ದೇವರು ಕೊಟ್ಟಿರುವ ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ತೆಗೆದುಕೊಳ್ಳುವ ನಿರ್ಧಾರಗಳಿಗೆ ಬುದ್ಧಿ ತನ್ನ ಪಾತ್ರ ವಹಿಸುತ್ತದೆ. ಅದಕ್ಕೂ ಮೊದಲು ವಿಷಯದ ಗ್ರಹಿಕೆ ಬಹುಮುಖ್ಯ. ಬಹುತೇಕರು ಸಾಮಾನ್ಯವಾಗಿ ಯಥಾವತ್ ತಿಳಿವಳಿಕೆಯ ಆಚೆಗೆ ಇನ್ನೇನೋ ಮನಸ್ಸಿನಲ್ಲಿಟ್ಟುಕೊಂಡು ಗ್ರಹಿಸುವದುಂಟು ಇದು ಅಪಾಯಕಾರಿ. ಪೂರ್ವಾಗ್ರಹದಿಂದಲೂ ಹೀಗಾಗುವದುಂಟು.
ಅದಕ್ಕೆ ಜೀವನದಲ್ಲಿ ದೇವರನ್ನು ಮತ್ತು ಬದುಕನ್ನು ಇವರೆಡನ್ನು ತಿಳಿಯುವದಕ್ಕಾಗಿ ಇರುವ ಶಾಸ್ತ್ರವನ್ನು ಸರಿಯಾಗಿ ಗ್ರಹಿಸಿ ತಿಳಿದುಕೊಳ್ಳಬೇಕು. ಶಾಸ್ತçಗಳನ್ನು ಓದುವಂತಹ ಕೇಳುವಂತಹ ಜನ ನೂರಾರು ಸಾವಿರಾರು ತಪ್ಪು ತಿಳಿವಳಿಕೆಯನ್ನು ತಲೆಯನ್ನು ತುಂಬಿಕೊಳ್ಳುತ್ತಾರೆ.
ಅದರಿಂದ ಜೀವನದ ಸಂಜೆವರೆಗೂ ತಾನು ತಿಳಿದಿದ್ದು ಸರಿಯೋ ತಪ್ಪೋ ಎಂದು ತಿಳಿವಳಿಕೆ ಅರಿವಿರುವುದಿಲ್ಲ. ತಿಳಿದಿದ್ದೇ ಕೆಲವೊಮ್ಮೆ ಸರಿ ಎಂಬ ಭಾವನೆಯಲ್ಲಿ ಹಾಗೆ ನಡೆಯುತ್ತಾ ಇರುತ್ತಾನೆ. ಆತ ತಪ್ಪು ತಿಳಿವಳಿಕೆಯಲ್ಲೆ ಸಂಜೆ ಮತ್ತು ರಾತ್ರಿ ಯನ್ನು ಕಳೆದು ಕಣ್ಣು ಮುಚ್ಚಿ ಹೋಗುತ್ತಾನೆ. ಮತ್ತಿನ್ಯಾವ ಜನ್ಮದೊಳಗೆ ಶಾಸ್ತ್ರವನ್ನು ಓದುವ ಪ್ರಸಂಗ ಬರುತ್ತದೆಯೋ ಗೊತ್ತಿಲ್ಲ. ಅದಕ್ಕಾಗಿ ನಾವೆಲ್ಲ ದೇವರಿಗೆ. ಭಗವಂತ ನಾವು ಅಜ್ಞಾನಿಗಳು ಭಕ್ತಿಯಿಂದ ನಿನ್ನ ಸ್ಮರಣೆಯನ್ನು ಮಾಡುತ್ತೇವೆ. ನಮ್ಮ ಮನಸ್ಸಿನಲ್ಲಿರುವ ಕಾಮ ಕ್ರೋಧ ದೋಷಗಳನ್ನು ಪರಿಹಾರ ಮಾಡುವುದು ಒಂದು ಕಡೆಗಾದರೆ ತತ್ವಜ್ಞಾನ ಶುದ್ಧವಾಗಿರಲಿ ಜ್ಞಾನದಲ್ಲೇ ಅಶುದ್ಧಿ ಬೇಡ ತಪ್ಪು ತಿಳಿವಳಿಕೆ ಬೇಡ ದೇವರ ಬಗ್ಗೆ, ಗುರುಗಳ ಬಗ್ಗೆ ಸರಿಯಾದ ತಿಳಿವಳಿಕೆ ಇರಲಿ. ಅವರ ಬಗ್ಗೆ ಸರಿಯಾದ ಭಕ್ತಿ ಶ್ರದ್ಧೆ ಇರಲಿ ನಮ್ಮ ಉದ್ಧಾರವಾಗಲಿ. ಸಕಾಮದಂತಹ ಭಕ್ತಿಯನ್ನು ಮಾಡದಂತೆ ನಿಷ್ಕಾಮವಾದ ಭಕ್ತಿ ಮಾಡುವಂತೆ ನಿಷ್ಕಲ್ಮಶ ರೀತಿಯಲ್ಲಿ ನನಗೆ ಅನುಗ್ರಹ ಮಾಡು ಎಂದು ಬೇಡಿಕೊಳ್ಳಬೇಕು. ಆ ತರಹದ ನಿಷ್ಕಲ್ಮಶವಾದ ಭಕ್ತಿದೇವರಲ್ಲಿ ಬರಬೇಕೆಂದರೆ ಮಹಾಭಾರತದ ಮಂಗಳದ ಪ್ರಸಂಗದಲ್ಲಿ ಕೊನೆಯ ಹಂತದಲ್ಲಿ ಈ ಮಾತನ್ನು ಹೇಳುತ್ತದೆ. ಮಹಾಭಾರತ ಶ್ರವಣವನ್ನು ಕೇಳೋದೇ ಕೇಳುವುದರ ಮೂಲಕ ಅಲ್ಲಿ ಬಂದಂತಹ ನಾನಾ ವಿಧವಾದ ಕಥೆಗಳನ್ನು ಶ್ರವಣ ಮಾಡಿ ಇಂದಿಗೂ ದೇವರು ನಮಗೆ ಅನುಗ್ರಹ ಮಾಡಿದ ಚಿತ್ರಣ ನಮ್ಮ ಕಣ್ಣ ಮುಂದೆ ಮೂಡುತ್ತದೆ.