ಬಾಗಲಕೋಟೆಯಲ್ಲಿ ಆಲಿಕಲ್ಲು ಸಹಿತ ಮಳೆ

0
65

ಬಾಗಲಕೋಟೆ: ಶುಕ್ರವಾರ ರಾತ್ರಿ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿದೆ‌. ಜಿಲ್ಲಾ ಕೇಂದ್ರ ಬಾಗಲಕೋಟೆ, ಕಲಾದಗಿ, ಇಳಕಲ್ಲ ಸೇರಿ ಹಲವೆಡೆ ಭಾರೀ ಗಾಳಿ ಸಹಿತ ಮಳೆ ಆಗಿದೆ.
ರಾತ್ರಿ 8.30ರ ಹೊತ್ತಿಗೆ ಜೋರಾಗಿ ಗಾಳಿ ಬೀಸಲು ಆರಂಭಿಸಿತು. 9ಕ್ಕೆ ಆಲಿಕಲ್ಲು ಸಹಿತ ಜೋರಾದ ಮಳೆ ಶುರುವಾಯಿತು. ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಜನಕ್ಕೆ ಟಂಟಂ ಸೇರಿ ವಾಹನಗಳು ಸಿಗದೆ ಪರದಾಡುವಂತೆ ಆಯಿತು.
ಆಲಿಕಲ್ಲು ಮಳೆ ಆಗಿರುವುದರಿಂದ ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಸದ್ಯ ಮಳೆಯಿಂದ ಯಾವುದೇ ಹಾನಿಯಾಗಿರುವ ಬಗ್ಗೆ ವರದಿ ಆಗಿಲ್ಲ.

Previous article6 ದಿನವಾದ್ರೂ ರಿತೇಶ್ ಕುಟುಂಬಸ್ಥರ ಪತ್ತೆಯಿಲ್ಲ
Next articleರೈತ ಹೋರಾಟಗಾರರಿಗೆ ರೈಲ್ವೆ ಇಲಾಖೆಯಿಂದ ನೋಟಿಸ್