ಬೆಂಗಳೂರು: ನಟ ಶಿವರಾಜ್ ಕುಮಾರ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಇಂದು ವಾಪಸ್ಸಾಗಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿರುವುದರಿಂದ ಸಾದಹಳ್ಳಿ ಟೋಲ್ ಬಳಿ ಸಿನಿಮಾ ಸೆಲೆಬ್ರಿಟಿಗಳು, ಅಭಿಮಾನಿಗಳು ಹಾಗೂ ಆಪ್ತರು ಶಿವಣ್ಣ ಅವರನ್ನು ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುತ್ತಲೇ ಎಲ್ಲರೆಡೆ ಮುಗುಳ್ನಗುತ್ತಾ ಕೈಬೀಸಿದ ಶಿವಣ್ಣ, ತಮ್ಮ ಸ್ವಾಗತಕ್ಕೆ ಆಗಮಿಸಿದವರನ್ನು ತಬ್ಬಿ ಸಂತಸ ಪಟ್ಟರು. ಬಳಿಕ ವಿಮಾನ ನಿಲ್ದಾಣದ ಹೊರಗೆ ತಮಗಾಗಿ ಕಾಯುತ್ತಿದ್ದ ಅಭಿಮಾನಿಗಳೆಡೆಗೆ ಕೈಬೀಸಿದರು. ಅವರು ತಂದ ಹಾರಗಳನ್ನು ಹಾಕಿಸಿಕೊಂಡು ಕಾರಿನಲ್ಲಿ ಮನೆಯತ್ತ ಪ್ರಯಾಣಿಸಿದರು.
ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅಮೆರಿಕಾಕ್ಕೆ ತೆರಳಿ ಅಲ್ಲಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು