ನಿನ್ನೆ ನಡೆದಿದ್ದು ಬಂಡಾಯ ಸಭೆಯಲ್ಲ…

0
16

ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಒಗ್ಗಟ್ಟಾಗಿ ಬೆನ್ನಿಗೆ ನಿಲ್ಲಬೇಕು

ಬೆಂಗಳೂರು: ನಿನ್ನೆ ನಡೆದಿದ್ದು ಬಂಡಾಯ ಸಭೆಯಲ್ಲ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಡಿಯರ್ ಮೀಡಿಯಾ, ನಿನ್ನೆ ನಡೆದಿದ್ದು ಬಂಡಾಯ ಸಭೆಯಲ್ಲ, ಬಿಜೆಪಿ ಬಲವರ್ಧನೆಗಾಗಿ ಸಮಾನ ಮನಸ್ಕರ ಸಭೆ. ಕರ್ನಾಟಕದ ಅತ್ಯಂತ ಜನಪ್ರಿಯ ಬಿಜೆಪಿ ನಾಯಕ ಯತ್ನಾಳರ ನೇತೃತ್ವದಲ್ಲಿ ನಡೆದ ಸಭೆಯದು. ಪುನೀತ್ ಕೆರೆಹಳ್ಳಿ ಸೇರಿದಂತೆ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಒಗ್ಗಟ್ಟಾಗಿ ಬೆನ್ನಿಗೆ ನಿಲ್ಲಬೇಕು ಎಂದು ಮನವಿ ಮಾಡಿಕೊಂಡೆ ಎಂದಿದ್ದಾರೆ.

Previous articleಲಾರಿ ಹಾಯ್ದು ೩೩ ಕುರಿ ಸಾವು : ಕುರಿಗಾಹಿಗೆ ತೀವ್ರ ಗಾಯ
Next articleಮೆಟ್ರೋ ಟ್ರ್ಯಾಕ್‌ಗೆ ಬಿದ್ದ ಮಗು: ಮುಂದೇನಾಯ್ತು…..