್ನು ಕೊಡುತ್ತಾ ಊರಲ್ಲೆಲ್ಲ ಓಡಾಡುತ್ತಾ ಪೀಡೆ ಕೊಡುತ್ತಾ ಇರುವಾಗ ಅಂತಹ ದುಷ್ಟ ಜಂತುಗಳನ್ನು ಹೊಡೆದು ಸಾಯಿಸುವುದು ಅಧರ್ಮವಲ್ಲವೆಂದೇ ಶ್ರೀಕೃಷ್ಣ ಗೀತೋಪದೇಶ ಮಾಡಿದ್ದಾನೆ.
ತಮ್ಮ ಪಾಡಿಗೆ ತಾವುಗಳು ಇದ್ದರೆ ಸುಮ್ಮನೆ ಬಿಡಬಹುದು. ಊರಲ್ಲಿ ಇದ್ದಕ್ಕಿದ್ದಂತೆ, ದೃಷ್ಟ ಕಾಡುಪ್ರಾಣಿಗಳ ಪೀಡೆ ಕೊಡುತ್ತಿವೆ ಎಂದರೆ ಕೂಡಲೇ ಅವುಗಳನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುತ್ತಾರೋ ಅಥವಾ ಗುಂಡುಕ್ಕಿ ಕೊಲ್ಲುತ್ತಾರೆ. ಸಾವಿರ ಜನ ರಕ್ಷಣೆಗೆ ಬಂದ ಹುಲಿಯನ್ನು ಬಲೆಗೆ ಸಿಗದೇ ಹೋದಲ್ಲಿ ಅನಿವಾರ್ಯ ಸಂದರ್ಭದಲ್ಲಿ ಗುಂಡು ಹಾಕಿ ಕೊಲ್ಲುತ್ತಾರೆ. ಇಂದಿನ ಸಮಾಜದಲ್ಲಿ ಅನೇಕರು ದುಷ್ಟರು, ಕಾಮುಕರು, ದುರ್ಜನರ ದುರ್ದೃಷ್ಟಿಗೆ ಬಲಿಯಾಗಿ ಅನೇಕ ಜನರು ಪ್ರಾಣ, ಮಾನ ಕಳೆದುಕೊಂಡಿದ್ದಾರೆ ದುಃಖವನ್ನು ಅನುಭವಿಸುತ್ತಿದ್ದಾರೆ.
ಅಂಥವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಇಡೀ ಸಮಾಜಕ್ಕೆ ಸಮಾಜವೇ ಒಕ್ಕೊರಲ್ಲಿನಿಂದ ಹೇಳುತ್ತಿವೆ. ತತ್ವ ಸಿದ್ಧಾಂತಗಳೇನೇ ಇರಲಿ. ಜೀವನಾಶವನ್ನು ಯಾವ ಧರ್ಮವೂ ಉಪದೇಶಿಸಿಲ್ಲ. ಮತಧರ್ಮ ಸಿದ್ದಾಂತ ಪ್ರಚಾರ ಮಾಡಲಿ ತೊಂದರೆ ಇಲ್ಲ. ಬದಲು ಕೊಲ್ಲುವಂತೆ ಯಾವುದೇ ಮತಧರ್ಮಗಳು ಹೇಳುವದಿಲ್ಲ. ಉತ್ತಮ ಉಪದೇಶಗಳಿಗೂ ಮೀರಿ ಉದ್ಧಟತನ ಪ್ರದರ್ಶಿಸುವವರಿಗೆ ಶಿಕ್ಷೆಯಾಗಲೇಬೇಕು. ಈ ದೃಷ್ಟಿಯನ್ನು ಮನಗಂಡೇ ಶ್ರೀಕೃಷ್ಣ ಪರಮಾತ್ಮ ಪಾಂಡವರಿಗೆ ಯುದ್ಧವನ್ನು ಮಾಡಲು ಅನುಮತಿ ನೀಡಿದ್ದು. ಕೋಟಿ ಕೋಟಿ ಜನರ ಜನರಿಗೆ ಧರ್ಮವನ್ನು ಮಾಡುವುದಕ್ಕೆ ನೆಮ್ಮದಿಯಿಂದ ಜೀವನ ಮಾಡುವುದಕ್ಕೆ ಈ ಸ್ವಾರ್ಥ ಪರರಾದ ಕೌರವರಿಂದ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಯುದ್ಧ ಸಾರಿದ್ದಾರೆ. ಕೊನೆಗೆ ಭೀಮಸೇನ ದೇವರಿಂದ ಜರಾಸಂಧರನನ್ನು ಹತ ಮಾಡಿಸಿದ. ದುರ್ಜನರ ಕೈಯಲ್ಲಿ ರಾಜ್ಯ ಸಿಗುವುದು ಬೇಡ ಎಂದು ಶ್ರೀಕೃಷ್ಣ ಪರಮಾತ್ಮ ರಾಜರನ್ನೇ ಹಠಕ್ಕಿಳಿಸಿ ಯುದ್ಧ ಮಾಡಿಸಿದ.

Previous articleಕ್ಷುಲಕ‌ ಕಾರಣಕ್ಕೆ ಗಲಾಟೆ: ಇಬ್ಬರಿಗೆ‌ ಚಾಕು ಇರಿತ
Next articleಪಂಚರಾಜ್ಯಗಳಲ್ಲಿ ಪಂಚ ಪರೀಕ್ಷೆ ಕಾಲ