ಮೃಗೀಯ ಕೃತ್ಯ ಎಂದಿಗೂ ಸಲ್ಲದು

0
16

ಜಗತ್ತು ಪ್ರಕ್ಷುಬ್ಧಗೊಂಡಿದೆ ಒಳಿತಿಗಿಂತಲೂ ಕೆಡಕು, ವಿಕೃತಿಗಳ ಮೇಲಾಟ ಜೋರಾಗಿದೆ. ಮಾಧ್ಯಮಗಳ ಮೇಲೆ ಕಣ್ಣಾಡಿಸಿದರೆ ಕಾಣಸಿಗುವುದು ಮನಸ್ಸಿಗೆ ಕಹಿ ಎನಿಸುವ ಸುದ್ದಿಗಳೇ ಹೆಚ್ಚು. ಇದು ಕೇವಲ ಭಾರತ ಮಾತ್ರವಲ್ಲ ಇಡೀ ಜಗತ್ತಿನ ಸ್ಥಿತಿಯೇ ಹೇಗಾಗಿದೆ ಎನಿಸುತ್ತದೆ. ಕೊಲೆ, ಸುಲಿಗೆ, ಅತ್ಯಾಚಾರ, ಮಾನಹಾನಿಯಂತ ಪ್ರಕರಣಗಳು ಸರ್ವೇಸಾಮಾನ್ಯವಾಗಿವೆ.
ಕೆಲವು ವರ್ಷಗಳ ಹಿಂದೆ ಯಾರೋ ಯಾವುದೊ ಕಾರಣಕ್ಕೆ ಕೊಲೆಯಂತಹ ಕೃತ್ಯವನ್ನು ಎಸಗಿದರೆ ಅದೊಂದು ಬಹುದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಕೊಲೆ ಮಾಡಿರುವ ರೀತಿಯ ಬಗ್ಗೆ ವ್ಯಕ್ತಿಯ ದೇಹವನ್ನು ಕತ್ತರಿಸಿ ಸೂಟ್‌ಕೇಸ್ ನಲ್ಲಿ ಅಥವಾ ಫ್ರಿಡ್ಜ್ ನಲ್ಲಿ ತುಂಬಿಡುವುದು, ತಂದೂರಿ ಒಲೆಯಲ್ಲಿ ಬೇಯಿಸುವುದು, ನೂರೈವತ್ತು ಬಾರಿ ಚಾಕುವಿನಿಂದ ಇರಿದು ಕೊಲ್ಲುವುದು ಹೀಗೆ ಅತ್ಯಂತ ಭೀಭತ್ಸವಾಗಿ ಕೊಲೆ ಮಾಡುವದು ರೂಢಿಯಾಗುತ್ತಿರುವುದನ್ನು ನೋಡಿದರೆ ಮಾನವ ಹೀಗೇಕೆ ಮೃಗವಾಗುತ್ತಿದ್ದಾನೆ ಎನಿಸುತ್ತದೆ. ಇದಕ್ಕಿಂತಲೂ ಹೇಯಕೃತ್ಯ ನಮ್ಮದೇ ದೇಶದ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡಿಸಿರುವ ಹೀನ ಕಾರ್ಯ ನಡೆದಿರುವುದನ್ನು ಕೇಳಿದಾಗ ಮನಸ್ಸಿಗೆ ಕ್ಲೇಶವಾಗುತ್ತದೆ. ಯಾವುದೇ ಕಾರಣಕ್ಕೂ ಈ ಘಟನೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಭಾರತ ದೇಶ ಮಹಿಳೆಯರನ್ನು ದೇವತೆಯಂದೇ ಆರಾಧಿಸುವ ನೆಲ ಆದರೆ ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ
ಘಟನೆ ಜಗತ್ತಿನ ಮುಂದೆ ಭಾರತದ ಮಾನ ಕಳೆಯುವ ಕೃತ್ಯ ಇಂಥಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲೆ ಮಾತ್ರವಲ್ಲ ಇಡೀ ನಾಗರೀಕ ಸಮಾಜದ್ದು. ಜಗತ್ತಿನ ಅದೆಷ್ಟೋ ಅತಿರಥರು ಹೆಣ್ಣಿನ ಕಣ್ಣೀರಿನಲ್ಲಿ ಕೊಚ್ಚಿ ಹೋಗಿರುವ ಲಕ್ಷಾಂತರ ಉದಾಹರಣೆಗಳಿವೆ. ಹೀಗಾಗಿ ಎಲ್ಲರೂ ಮಹಿಳೆಯರ ಭಾವನೆಗಳಿಗೆ ಬೆಲೆ ಕೊಡೋಣ ಅವರ ಮಾನ, ಪ್ರಾಣ ರಕ್ಷಣೆಗೆ ಬದ್ಧರಾಗೋಣ.

Previous articleಮಾತಿನ ಮಂಟಪದಲ್ಲಿ ಮಾತಿಗೆ ಬಂದಿತು ಬರ
Next articleಖಾಸಗಿ ಬಸ್ ಪಲ್ಟಿ: ಚಾಲಕ ಸ್ಥಳದಲ್ಲೇ ದುರ್ಮರಣ