ಚ್ಯುತನಲ್ಲದ ಅಚ್ಯುತನ ಸಾಹಚರ್ಯವಿರಲಿ

ಸುಕೃತ ಕರ್ಮಗಳಿಂದ ಮಾಡಿದರೆ ದೇವರ ಜ್ಞಾನ ನಮಗೆ ಆಗುತ್ತದೆ. ಹಾಗಾದರೆ ಕರ್ಮಗಳನ್ನು ತಿಳಿಸುವ ಆ ವೇದಗಳು ಧರ್ಮಶಾಸ್ತ್ರಗಳು ಇವುಗಳೆಲ್ಲ ಅಚ್ಯುತ ಸತ್ ಕತೆಗಳು.
ಇವುಗಳನ್ನೆಲ್ಲ ಕೇಳಿದರೆ ದೇವರು ನಮ್ಮ ಮನಸ್ಸಿನಲ್ಲಿ ನೆಲೆಸುತ್ತಾನೆ. ಕರ್ಮ ಮಾಡದಿದ್ದರೆ ದೇವರು ನಮ್ಮ ಮನಸ್ಸಿಗೆ ಬರೋದೇ ಇಲ್ಲ. ಏಕಾದಶಿ ವ್ರತವನ್ನು ಅಷ್ಟು ನಿಷ್ಠೆಯಿಂದ ಮಾಡಿದ್ದಕ್ಕೆ ತಾನೇ ಅಂಬರೀಶ ಚಕ್ರವರ್ತಿಗೆ ಇಂತಹ ನಿಷ್ಠೆ ಬಂದಿರೋದು. ಬರಿ ದೇವರ ರಾಮಕೃಷ್ಣರ ಕಥೆಗಳಷ್ಟೇ ಸತ್ಕತೆಗಳಲ್ಲ. ನಮ್ಮ ನಮ್ಮ ಕರ್ತವ್ಯಗಳನ್ನು ತಿಳಿಸುವಂತಹ ಧರ್ಮಶಾಸ್ತ್ರದ ವಿಧಿ ವಿಧಾನಗಳು ವೇದಗಳಲ್ಲಿ ಬರುವಂತಹ ಎಲ್ಲ ವಿಧಗಳು ಭಗವಂತನ ಸತ್ಯತೆಗಳೇ. ಯಾವ ಕಥಿಗಳಿಂದ ಯಾವ ವಿಧಿಗಳಿಂದ ಅಚ್ಯುತ ನಮ್ಮೆಲ್ಲರ ಹೃದಯದಲ್ಲಿ ಸನ್ನಿ ವಾಸವಾಗುತ್ತಾನೆ ನಮ್ಮ ಮನಸ್ಸಿಗೆ ಬರುತ್ತಾನೆ ಅಂತಹ ಕಥೆಗಳು ಆ ಎಲ್ಲ ವಿಧಿ ವಿಧಾನಗಳು, ಅವುಗಳನ್ನು ಕೇಳಿ ವೇದದಲ್ಲಿ ಹೇಳಿದ ವಿಧಗಳನ್ನು ಧರ್ಮಶಾಸ್ತ್ರದ ನಿಯಮಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಧನವಂತರಗಳ ಕಥೆಗಳನ್ನು ಕೇಳಿ ಅವರ ಭಕ್ತರ ಕಥೆಗಳನ್ನು ಕೇಳಿ, ಆಡುವ ಎಲ್ಲ ಮಾತುಗಳಲ್ಲೂ ದೇವರ ಕಥೆಗಳನ್ನು ಹಾಸುಹೊಕ್ಕಾಗೋ ಮಾಡಿಕೊಂಡು ನಮ್ಮ ಕಿವಿಗೆ ಯಾವಾಗಲೂ ಭಗವಂತನ ಆ ಗುಣಗಳ ಪರಮಾತ್ಮನ ನಾನಾ ವಿಧವಾದ ಉಪಕಾರಗಳು ಭಗವಂತನ ಮಹಿಮೆ ವರ್ಣನೆ ನಮ್ಮ ಸುತ್ತಲೂ ಸುತ್ತಾಡುತ್ತಾ ಇರಬೇಕು.
ಮಂತ್ರಿಗಳ ರಾಜರು ಮಾತಾಡುತ್ತಾರೆಂದರೆ ಬಹಳ ಉತ್ಸಾಹದಿಂದ ಮಾತಾಡುತ್ತೇವೆ. ಆದರೆ ಭಾಗವತದದಲ್ಲಿ ಒಂದಿದೆ ಅದೆಲ್ಲ ಚ್ಯುತ ಸತ್ಕಥ. ಯಾರ ಸ್ಥಾನವು ಸ್ಥಿರವಲ್ಲ ಅವರೆಲ್ಲರೂ ಅಚ್ಯುತರಲ್ಲ ತಮ್ಮ ತಮ್ಮ ಪದಗಳಿಂದ ಚ್ಯುತರಾಗುವವರು. ಅಚ್ಯುತನಾದ ವ್ಯಕ್ತಿ ಅನಂತಕಾಲದಲ್ಲಿ ಪದವಿಯಲ್ಲಿ ಇರುವವನ ಕಥೆಯನ್ನು ಕೇಳುವುದಕ್ಕೆ ಕಿವಿಯನ್ನು ಮೀಸಲಾಗಿಡಿ ಎಂದು ಶ್ರೀಮದ್ ಭಾಗವತ ಹೇಳುತ್ತದೆ. ಪರಮಾತ್ಮನ ಮಂದಿರಗಳನ್ನು ನೋಡುವುದಿಲ್ಲ ನಮ್ಮ ಕಣ್ಣುಗಳನ್ನು ಮೀಸಲಾಗಿಡಬೇಕು ಪರಮಾತ್ಮನ ಅಜಿತ್ಥಾಣ ಗಳಾದ ಶಾಲಿಗ್ರಾಮ, ಪ್ರತಿಮೆಗಳು, ಪ್ರತಿಷ್ಠಾಪನೆ ಮಾಡಿದಂತಹ ಅನೇಕ ಭಗವಂತನ ಮಂದಿರಗಳು. ನೋಡುವುದಕ್ಕೆ ಕಣ್ಣುಗಳನ್ನು ಮೀಸಲಾಗಿಡಿ.
ವಿದುರ ತೀರ್ಥಯಾತ್ರೆಯನ್ನು ಮಾಡುವಾಗ ಮಹಾನುಭಾವರದಂತಹ ದೇವರು ಋಷಿಗಳು ಪ್ರತಿಷ್ಠಾಪನೆ ಮಾಡಿದಂತಹ ಅನೇಕ ಮಂದಿರಗಳಿಗೆ ಹೋಗಿ ಭಗವಂತನ ದರ್ಶನವನ್ನು ಮಾಡುತ್ತಿದ್ದನಂತೆ. ತೀರ್ಥಯಾತ್ರೆಯ ಪ್ರಧಾನವಾದ ಉದ್ದೇಶ ಆತರಹದ ಒಂದು ತತ್ವಜ್ಞಾನಿಗಳು ತಪಸ್ವಿಗಳು ದೇವತೆಗಳು ದೇವಾಂಶ ಸಂಭೂತರು ಪ್ರತಿಷ್ಠಾಪನೆ ಮಾಡಿದಂತಹ ಆ ದೇವಸ್ಥಾನಗಳಲ್ಲಿ ಇರುವಂತಹ ಒಂದು ವಾತಾವರಣವಿದೆ ಅದರೊಳಗೆ ಇವರು ಪ್ರವೇಶ ಮಾಡಿದಾಗಲೇ ಇವರ ಮನಸ್ಸಿನಲ್ಲಿ ಒಂದು ತರಹದ ಬದಲಾವಣೆಯಾಗುತ್ತದೆ. ಮಾಡಿದಂತ ಪಾಪಗಳೆಲ್ಲಾ ಸವೆದು ಹೋಗುತ್ತವೆ ಉದಾತ್ತವಾದ ವಿಚಾರಗಳು ಮನದಲ್ಲಿ ಬರುತ್ತವೆ, ಆದರೆ ಇದನ್ನು ಸ್ವೀಕಾರ ಮಾಡುವ ತಯಾರಿಯಲ್ಲಿ ತೀರ್ಥಯಾತ್ರೆಗೆ ಹೋಗಬೇಕು. ಯಾವುದೋ ಲೌಕಿಕವಾದ ಆಶಾ ಆಮಿಷಗಳಿಗೆ ಇನ್ನಾವುದೋ ವಿಷಯಸಕ್ತಿಯಾಗಿ ಪ್ರಕೃತಿಯ ಸೌಂದರ್ಯ ನೋಡೋಣ ಎಂದು ತೀರ್ಥಯಾತ್ರೆಯನ್ನು ಮಾಡುತ್ತಿದ್ದರೆ ಆ ಪ್ರಕೃತಿಯ ಸೌಂದರ್ಯ ಮಾತ್ರ ಆ ನೋಡುಗನ ಮನದಲ್ಲಿ ಕೊಡುತ್ತದೆ.