ನಟ್ ಬೋಲ್ಟ್ ಕಟ್: ನೀರು ಪೂರೈಕೆ ಸ್ಥಗಿತ

0
16

ಇಳಕಲ್ : ಆಲಮಟ್ಟಿ ನೀರು ಪೂರೈಕೆ ಜಾಕ್ ವೆಲ್‌ದಲ್ಲಿ ನಟ್ ಬೋಲ್ಟ್ ಕಟ್ ಆಗಿದ್ದರಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ.
ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ನೀರು ಪೂರೈಕೆ ಕೈ ಕೊಟ್ಟಿದ್ದು ಸಾರ್ವಜನಿಕರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಎರಡು ದೊಡ್ಡ ಹಬ್ಬಗಳ ಸಮಯದಲ್ಲಿ ನೀರು ಪೂರೈಕೆ ಸ್ಥಗಿತಗೊಂಡ ಕಾರಣ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದು ನಗರಸಭೆಯ ಅಧಿಕಾರಿಗಳು ಯಾಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುವ ಹಾಗಾಗಿದೆ.
ಅದರಲ್ಲೂ ಮಾರ್ಚ ತಿಂಗಳಲ್ಲಿ ಕುಡಿಯುವ ನೀರು ಸರಬರಾಜು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ರಾತ್ರಿ ವೇಳೆಯಲ್ಲಿ ಬರುವ ನೀರು ಮುಂಜಾನೆ ಎನ್ನುವದರೊಳಗಾಗಿ ಸಿಗದೇ ಸಾರ್ವಜನಿಕರು ಮುಖ ಮುಖ ನೋಡುವಂತಾಗಿತ್ತು. ಈಗ ಎಪ್ರಿಲ್ ತಿಂಗಳಲ್ಲಾದರೂ ಕುಡಿಯುವ ನೀರು ಸರಬರಾಜನ್ನು ಸರಿಯಾಗಿ ಮಾಡದೇ ಹೋದರೆ ಸಾರ್ವಜನಿಕರ ತಾಳ್ಮೆ ಕೈತಪ್ಪಿ ಹೋಗಿ ಯಾರು ಯಾವಾಗ ನಗರಸಭೆಯ ಕಚೇರಿಯ ಮುಂದೆ ಪ್ರತಿಭಟನೆಗೆ ಮುಂದಾಗುತ್ತಾರೋ ಹೇಳುವದು ಕಷ್ಟ. ಶಾಸಕ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಆದೇಶ ಮಾಡಿದ ಹಾಗೆ ಸಮರೋಪಾದಿಯಲ್ಲಿ ಅಧಿಕಾರಿಗಳು ನೀರು ಸರಬರಾಜು ಮಾಡುವಲ್ಲಿ ನಿರತವಾಗ ಬೇಕಾಗಿದೆ.

Previous articleವಿಕೃತ ಮೆರೆದ ಮಸ್ಕಿ ಶಾಸಕನ ಸಹೋದರ, ಪುತ್ರ
Next articleರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದ ಸರ್ಕಾರ: ನೋ ಸ್ಟಾಕ್ ಬೋರ್ಡ್ ಹಾಕಿದೆ