ಪೇ ಮೇಯರ್ ರೂವಾರಿಗಳ ವಿರುದ್ಧ ಮಾನನಷ್ಟ ಕೇಸ್: ಮೇಯರ್

0
29
ಪೇ ಮೇಯರ್

ಹುಬ್ಬಳ್ಳಿ: ಪೇ ಮೇಯರ್ ಅಭಿಯಾನ ನಡೆಸಿದ ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು. ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಕಾಂಗ್ರೆಸ್ ಮುಖಂಡರಿಗೆ ನೊಟೀಸ್ ಜಾರಿ ಮಾಡುವಂತೆ ನಮ್ಮ ವಕೀಲರಿಗೆ ಸೂಚಿಸಿರುವೆ' ಎಂದರು. ರಾಷ್ಟ್ರಪತಿಗಳ ಪೌರ ಸನ್ಮಾನದ ವೇಳೆ ಅಕ್ರಮ ನಡೆಸಿರುವುದಾಗಿ ನನ್ನ ವಿರುದ್ಧ ವೈಯಕ್ತಿಕ ಆರೋಪ ಮಾಡಲಾಗಿದೆ. ಅಲ್ಲದೇ ಪೇ ಮೇಯರ್ ಅಭಿಯಾನ ನಡೆಸಲಾಗಿದೆ. ಆಧಾರ ರಹಿತವಾದ ಆರೋಪದಿಂದ ಎರಡೂ ಸಾಂವಿಧಾನಿಕ ಹುದ್ದೆಗಳ ಘನತೆಗೆ ಧಕ್ಕೆ ಬಂದಿದೆ. ಆದ್ದರಿಂದ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿರುವೆ’ ಎಂದು ಮೇಯರ್ ವಿವರಿಸಿದರು.

Previous articleಆರ್‌ಎಸ್ಎಸ್ ನಿಷೇಧ ಮಾಡಿ ಎನ್ನುವುದು ದುರ್ದೈವ
Next articleಗೌನ್ ಗದ್ದಲಕ್ಕೆ ಪಾಲಿಕೆ ಸಾಮಾನ್ಯ ಸಭೆ ಬಲಿ