ನಿಮ್ಮ ಮುಗುಳ್ನಗೆ ಕಳೆದುಕೊಳ್ಳಬೇಡಿ

0
21

ಪ್ರೇಮವು ನಮ್ಮ ಹೃದಯದಲ್ಲಿ ಇದೆ. ಆದರೆ ಕಷ್ಟಕರ ಪರಿಸ್ಥಿತಿಗಳಲ್ಲಿ ಅದು ಹೇಗೆ ಬದಲಾಗುತ್ತದೆ? ನಿಮ್ಮ ಕೃತ್ಯಗಳಿಗೆ ಸವಾಲುಗಳು ಎದುರಾದಾಗ, ಅವು ಸರಿಯಾದವುಗಳಾಗಿವೆಯೇ ಎಂದು ಪರೀಕ್ಷಿಸಿ. ನೀವು ಏನಾದರೂ ತಪ್ಪು ಮಾಡಿದ್ದೀರಾ? ಅದಕ್ಕಿಂತ ಉತ್ತಮವಾಗಿ ಮಾಡಲು ಸಾಧ್ಯವಿತ್ತೇ? ಅಥವಾ ಜನರು ನಿಮ್ಮನ್ನು ಮತ್ತೊಂದು ರೀತಿಯಲ್ಲಿ ಗ್ರಹಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಿ.
ಜನರು ನಿಮ್ಮನ್ನು ನಿಂದಿಸಿದಾಗ, ಆ ನಿಂದನೆಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ. ಇದರಿಂದಾಗಿ ಅವರು ನಿಮ್ಮೊಂದಿಗೆ ಇರುವ ಸ್ನೇಹವನ್ನು ಅಪಾಯಕ್ಕೆ ತಳ್ಳುತ್ತಾರೆ. ಧೈರ್ಯದಿಂದ ನಿಮ್ಮನ್ನು ಟೀಕಿಸುತ್ತಾರೆ ಮತ್ತು ನೀವು ಸುಧಾರಿಸಬೇಕೆಂದು ಆಶಿಸುತ್ತಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಮತ್ತು ಆ ನಿಂದನೆಗಳ ಬಗ್ಗೆ ಯೋಚಿಸಿ. ಕೋಪದಿಂದ ಅಥವಾ ಅಸೂಯೆಯಿಂದ ನಿಂದಿಸುವವರು ನಿಮ್ಮ ಸಾಧನೆಯಿಂದ ಪ್ರೇರಿತರಾಗಿರಬಹುದು. ಇಂತಹವರ ಮೇಲೆ ಕನಿಕರ ತೋರಿಸಿ.
ಜೀವನದಲ್ಲಿ ಸದಾ ಒಳ್ಳೆಯ ಸಂಗತಿಗಳು ಮಾತ್ರ ನಡೆಯುವುದಿಲ್ಲ. ಸವಾಲುಗಳು ಎಂದಿಗೂ ಇದ್ದೇ ಇರುತ್ತವೆ. ಅವುಗಳನ್ನು ಮುಗುಳ್ನಗೆಯಿಂದ ಸ್ವೀಕರಿಸುವುದು ನಮಗೆ ಬಿಟ್ಟ ವಿಷಯ. ಏನಾಗಲೀ, ನೀವು ನಿಮ್ಮ ಮುಗುಳ್ನಗೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಸ್ಪೂರ್ತಿ ಮತ್ತು ಉತ್ಸಾಹವನ್ನು ಕಳೆದುಕೊಳ್ಳದ ಸಂಕಲ್ಪವನ್ನು ಮಾಡಿರಿ. ಇದರಿಂದ ನಿಮ್ಮ ಸುತ್ತಲಿನ ಜನರಿಗೆ ಶಕ್ತಿ ಮತ್ತು ಪ್ರೇರಣೆಯನ್ನು
ನೀಡಬಹುದು.
ಹಿಂದೂ ದೇವಾಲಯಗಳಲ್ಲಿ ಆರತಿಯನ್ನು ಚಕ್ರಾಕಾರದ ರೂಪದಲ್ಲಿ ದೇವರ ಸುತ್ತಲೂ ಹಾಯಿಸುತ್ತಾರೆ. ಇದಕ್ಕೆ ಇರುವ ಅರ್ಥವೆಂದರೆ, ಜೀವನವು ಸದಾ ಬೆಳಕಿನೆಡೆಗೆ ಗಮಿಸಬೇಕು. ಮೇಣಬತ್ತಿಯ ಜ್ವಾಲೆಯು ಯಾವಾಗಲೂ ಮೇಲೆಯೇ ಹೋದಂತೆ, ನಮ್ಮ ಜೀವನವು ಸದಾ ದೈವದ ಸುತ್ತ ತಿರುಗಬೇಕು. ಎಲ್ಲೆಡೆ ದೈವವನ್ನು ನೋಡುವ ಶಕ್ತಿ ನಮ್ಮೊಳಗಿರಲಿ. ನಿಮ್ಮ ಮುಗುಳ್ನಗೆಯನ್ನು ಮತ್ತು ಆನಂದವನ್ನು ಕಳೆದುಕೊಳ್ಳದೆ, ಜೀವನವನ್ನು ಸವಾಲುಗಳೊಂದಿಗೆ ಸಂಭ್ರಮದಿAದ ಎದುರಿಸಿ. ಈ ರೀತಿಯಾಗಿ ನೀವು ಪ್ರತಿ ಪರಿಸ್ಥಿತಿಯಲ್ಲೂ ಪ್ರೇರಣಾಪೂರ್ವಕವಾಗಿ ಬೆಳಗಬಹುದು.

Previous articleಕಾಣುವ ಕನಸಿಗೂ ಕಾನೂನು ಚೌಕಟ್ಟು!
Next articleಪೊಲೀಸ್‌ರ ಮೇಲೆ ಹಲ್ಲೆಗೆ ಯತ್ನ: ನಟೋರಿಯಸ್ ಪಾಲಾ ಬಂಧನ