ಬೆಂಗಳೂರು: ರಾಜ್ಯಪಾಲರು ರಾಜ್ಯದಿಂದ ನಿರ್ಗಮಿಸುವುದು ಸೂಕ್ತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಿಎಂ ಸಿದ್ದರಾಮಯ್ಯ ಪ್ರಕರಣದಲ್ಲಿ ಕೇವಲ ಆರೋಪದ ಆಧಾರದ ಮೇಲೆ ಒಂದೇ ದಿನಕ್ಕೆ ತನಿಖೆಗೆ ಅನುಮತಿ ನೀಡಿದ್ದಾರೆ ಆದರೆ ಕುಮಾರಸ್ವಾಮಿ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ನಡೆಸಿ ವಿಚಾರಣೆ ಪೂರ್ಣಗೊಂಡು ಹತ್ತು ತಿಂಗಳಾದರೂ ಮುಂದಿನ ಕ್ರಮಕ್ಕೆ ಅನುಮತಿ ಇಲ್ಲ. ಇದು ರಾಜ್ಯಪಾಲರ ಕರ್ತವ್ಯ ನಿರ್ವಹಣಾ ರೀತಿ. ಇನ್ನೊಬ್ಬರ ಕೈಗೊಂಬೆಯಾದವರು ಮಾತ್ರ ಈ ರೀತಿ ವರ್ತಿಸಲು ಸಾಧ್ಯ. ಬಿಜೆಪಿ ಜೆಡಿಎಸ್ ಪಕ್ಷಗಳ ಏಜೆಂಟ್ ಆಗಿ ಕಾರ್ಯನಿರ್ವಹಿಸುವ ಬದಲು ರಾಜ್ಯಪಾಲರು ರಾಜ್ಯದಿಂದ ನಿರ್ಗಮಿಸುವುದು ಸೂಕ್ತ ಎಂದಿದ್ದಾರೆ.