ಮಾನವೀಯ ಬದುಕಿಗೆ ಅಧ್ಯಾತ್ಮ ಅವಶ್ಯ

0
6

ದೇಶವೊಂದು ಕೇವಲ ಆರ್ಥಿಕವಾಗಿ ಪ್ರಗತಿ ಹೊಂದಿದರೆ ಅದು ದೇಶದ ಪ್ರಗತಿ ಎನಿಸದು. ಅಲ್ಲಿನ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಪ್ರಗತಿ ಹೊಂದಿದ್ದರೆ ಅದು ಸದೃಢವಾದ ದೇಶ ಎನಿಸಿಕೊಳ್ಳುತ್ತದೆ. ಭಾರತ ಇಂಥ ಸಾಂಸ್ಕೃತಿಕ ಮತ್ತು ಧಾರ್ಮಿಕ ಮತ್ತು ಅಧ್ಯಾತ್ಮಿಕ ನೆಲೆಯಲ್ಲಿ ರೂಪಗೊಂಡು ಬಂದಿದೆ. ಈ ದೇಶದಲ್ಲಿ ಭೌತಿಕ ಸಮೃದ್ಧತೆ ಇದ್ದೇ ಇದೆ. ಯಾವುದು ಎಲ್ಲೆಲ್ಲಿ ಹಂಚಿಕೆಯಾಗಬೇಕೋ ಅಲ್ಲಲ್ಲೆಲ್ಲಾ ಹಂಚಿಕೆಯಾಗಿದೆ. ವಾತಾವರಣ ಮತ್ತು ಪರಿಸರವೂ ಕೂಡ ಅಧ್ಯಾತ್ಮದ ಆತ್ಮದಂತೆ ಇದೆ.
ಇಂಥ ದೇಶದಲ್ಲಿ ಇತ್ತೀಚಿಗೆ ಕಲ್ಮಶವಾದ ವಿಚಾರಗಳ ಪರಂಪರೆ ಹೆಚ್ಚುತ್ತಿರುವುದು ದುಃಖದ ವಿಷಯ. ಕಶ್ಮಲ ರಹಿತ ಕಾಯಕ ಇದರ ಜೀವಾಳ. ದಯೆ ಈ ಭೂಮಿಯ ಹೃದಯವಿದ್ದಂತೆ ಇದೆ.
ಮನಃ ಪರಿವರ್ತನೆಗೆ ಪ್ರಾಮುಖ್ಯತೆ ನೀಡಿ ಬದಲಾಯಿಸುವುದು ಈ ನೆಲದ ಅಧ್ಯಾತ್ಮಿಕ ಶಕ್ತಿಯೂ ಆಗಿದೆ. ಅದರ ಬದಲಾಗಿ ಕೊಚ್ಚು ಕೊಲ್ಲು ಕಡಿ ಬಡಿ ಎಂಬುದಲ್ಲ.
ಹಿರಿಯರಲ್ಲಿ ದೇವರು ದೈವದಲ್ಲಿ ಭಯ ಮತ್ತು ಭಕ್ತಿ ಇಟ್ಟುಕೊಂಡಿರಬೇಕು. ಅದು ಉತ್ತಮ ಸಮಾಜವನ್ನು ಸೃಷ್ಟಿಸುತ್ತದೆ. ಆದರೆ ಬದಲಾದ ಸನ್ನಿವೇಶಗಳಲ್ಲಿ ಆರ್ಥಿಕ ಸ್ವಾತಂತ್ರö್ಯ ಮತ್ತು ಆರ್ಥಿಕ ಸಮಾನತೆಯ ಹಿನ್ನೆಲೆಯಲ್ಲಿ ಈ ಆರೋಗ್ಯಕರವಾದ ಸಾಮರಸ್ಯದ ಸಮಾನತೆಯನ್ನೇ ಕಳೆದುಕೊಂಡು ಬಿಟ್ಟಿದ್ದೇವೆ.
ಕೆಲವೊಮ್ಮೆ ಆಷಾಢಭೂತಿತನದ ಧಾರ್ಮಿಕ ಪ್ರವೃತ್ತಿಗಳು ಅಪಾಯವನ್ನು ತಂದೊಡ್ಡುತ್ತವೆ. ಜನರೆದುರು ನಮಾಜ್ ಮಾಡುವುದು. ಪೂಜೆ, ಭಜನೆ, ಆರಾಧನೆ ಮಾಡುತ್ತೇವೆ. ಇದರಿಂದ ದೇವರು ತೃಪ್ತನಾಗುವದಿಲ್ಲ. ದೇವರು ತೃಪ್ತಿಯಾಗಬೇಕಾದಲ್ಲಿ ಕಾಯಕದಲ್ಲಿ ಪ್ರಾಮಾಣಿಕತೆ ಇರಬೇಕು. ದೇವರು ಮತ್ತು ದೈವದಲ್ಲಿ ಭಯ ಭಕ್ತಿ ಇರಬೇಕಾಗುತ್ತದೆ. ಅದು ಅಧ್ಯಾತ್ಮದ ದಾರಿಗೆ ಪ್ರೇರಣೆ ಒದಗಿಸುತ್ತದೆ. ಜೀವನದಲ್ಲಿ ಅಧ್ಯಾತ್ಮ ಅಳವಡಿಸಿಕೊಂಡರೆ ಮನುಷ್ಯ ಕುಕರ್ಮಗಳಿಂದ ದೂರ ಇದ್ದು ಬದುಕು ಉನ್ನತೀಕರಿಸಿಕೊಳ್ಳುತ್ತಾನೆ. ಧರ್ಮದ ಹೆಸರಿನಲ್ಲಿ ಅಧರ್ಮವೂ ತಾಂಡವಾಡುತ್ತದೆ. ಇದು ಆತ್ಮಸಾಕ್ಷಿಗೆ ಮಾಡಿದ ಮೋಸವೆನಿಸುತ್ತದೆ.
ಒಂದು ಮತಧರ್ಮದ ಆಚರಣೆ ಆ ಜನಾಂಗದ ಗತಿಯಾಗಿರುತ್ತದೆ. ಆದರೆ ಮತ್ತೊಂದು ಮತಧರ್ಮವನ್ನು ಬಲವಂತವಾಗಿ ಇಲ್ಲವೇ ವಿಷಯವಾಸನೆಗಳನ್ನು ತೋರಿಸಿ ಹೇರುವುದು ಇಲ್ಲವೇ ಹೆದರಿಸಿ ಬದಲಾವಣೆಗೊಳಿಸುವುದು ಧರ್ಮಕ್ಕೆ ಮಾಡಿದ ಮೋಸವೆನಿಸುವದು. ಮುಸ್ಲಿಂ ಕುರ್-ಆನ್ ಶ್ಲೋಕದ ತಾತ್ಪರ್ಯ ಬಹುತೇಕವಾಗಿ ಹಿಂದುಗಳಿಗೆ ಅನ್ವಯವಾಗುವದಿಲ್ಲ. ಕಾರಣ ಇಸ್ಲಾಂ ಬೆಳೆದು ಬಂದ ಪ್ರದೇಶದ ಮೇಲೆ ಅವಲಂಬಿತವಾಗಿದೆ. ವೈಚಾರಿಕ ತಪ್ಪು ತಿಳಿವಳಿಕೆಗಳಿಂದ ಧರ್ಮದ ಹೆಸರಿನಲ್ಲಿ ಕೆಲವೊಂದು ಷಡ್ಯಂತ್ರಗಳು ನಡೆಯುತ್ತಲಿವೆ.
ಅಧ್ಯಾತ್ಮದ ಚಿಂತನೆ ಮಾಡುತ್ತ ಧರ್ಮದ ಜಿನವಾದ ಅರ್ಥ ತಿಳಿದುಕೊಂಡು ಒಟ್ಟು ಸಮಾಜದ ಏಳಿಗೆಗಾಗಿ ಶ್ರಮ ಪಡುವಂತಾಗಬೇಕು. ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಕೂಡ ಅದೇ ಆಗಿದೆ. ಸಾರ್ಥಕ ಬದುಕಿಗೆ ಅಧ್ಯಾತ್ಮಿಕ ಗುರು ಹಿರಿಯರ ಹಿತೋಪದೇಶ ಕೇಳಿ ಅದರಂತೆ ನಡೆಯುವದು ಮೌಲ್ಯಾಧಾರಿತ ಜೀವನ ನಡೆಸಿದಲ್ಲಿ ನೆಮ್ಮದಿಯ ಬದುಕು ನಮ್ಮದಾಗುತ್ತದೆ.

Previous articleದೇಶವೇ ತಲೆತಗ್ಗಿಸುವಂತೆ ಮಾಡಿದ ಮಣಿಪುರ
Next articleಮುಂದಿನ 2 ದಿನ ಉತ್ತರ ಒಳನಾಡಿನಲ್ಲಿ ಮಳೆ