ವಿನಯವೇ ಆನಂದಮಯ ಬದುಕಿಗೆ ನಾಂದಿ

0
8

ಸಮಾಜದಲ್ಲಿ ದೊಡ್ಡವನೆಂದು ಎನಿಸಿಕೊಳ್ಳಬೇಕಾದರೆ ಮೊದಲು ತಾನು ಸಣ್ಣವನು ಎಂಬ ವಿನೀತ ಭಾವ ಮನೆ ಮಾಡಿರಬೇಕು. ಸಮಾಜದ ಕಣ್ಣಿಗೆ ಅವನು ದೊಡ್ಡವನಾಗಿಯೇ ಕಾಣುತ್ತಾನೆ. ಅಣ್ಣ ಬಸವಣ್ಣನವರು ಎನಗಿಂತ ಕಿರಿಯರಿಲ್ಲ… ಶಿವಭಕ್ತರಿಗಿಂತ ಹಿರಿಯರಿಲ್ಲವೆಂದು ಹೇಳುವ ಮೂಲಕ ಅತ್ಯಂತ ವಿನೀತಭಾವವನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ಅವರ ನಡೆ. ಕಲ್ಯಾಣದ ಎಲ್ಲ ಶರಣರಿಗೆ ದಾರಿದೀಪವಾಗಿತ್ತು. ಅದು ಮುಂದಿನ ಸಮಾಜಕ್ಕೂ ಒಂದು ಉತ್ತಮ ಪಥವಾಗಿತ್ತು.
ನಮಗೆ ಕೊಂಚ ಸಂಪತ್ತಾಗಲಿ, ಅಧಿಕಾರವಾಗಲಿ ಬಂದರೆ ಸಾಕು ನಮಗಿಂತ ದೊಡ್ಡವರು ಯಾರೂ ಇಲ್ಲ, ನಾನೇ ದೊಡ್ಡವನುಉ ಎಂಬ ಭಾವನೆ ಬರುತ್ತದೆ. ಎಲ್ಲರೂ ಕೂಡ ನನ್ನ ಮಾತನ್ನೇ ಕೇಳಬೇಕು ಎಂದು ಅಹಂಕಾರ ಉತ್ಪನ್ನವಾಗುತ್ತದೆ. ಮದ್ದಾನೆಯಂತೆ ವರ್ತನೆಯೂ ಮೈಗೂಡಿಬಿಡುತ್ತದೆ.
ಆನೆಯಾಗಿ ಕಬ್ಬು ತಿನ್ನಲು ಹೋಗಿ ಲಾಠಿ ಏಟು ತಿನ್ನುತ್ತೇವೆ. ಅನುಭಾವಿಗಳು ಉರ್ದುವಿನಲ್ಲಿ `ಇನ್ಸಾನ್ ಅಪನೆ ಆಪಕೋ ಛೋಟಾ ನಹಿ ಸಮಝತಾ ವೋ ಕಭಿ ಭಿ ಬಡಾ ನಹಿ ಬನ್ ಸಕತಾ… ಜಬ್ ಓ ಅಪನೆ ಆಪಕೋ ಛೋಟಾ ಸಮಜೆಗಾ ಖುದಾ ಖುದ್ ಉಸ್ಸೆ ಬಡಾ ಬನಾದೇತಾ ಹೈ..’
ಆದುದರಿಂದ ದೊಡ್ಡವರಿಂದಿಗೆ ಗೌರವದಿಂದ ಸಣ್ಣವರೊಂದಿಗೆ ಅಕ್ಕರೆಯಿಂದ ಕಾಣುವ ನಮ್ಮ ವರ್ತನೆಯಾಗಬೇಕು ಯಾವಾಗಲೂ ನಯ ವಿನಯ ಸಹನಶೀಲತೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾರ್ಥ ಬುದ್ಧಿಗೆ ತಿಲಾಂಜಲಿ ಇಟ್ಟು ನಾವು ಸಮಾಜ ಜೀವಿ ಎಂಬುದು ಅರಿತು ಇನ್ನೊಬ್ಬರಿಗೆ ಸಹಕಾರಿಯಾಗಿ ಬದುಕುವುದು ಕಲಿಯಬೇಕು. ಒಬ್ಬ ವ್ಯಕ್ತಿ ಸಮಾಜದಲ್ಲಿ ಎತ್ತರಕ್ಕೆ ಬೆಳೆದು ಪರೋಪಕಾರಿಯಾಗಿದ್ದವನ ಕಂಡು ಹೊಟೆ ಕಿಚ್ಚು ಪಡುತ್ತೇವೆ. ಅವನ ತಪ್ಪುಗಳನ್ನು ಹುಡುಕಿ ಅವನ ಕಾಲೆಳೆಯುವ ಪ್ರಯತ್ನ ಮಾಡುತ್ತೇವೆ. ಇಂತಹ ಕ್ಷುಲ್ಲಕ ಬುದ್ಧಿಯೇ ಮನುಷ್ಯನೇ ಸಣ್ಣವನನ್ನಾಗಿ ಮಾಡುತ್ತದೆ. ವಿಶಾಲ ಮನೋಭಾವನೆಯ ಬದುಕು ನಮ್ಮದಾಗಬೇಕು. ಇನ್ನೊಬ್ಬರ ಬೆಳೆಯುವದನ್ನು ಕಂಡು ಸಂತೋಷ ಪಡಬೇಕು. ಆಗ ದೇವರು ನಮಗೆ ಕಷ್ಟನಷ್ಟಗಳನ್ನು ದೂರ ಮಾಡಿ ಪ್ರೇರಣಾ ಶಕ್ತಿಯಾಗಿ ನಿಲ್ಲುತ್ತಾನೆ. ನಾವು ಕಷ್ಟ ಬಂದಾಗ ಧೃತಿಗೆಡದೇ ದುಃಖ ಬಂದಾಗ ಕುಗ್ಗದೇ ಸುಖ ಬಂದಾಗ ಬಹಳ ಹಿಗ್ಗದೇ ಸಮಾಜದಲ್ಲಿ ನಯ ವಿನಯದಿಂದ ಜನಾನರಾಗಿಯಾಗಿ ಬದುಕಿದ್ದಾದರೆ, ಬದುಕಿದ್ದಾದರೆ ನಮ್ಮ ಬದುಕು ಸಾರ್ಥಕವಾಗುತ್ತದೆ.

Previous articleಮುಖ್ಯ ಪೇದೆ ಮೇಲೆ ಟ್ರಾಕ್ಟರ್ ಹಾಯಿಸಿ ಕೊಲೆ
Next articleಉಚಿತ ಅನ್ನಕ್ಕೆ ರಾಜಕೀಯ ಕೆಸೆರು