ನವದೆಹಲಿ: ದೇಶದ ಪ್ರತಿ ಜಿಲ್ಲೆಗಳಲ್ಲೂ ಭಾರತೀಯ ಮಾನದಂಡಗಳ ಬ್ಯೂರೋ (ಃIS) ಸೌಲಭ್ಯ ಕಲ್ಪಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಆಂಧ್ರಪ್ರದೇಶದಲ್ಲಿ ಮಂಗಳವಾರ ನಡೆದ ಬಿಐಎಸ್ ೯ನೇ ಆಡಳಿತ ಮಂಡಳಿ ಸಭೆ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ೩೭೧ ಜಿಲ್ಲೆಗಳು ಬಿಐಎಸ್ ಸೌಲಭ್ಯ ಹೊಂದಿವೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಃIS ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
೨೦೧೪ರಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ಕೇವಲ ೧೪ ಗುಣಮಟ್ಟ ನಿಯಂತ್ರಣ ಆದೇಶ(ಕಿಅಔ)ಗಳಿದ್ದವು. ಆದರೆ, (ಕ್ಯೂಸಿಒಗಳು) ನಂತರದ ೧೦ ವರ್ಷಗಳಲ್ಲಿ ೨೦೨೫ರ ವೇಳೆಗೆ ೭೬೯ ಉತ್ಪನ್ನಗಳ ಪೈಕಿ ೧೧೯ಕ್ಕೂ ಹೆಚ್ಚು ಕ್ಯೂಸಿಒಗಳನ್ನು ಹೊಂದಿದೆ. ಉತ್ಪನ್ನಗಳ ತಯಾರಿಕೆ ವ್ಯವಸ್ಥೆ, ವ್ಯಾಪಾರ ಉದ್ಯಮಗಳನ್ನು ಮತ್ತಷ್ಟು ಬಲಪಡಿಸಲು ಃIS ಮತ್ತಷ್ಟು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸೆಪ್ಟೆಂಬರ್‌ನಲ್ಲಿ ೮೯ನೇ Iಇಅ ಸಾಮಾನ್ಯ ಸಭೆ: ಸೆಪ್ಟೆಂಬರ್ ೮ರಿಂದ ೧೯ರವರೆಗೆ ದೆಹಲಿಯಲ್ಲಿ ೮೯ನೇ ಬಿಐಎಸ್ ಸಾಮಾನ್ಯ ಸಭೆ ಆಯೋಜಿಸಲಾಗುತ್ತಿದೆ. ಉತ್ಪನ್ನಗಳ ಗುಣಮಟ್ಟದ ಮಾನದಂಡಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ಎಂದಿಗೂ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಬಿಐಎಸ್ ಬಹು ದೂರ ಸಾಗಿದೆ. ಅಂತರಾಷ್ಟ್ರೀಯ ಮಾನದಂಡಗಳೊAದಿಗೆ ಭಾರತೀಯ ಮಾನದಂಡಗಳನ್ನು ಸಮನ್ವಯಗೊಳಿಸುವ ಮೂಲಕ ನಾವಿನ್ನೂ ಗಮನಾರ್ಹ ಹೆಜ್ಜೆ ಗುರುತು ಮೂಡಿಸಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ಆಂಧ್ರಪ್ರದೇಶದ ಆಹಾರ xಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಃIS ಮತ್ತು ಗ್ರಾಹಕ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಆಂಧ್ರಪ್ರದೇಶ, ಉತ್ತರಾಖಂಡ, ಬಿಹಾರ, ಗುಜರಾತ್ ಮತ್ತು ಅಸ್ಸಾಂ ರಾಜ್ಯ ಸಚಿವರು ಭಾಗವಹಿಸಿದ್ದರು.
Home ತಾಜಾ ಸುದ್ದಿ ಆಂಧ್ರಪ್ರದೇಶದಲ್ಲಿ ಬಿಐಎಸ್ ೯ನೇ ಆಡಳಿತ ಮಂಡಳಿ ಸಭೆ: ಪ್ರತಿ ಜಿಲ್ಲೆಗೂ ಬಿಐಎಸ್ ಸೌಲಭ್ಯಕ್ಕೆ ಪ್ರಯತ್ನ