ಆದಿತ್ಯನಾಮಕ ಹರಿಯೇ ಪ್ರಕೃತಿ ನಿಯಾಮಕ

0
5

ನಾಗರಾಜನನ್ನು ಭೇಟಿ ಮಾಡಿದ ಭೃಗುವಿಗೆ ಆದಿತ್ಯನ ಬಗ್ಗೆ ಕೇಳಬೇಕಾಗಿ ಬಂದಿತು. ಆತ ಅದೆಷ್ಟು ಈ ಜಗತ್ತಿನ ನಿತ್ಯ ವ್ಯಾಪಾರ ಯಾರಿಂದ ನಡೆಯುತ್ತದೆ. ನಾಗರಾಜ ನಾನು ಧರ್ಮಾರಣ್ಯದಿಂದ ಬಂದಿದ್ದೇನೆ. ನನಗೆ ಧರ್ಮದ ಮರ್ಮವನ್ನು ಮತ್ತು ಸೂರ್ಯನ ಮಹಿಮೆಯನ್ನು ದಯಮಾಡಿ ತಿಳಿಸು ಎಂದು ಭೃಗುವು ಕೇಳಿದನು.
ಅದಕ್ಕೆ ನಾಗರಾಜ ಮಾತನಾಡಿ, ಬ್ರಾಹ್ಮಣ ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯಕರನಾದವ ಸೂರ್ಯ. ಈತನು ತನ್ನೊಳಗೆ ಆದಿತ್ಯ ಎಂಬ ಶ್ರೀಹರಿಯನ್ನು ಧರಿಸಿದ್ದಾನೆ. ಸೂರ್ಯನಿಂದ ಉಂಟಾಗುವ ಒಳಿತುಗಳಿಗೆಲ್ಲ ಆದಿತ್ಯನಾಮಕ ಹರಿಯೇ ನಿಯಾಮಕ. ಸೂರ್ಯನ ಕಿರಣಗಳಲ್ಲಿ ಪ್ರಾಣಿಗಳನ್ನು ಹುಟ್ಟಿಸುವ ಶಕ್ತಿಯಿದೆ. ಬ್ರಹ್ಮಾದಿ ದೇವತೆಗಳು ವಾಲಖಿಲ್ಯರೆಂಬ ಋಷಿಗಳು, ಸಿದ್ಧಸಾಧ್ಯರು ಈ ಸೂರ್ಯಂತರ್ಯಾಮಿಯ ದಯೆಯಿಂದಲೇ ತಮ್ಮ ಕರ್ಮಗಳಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. ಜೀವಸೃಷ್ಟಿಯೂ ಈತನಿಂದಲೇ. ಇನ್ನೊಂದು ಆಶ್ಚರ್ಯ ವಿಷÀಯವೆಮದರೆ ಒಂದು ದಿನ ಸಪ್ತಾಶ್ವಮ ಕುದುರೆಗೆ ರಶ್ಮಿಯಾಗಿ ನಾನು ಮುಂದೆ ಸಾಗುತ್ತಿದ್ದೆ. ಮಧ್ಯಾಹ್ನ ಕಾಲದಲ್ಲಿ ಒಬ್ಬ ಬ್ರಾಹ್ಮಣ ಸೂರ್ಯಮಂಡಲ ಪ್ರವೇಶಿಸಿದ. ಅವನೂ ಸೂರ್ಯನಂತೆಯೇ ಇದ್ದ. ಇವನ್ಯಾರೆಂದು ತಿಳಿಯದ ನಾನು ಸೂರ್ಯನಲ್ಲಿ ಕೇಳಿದೆ. ಅದಕ್ಕೆ ಸೂರ್ಯ ಹೇಳಿದ. ಇವನು ಸುರ-ಯಕ್ಷ-ಗಂಧರ್ವ ಯಾರೂ ಅಲ್ಲ ಪ್ರಾಮಾಣಿಕವಾಗಿ ಉಂಛವೃತ್ತಿಯಲ್ಲಿ (ಉಂಛ ವೃತ್ತಿ- ಕೊಯ್ಲು ಆದ ಬಳಿಕ ಧಾನ್ಯ ಹೆಕ್ಕಿ ಜೀವಿಸುವುದು) ಬದುಕುವ ಭೂಲೋಕದ ಬ್ರಾಹ್ಮಣನು ಎಂದ.
ನನಗೆ ಭೂಮಿಯ ಬ್ರಾಹ್ಮಣ ಇಲ್ಲಿಗೆ ಹೇಗೆ ಬಂದ ಎಂದು ಆಶ್ಚರ್ಯವಾಯಿತು. ಅದಕ್ಕೆ ಸೂರ್ಯ ಉತ್ತರಿಸಿದ. ಭೂಮಿಯಲ್ಲಿ ಎಲ್ಲ್ಲ ಆಸೆಗಳನ್ನು ತೊರೆದು ಶ್ರೀಹರಿಯ ಪಾದಾರವಿಂದವನ್ನು ಆಶ್ರಯಿಸಿದ ಪುಣ್ಯದ ಸಿದ್ಧಿ ಎಂದ. ಆದ್ದರಿಂದ ಬ್ರಾಹ್ಮಣನೇ ಕೇಳು ಹರಿಭಕ್ತನಾಗದೆ ಮಾಡಿದ ಧರ್ಮ, ಹರಿಭಕ್ತಿ, ದಾನ, ತೀರ್ಥ, ತಪಸ್ಸು, ಯಜ್ಞ ಎಲ್ಲವೂ ಎಲ್ಲ ಒಳ್ಳೆಯ ಕೆಲಸಗಳೂ ವ್ಯರ್ಥ ಆದ್ದರಿಂದ ನಿನಗೆ ಯೋಗ್ಯವಾದ ಕರ್ತವ್ಯಗಳನ್ನು ಮಾಡುತ್ತಾ ಹರಿಗೆ ಅವುಗಳನ್ನು ಅರ್ಪಿಸು. ಸಚ್ಛಾಸ್ತ್ರತಗಳನ್ನು ಶ್ರವಣ ಮಾಡು. ಸಂಶಯ ಬಂದಲ್ಲಿ ಗುರುಗಳನ್ನಾಶ್ರಯಿಸಿ ಪರಿಹಾರಸಿಕೋ.

Previous articleಆರೋಗ್ಯ ಇಲಾಖೆಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯ
Next articleಶುದ್ಧ ಕುಡಿವ ನೀರಿನ ಮಾತು ಬರಿ ಲೊಳಲೊಟ್ಟೆ