ತಾಯಿಯೊಂದಿಗೆ ಅನೈತಿಕ ಸಂಬಂಧ: ವ್ಯಕ್ತಿಯ ಬರ್ಬರ ಕೊಲೆ

0
20
ಅನೈತಿಕ ಸಂಬಂಧ

ವಿಜಯಪುರ: ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಚಡಚಣದ ತುಕಾರಾಮ ಚವ್ಹಾಣ(60) ಎಂಬಾತನೇ ಕೊಲೆಯಾದ ವ್ಯಕ್ತಿ. 45 ವರ್ಷದ ತಂಗೆವ್ವ ಎಂಬಾಕೆಯೊಂದಿಗೆ ಸುಮಾರು ಹತ್ತು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ ತುಕಾರಾಮ, ಶುಕ್ರವಾರ ತಡರಾತ್ರಿ ತಂಗೆವ್ವ ಜೊತೆ ಮನೆ ಹಿಂದೆ ಮಲಗಿದ್ದನು. ಈ ವೇಳೆ ತಂಗೆವ್ವ ಮಕ್ಕಳಾದ ಸದಾಶಿವ ಬಂಗಾರತಳಿ, ಸಿದ್ದು ಬಂಗಾರತಳಿ ಹಾಗೂ ಚಿಕ್ಕು ಬಂಗಾರತಳಿಯು ತುಕಾರಾಮ ತಲೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿ ತಾಯಿಯೊಂದಿಗೆ ಪರಾರಿಯಾಗಿದ್ದರು. ಸದ್ಯ ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಸದಾಶಿವ ಬಂಗಾರತಳಿ ಚಿಕ್ಕು ಬಂಗಾರತಳಿ, ಸಿದ್ದು ಬಂಗಾರತಳಿಯನ್ನು ಪೊಲೀಸರು ಬಂಧಿಸಿದ್ದಾರೆ.

Previous articleʻಚುನಾವಣೆಯಲ್ಲಿ ಸ್ಪರ್ಧೆ ಖಚಿತ, ಬಿಜೆಪಿಯಿಂದಲ್ಲʼ
Next articleಹೊಟ್ಟೆ ನೋವು ತಾಳದೆ ಮಹಿಳೆ ಆತ್ಮಹತ್ಯೆ