ಭಗವಂತ ಏಕೆ ನಾರಾಯಣ ?

0
4
PRATHAPPHOTOS.COM

ಏಕಪ್ರಕಾರನಾಗಿ ಅನಾದ್ಯಂತ ಕಾಲದಲ್ಲಿ ಇದ್ದಾನೆ ಪರಮಾತ್ಮ. ಜಗತ್ತು ಸೃಷ್ಟಿಯನ್ನು ಪಡೆಯುತ್ತದೆ ಪುನಃ ನಾಶವನ್ನು ಹೊಂದುತ್ತದೆ. ಸೃಷ್ಟಿಲಯಗಳ ಚಕ್ರದಲ್ಲಿ ಜಗತ್ತು ಸಿಕ್ಕರೆ ಈ ಜಗತ್ತನ್ನು ಹುಟ್ಟಿಸಿದ ಪರಮಾತ್ಮ ಮತ್ತು ಮಾತ್ರ ಏಕಪ್ರಕಾರನಾಗಿದ್ದಾನೆ. ಹೀಗಾಗಿ ಭಗವಂತ ಅವ್ಯಯನಾಗಿದ್ದಾನೆ.
ನಾಶರಹಿತನಾಗಿ ಕಾರ್ಯ ಕಾರಣಗಳಲ್ಲಿ ತಾನೇ ಅಂತರ್ಯಾಮಿಯಾಗಿದ್ದು ಈ ಜಗತ್ತಿನ ಸೃಷ್ಟಿಯನ್ನು ಮಾಡುತ್ತಾನೆ. ಪ್ರಕೃತಿ ತತ್ವದಲ್ಲಿದ್ದು ಮಹತತ್ವದ ರೂಪದಲ್ಲಿ ವಿಕಾರವನ್ನು ಹೊಂದುವ ಶಕ್ತಿಯನ್ನು ಪ್ರಕೃತಿ ತತ್ವಕ್ಕೆ ಕೊಡುತ್ತಾನೆ. ಆ ಪ್ರಕೃತಿಯಿಂದ ಉಚಿತವಾಗಿ ತಾನು ಮಹತ್ತತ್ವ ಬೆಳೆದು ನಿಲ್ಲುವ ಯೋಗ್ಯತೆಯನ್ನು ಪಡೆಯುವುದು ಆ ಭಗವಂತನ ಸನ್ನಿಧಾನದಿಂದ, ಅಂಥ ವ್ಯಕ್ತಾವ್ಯಕ್ತನಾಗಿ ಸಕಲ ವೇದ ಪ್ರತಿಪಾದ್ಯನಾಗಿ ಆ ಭಗವಂತ ಈ ಜಗತ್ತಿನ ಸೃಷ್ಟಿಯನ್ನು ಮೊದಲು ಮಾಡುತ್ತಾನೆ.
ಮೊದಲ ಭಗವಂತ ನೀರಿನ ಸೃಷ್ಟಿಯನ್ನು ಮಾಡಿದನಂತೆ. ಆ ನೀರಿನಲ್ಲಿ ಮೊದಲು ತನ್ನ ವೀರ್ಯವನ್ನು ಸೃಷ್ಟಿ ಮಾಡಿದನಂತೆ.. ಪ್ರಳಯ ಕಾಲದಲ್ಲಿ ಎಲ್ಲ ತತ್ವಗಳನ್ನು ತನ್ನ ಉದರದಲ್ಲಿ ಧಾರಣಿಯನ್ನು ಮಾಡಿದ್ದನೋ, ಆ ತತ್ವಗಳನ್ನೇ, ಜಡವಾದ ತತ್ವಗಳನ್ನು ಪರಮಾತ್ಮ ಶುದ್ಧವಾದ ಸಚ್ಚಿದಾನಂದಾತ್ಮಕ ದೇಹವನ್ನು ಪಡೆದ ಪರಮಾತ್ಮ ಆ ಸಚ್ಚಿದಾನಂದಾತ್ಮಕವಾದ ವೀರ್ಯವನ್ನ ನೀರಿನಲ್ಲಿ ಇಟ್ಟದ್ದಲ್ಲ…. ಪ್ರಳಯ ಕಾಲದಲ್ಲಿ ತನ್ನುದರದಲ್ಲಿ ಇಟ್ಟುಕೊಂಡ ಜಡತತ್ವಗಳನ್ನ ವೀರ್ಯರೂಪದಲ್ಲಿ ತತ್ವಗಳನ್ನು ಪರಿಣಾಮಗಗೊಳಿಸಿ ನೀರಿನಲ್ಲಿ ಇಟ್ಟಿದ್ದಾನೆ.
ಆದ್ದರಿಂದ ಈ ಬ್ರಹ್ಮಾಂಡದ ಸೃಷ್ಟಿಯನ್ನು ಮಾಡಿದ್ದಾನೆ ಅರ್ಥಾತ್ ಈ ಪಂಚಮಹಾಭೂತಾದಿಗಳೆಲ್ಲ ಸಿಲುಕಿಕೊಂಡಿದ್ದೆಲ್ಲ ಜಡತತ್ವ ಪರಮಾತ್ಮನ ಆ ರೂಪದಲ್ಲಿ ಹೊರಗೆ ತೆಗೆದು ಅದರಿಂದ ಹಿರಣ್ಮಯವಾದಂತಹ ಅಂಡವನ್ನು ನಿರ್ಮಾಣ ಮಾಡಿದ್ದಾನೆ. ಆ ತಾನೇ ಸೃಷ್ಟಿ ಮಾಡಿದ ನೀರಿನಲ್ಲಿಯೇ ತಾನು ಇದ್ದಾನೆ ಎಂಬ ಕಾರಣದಿಂದ ಭಗವಂತನಿಗೆ ನಾರಾಯಣ ಎಂದು ಕರೆಯಲಾಗುತ್ತದೆ.

Previous articleಫೈನಲ್ ಗೆ ಲಗ್ಗೆ ಇಟ್ಟ ಭಾರತ
Next articleಮಾತು ಮುತ್ತು