ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ಪೋಲೆಂಡ್ ಮತ್ತು ಉಕ್ರೇನ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಕಳೆದ 45 ವರ್ಷಗಳಲ್ಲಿ ಪೋಲೆಂಡ್‌ಗೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ.
ಮೊರಾರ್ಜಿ ದೇಸಾಯಿ ಅವರ ನಂತರ 45 ವರ್ಷಗಳಲ್ಲಿ ಯುರೋಪಿಯನ್ ದೇಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ ಪೋಲೆಂಡ್‌ಗೆ ಭೇಟಿ ನೀಡುತ್ತಿರುವ ಕಾರಣ ಇದು ಮಹತ್ವದ ಭೇಟಿಯಾಗಿದೆ.
ಇಂದು ಮತ್ತು ನಾಳೆ ಪೋಲೆಂಡ್‍ಗೆ ಭೇಟಿ ನೀಡಲಿದ್ದು. ಅದಾದ ನಂತರ 23ರಂದು ಉಕ್ರೇನ್‍ಗೆ ಭೇಟಿ ನೀಡಲಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23ರಂದು ಉಕ್ರೇನ್‌ಗೆ ಅಧಿಕೃತ ಭೇಟಿಯನ್ನು ಕೈಗೊಳ್ಳಲಿದ್ದಾರೆ. ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ 30 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿರುವುದರಿಂದ ಈ ಭೇಟಿ ಭಾರೀ ಮಹತ್ವ ಪಡೆದಿದೆ.