ತಿಳಿವಳಿಕೆ ಕೊರತೆಯೇ ಅವನತಿ

0
13
PRATHAPPHOTOS.COM

ಅವನತಿಗೆ ಕಾರಣ ನಮ್ಮಲ್ಲಿ ಸರಿಯಾದ ತಿಳಿವಳಿಕೆ ಇಲ್ಲದೆ ಇರುವುದು. ನಿತ್ಯದಲ್ಲಿ ಎರಡು ಹತ್ತು ಸಂಧ್ಯಾವಂದನ ಗಾಯತ್ರಿ ಜಪ ವಿಶೇಷವಾದ ಭಕ್ತಿಯಿಂದ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗಂಡಸರು ಭಕ್ತಿಪೂರ್ವಕವಾಗಿ ಜಪ ಮಾಡಿದರೆ ಅದರಿಂದಾಗಿ ಪರೋಕ್ಷವಾಗಿ ಹೆಣ್ಣು ಮಕ್ಕಳಿಗೂ ಕೂಡ ಮಾನಸಿಕ ನೆಮ್ಮದಿ ಕೊಡುತ್ತಾನೆ ಭಗವಂತ.
`ಧಿಯೋ ಯೋನ ಪ್ರಚೋದಯಾತ್’
ನಮಗೆಲ್ಲರಿಗೂ ಸದ್ಬುದ್ಧಿಯನ್ನು ದೇವರು ಕೊಡಲಿ ಎಂಬ ಪ್ರಾರ್ಥನೆ ಇದೆ. ಈಗಾಗಲೇ ದೇವರು ಬುದ್ಧಿಯನ್ನು ಕೊಟ್ಟದ್ದರ ಉಪಕಾರ ಸ್ಮರಣೆಯನ್ನು ಮಾಡಿ, ಸದ್ಬುದ್ಧಿಯನ್ನು ದಯಪಾಲಿಸಲಿ ಎಂದು ಪ್ರಾರ್ಥನೆಯನ್ನು ಮಾಡಿ ತಮಗೂ ತಮ್ಮೆಲ್ಲರಿಗೂ ಸದ್ಬುದ್ಧಿಯನ್ನು ಕರುಣಿಸುತ್ತಾನೆ ಭಗವಂತ.
ಯಾವ ಬದ್ಧಿದೇವರು ದಯಪಾಲಿಸಬೇಕು ಎಂದರೆ. ಎಲ್ಲರ ಬುದ್ಧಿ ಧಾರ್ಮಿಕ ಬುದ್ಧಿ ಆಗಬೇಕು. ದೇವರಲ್ಲಿ ಸ್ಪರ್ಧೆ ಮಾಡುವ ಬುದ್ಧಿ, ಕಿರಿಯರಲ್ಲಿ ಪ್ರೀತಿ ಗೌರವಗಳನ್ನು ತೋರುವ ಬುದ್ಧಿ, ಮುಖ್ಯವಾಗಿ ವಿಚ್ಛೇದನಕ್ಕ ಕಾರಣವೇ ಸಹನಶೀಲತೆ ಇಲ್ಲದಿರುವದೇ ಮುಖ್ಯ ಕಾರಣ. ಯಾವಾಗಲೂ ನನ್ನ ಮನಸ್ಸಿಗೆ ಬಂದದ್ದೇ ಆಗಬೇಕು ಎಂಬುವ ಹಠವನ್ನು ಬಿಡಬೇಕು. ನನ್ನಂತೆ ಇನ್ನೊಬ್ಬರು ಇದ್ದಾರೆ ಅವರ ಮನಸ್ಸಿಗೆ ತಕ್ಕಂತೆ ನಾವು ನಡೆಯಬೇಕು. ಕೆಲವೊಮ್ಮೆ ನಮ್ಮ ಮನಸ್ಸಿಗೆ ತಕ್ಕಂತೆ ಅವರು ನಡೆಯುತ್ತಾರೆ. ಪರಸ್ಪರ ಅರ್ಥ ಮಾಡಿಕೊಂಡು ನಡೆಯಬೇಕು ಈ ತಿಳಿವಳಿಕೆ, ಈ ಸಹನಶೀಲತೆ, ಅದೇ ಕ್ವಚಿತ ಇಂದಿನ ಜನಾಂಗದವರಲ್ಲಿ. ಕೆಲವು ದೇವರೇ ಇಚ್ಛೆಯಂತೆ ನಡೆಯುತ್ತದೆ. ಹರಿಚಿತ್ತ ಸತ್ಯ, ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು. ನಾನು ಬಹಳ ಸ್ವತಂತ್ರ ಎಂಬ ಅಹಂಕಾರದಿಂದ ನಮ್ಮ ಮನಸ್ಸಿಗೆ ಬಂದದ್ದೇ ಆಗಬೇಕು ಎಂಬುದನ್ನು ಕೈಬಿಟ್ಟರೆ ಮನೆಯಲ್ಲಿ ಜಗಳವಾಗುವ ಸಂಭವ ಇರುವುದಿಲ್ಲ. ಜಗಳ ತಪ್ಪಿಸುವುದಕ್ಕೆ ಸೂತ್ರವೇನೆಂದರೆ ತಮ್ಮ ಹಠ ಸಾಧನೆ ಮಾಡುವವರಿಗೆ ಎದುರಿಗೆ ಆಗಲಿ ಎಂದು ಸುಮ್ಮನೆ ಒಪ್ಪಿಕೊಂಡು ಬಿಡುವುದೇ ಒಂದು ದೊಡ್ಡ ಸೂತ್ರ. ಹೊಂದಿಕೊಳ್ಳುವ ಪ್ರವೃತ್ತಿ ಬೇಕು. ದೇವರು ಅದನ್ನು ನಮಗೆ ಕೊಟ್ಟಿದ್ದ ಆದರೆ ಅದು ಇಂದಿನ ಜನಾಂಗದಲ್ಲಿ ಕಾಣಸಿಗುವುದು ಬಹಳ ಕಷ್ಟ. ವಿನಯ ಪ್ರವೃತ್ತಿ ಬೆಳೆಸುವ ಅಗತ್ಯವಿದೆ.

Previous articleಸರ್ಕಾರ ಹೊಸದು ಭ್ರಷ್ಟಾಚಾರ ಹಳೆಯದು
Next articleಮಾತು ಮುತ್ತು