ಕುಂದಗೋಳ(ಧಾರವಾಡ): ಪಕ್ಕದ ಮನೆಗೆ ಆಟವಾಡಲು ತೆರಳಿದ್ದ ಬಾಲಕಿ ಮೇಲೆ ಮನೆ ಗೋಡೆ ಕುಸಿದು ಮೃತಪಟ್ಟ ಘಟನೆ ಪಟ್ಟಣದ ಸಾದಗೇರಿ ಓಣಿಯಲ್ಲಿ ನಡೆದಿದೆ. ಅಮೃತಾ ಗದಿಗೆಪ್ಪ ಮೆಣಸಗೊಂಡ (೫) ಮೃತಪಟ್ಟ ಬಾಲಕಿ. ಬಾಲಕಿ ತಮ್ಮ ಮನೆ ಪಕ್ಕದಲ್ಲಿರುವ ರಾಮಣ್ಣ ಅರ್ಕಸಾಲಿ ಎಂಬುವವರ ಮನೆಗೆ ಆಟವಾಡಲು ಹೋಗಿದ್ದಾಗ ದುರಂತ ಸಂಭವಿಸಿದೆ. ಸತತ ಮಳೆಗೆ ಮಣ್ಣಿನ ಮನೆಯ ಗೋಡೆ ಕುಸಿದುಬಿದ್ದಿದೆ.