ನಕಲಿ ಚಾನೆಲ್ ವಿರುದ್ಧ ಸರಕಾರಿ ಅಧಿಕಾರಿಗಳ ಪ್ರತಿಭಟನೆ

0
5

ಇಳಕಲ್: ತಮ್ಮ ಇಲಾಖೆಯ ವಿರುದ್ಧ ನಕಲಿ ಚಾನೆಲ್‌ಗಳಲ್ಲಿ ಬೇಕಾಬಿಟ್ಟಿ ಬರೆದುಕೊಂಡ ಬಗ್ಗೆ ಹುನಗುಂದ ಇಳಕಲ್ ಅವಳಿ ತಾಲೂಕುಗಳ ಪಂಚಾಯತಿ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜೊತೆಗೆ ಹಲವಾರು ಸಂಘಗಳು ಈ ಪ್ರತಿಭಟನೆಯಲ್ಲಿ ಕೈಜೋಡಿಸಿದ್ದು ಸಿಬ್ಬಂದಿ ವರ್ಗದವರು ಮನವಿ ಪತ್ರಗಳನ್ನು ತಹಸೀಲ್ದಾರ್‌ ನಿಂಗಪ್ಪ ಬಿರಾದಾರ, ಪಿಎಸ್ಐ ಶಹಜಹಾನ್ ನಾಯಕ ಅವರಿಗೆ ನೀಡಿ ತಮಗಾಗುತ್ತಿರುವ ಮಾನಸಿಕ ಹಿಂಸೆಯ ಬಗ್ಗೆ ವಿವರಿಸಿ ಈ ರೀತಿಯಾಗಿ ವೈಯಕ್ತಿಕ ಆರೋಪ ಮಾಡಬಾರದು ಎಂದು ವಿನಂತಿಸಿದರು. ಇಳಕಲ್ ಹುನಗುಂದ ಅವಳಿ ತಾಲೂಕುಗಳ ಪಂಚಾಯತಿ ಕಾರ್ಯನಿರ್ವಾಹಕ ಮುರಳಿಧರ ದೇಶಪಾಂಡೆ ಸೇರಿದಂತೆ ಎರಡೂ ತಾಲೂಕುಗಳ ಗ್ರಾಮಾಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Previous articleಬುದ್ಧಿ ಮಾತು ಕೇಳದಿದ್ದರೆ ಹಿರಿಯರು ಲತ್ತೆಪೆಟ್ಟು ಕೊಡ್ತಾರೆ
Next articleಬೈಕ್ ಡಿಕ್ಕಿ: ಎಂಎಲ್ಸಿ ಅರವಿಂದ್ ಅರಳಿ ತಾಯಿ ಸಾವು