ಅಲೌಕಿಕ ವಿದ್ಯೆ ಸಂಪಾದನೆಯಿಂದ ನೆಮ್ಮದಿ

0
25
PRATHAPPHOTOS.COM

ಭವ್ಯವಾದ ಭಾರತೀಯ ವೈದಿಕ ಸಂಸ್ಕೃತಿಯಲ್ಲಿ ಜನಿಸಿ ಬಂದುದೆ ಒಂದು ಅದ್ಭುತವಾದ ಪುಣ್ಯ. ಎಂಬುದನ್ನು ಮನಗಾಣಬೇಕು. ವಿಶೇಷವಾಗಿ ಯುವಕರು ಅಧ್ಯಾತ್ಮವೆಂದರೆ ತಮಗಲ್ಲವೇ ಅಲ್ಲ; ಅದು ವಯಸ್ಸಾದವರಿಗೆ ಎಂಬ ಭಾವನೆ ಇದೆ. ಲೌಕಿಕ ಶಿಕ್ಷಣವನ್ನು ಪಡೆದು ಹೊಟ್ಟೆ ಹೊರೆದುಕೊಳ್ಳುವದು. ಅಗತ್ಯಕ್ಕೆ ಮಿಕ್ಕಿ ಧನ ಗಳಿಕೆ ಮಾಡುವದೇ ಗುರಿಯಾಗಿರಬೇಕಿಲ್ಲ. ಸಂಪಾದನೆಗೆ ಹಣ ಮಾತ್ರ ಇರುವದಿಲ್ಲ. ಜೀವನದಲ್ಲಿ ನೆಮ್ಮದಿ ಮತ್ತು ಪುಣ್ಯಗಳಿಕೆಯೂ ಸಂಪಾದನೆಯೇ ಆಗಿರುತ್ತದೆ. ಸಮಗ್ರ ಆಧ್ಯಾತ್ಮದ ಬದುಕಿನಲ್ಲಿ ಅನಂತ ಕಾಲದ ಭವ್ಯ ಭವಿಷತ್ತಿಗಾಗಿ ಅಧ್ಯಾತ್ಮಿಕ ಹಸಿವನ್ನು ತಣಿಸಲು ಧರ್ಮದ ಹೊಟ್ಟೆಯನ್ನು ಹೊರೆದುಕೊಳ್ಳಬೇಕಿದೆ. ಮನಸ್ಸಿನ ಆನಂದಕ್ಕಾಗಿ ಅಧ್ಯಾತ್ಮದ ವಿದ್ಯೆ ಸಂಪಾದನೆ ಬೇಕಿದೆ. ಸಂಸ್ಕೃತಿ ರಕ್ಷಣೆಯ ಹೊಣೆಗಾರಿಕೆಯೂ ಅದರಲ್ಲಿ ಸೇರಿದೆ. ಎಂಬ ಜವಾಬ್ದಾರಿ ಎಚ್ಚರ ಯುವಕರಲ್ಲಿ ಬರಬೇಕಿದೆ.
ಹೀಗಾಗಿ ಪ್ರತಿಯುವಕರಲ್ಲಿ ಅಧ್ಯಾತ್ಮಿಕ ವಿದ್ಯೆಯ ಜತೆಗೆ ಸಂಸ್ಕೃತಿಯ ರಕ್ಷಣೆಯ ಹೊಣೆ ಹೊರಬೇಕು. ನಿತ್ಯ ಬದುಕಿನಲ್ಲಿ ಲೌಕಿಕ ಬದುಕಿನ ಬಗ್ಗೆ ಅದೆಷ್ಟು ಮಹತ್ವ ಕೊಟ್ಟು, ಕಾಲ ಕಳೆಯುತ್ತೆವೆಯೋ ಅದರ ನೂರು ಸಾವಿರಪಟ್ಟು ಅಧ್ಯಾತ್ಮಿಕ ಬದುಕಿನತ್ತ ಲಕ್ಷ್ಮ ಕೊಡಬೇಕಿದೆ. ಇದಕ್ಕಾಗಿ ಸತ್ಸಂಗ, ಸತ್ಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಗುರುಗಳ ಪ್ರೇರಣಾದಾಯಕ ಮಾತುಗಳನ್ನು ಕೇಳಬೇಕು.
ಯುವಕರಾಗಲಿ ಯುವ ಯುವತಿಯರಾಗಲಿ ಎಲ್ಲರೂ ಮಾಡಬೇಕಾದ ಉಪಾಯಗಳು ಏನೆಂದರೆ. ಎಲ್ಲವಿದು ಆದಂತಹ ಮನಸ್ಸಿನಲ್ಲಿರುವ ದುಗುಡುಗಳು ತುಮಲಗಳು, ದ್ವೇಷ ಅಸೂಯೆ ಕಾಮ ಸಿಟ್ಟು, ಅತೃಪ್ತಿ ಪ್ರತಿಯೊಂದು ತಾಳಲಾರದಂತಹ ದೇಹದಿಂದ ನಮ್ಮನ್ನು ಪೀಡಿಸುವಂತಹ ಶತ್ರುಗಳು ಸಮುದ್ರದ ತೆರೆಗಳಂತೆ ನಮ್ಮನ್ನು ಕೊಚ್ಚಿಕೊಂಡು ಹೋಗುತ್ತವೆ. ಬಿರುಗಾಳಿಯಂತೆ ಎತ್ತಿ ಹಾಕುತ್ತವೆ. ಅಗ್ನಿಯಂತೆ ಸುಟ್ಟು ಹಾಕುತ್ತವೆ. ಅಂತಹ ಮಹಾಶತ್ರುಗಳನ್ನು ದೇಹದ ಮೇಲೆ ನಾವಾಗೆ ಆಹ್ವಾನಿಸಿಕೊಂಡು ಒದ್ದಾಡುವಾಗ, ಅದನ್ನು ತಡೆಯಲು ಎಲ್ಲರೂ ಮಾಡಲೇಬೇಕಾದಂತಹ ಸುಲಭವಾದ ಉಪಾಯ ಏನೆಂದರೆ ಅದು ಭಗವಂತ ನಾಮಸ್ಮರಣೆ.
ಬರೀ ಉಪನ್ಯಾಸದಲ್ಲಿ ಕೇಳದೆ, ನಿತ್ಯದಲ್ಲೇ ಅದನ್ನು ರೂಢಿಯಲ್ಲಿಟ್ಟುಕೊಂಡು ನಮ್ಮ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು, ಭಗವಂತನ ನಮಸ್ಮರಣೆ ಮಾಡುವದಕ್ಕೆ ಯಾವುದೇ ಕಾಲದ ನಿರ್ಬಂಧನೆ ಇಲ್ಲ, ಬೆಳಗ್ಗೆ ಎದ್ದ ಕ್ಷಣಕ್ಕೆ ಪ್ರಾರಂಭದಲ್ಲಿ ಇಡೀ ದಿನ ಮಂಗಲಮಯವಾಗಿರಬೇಕು. ಅಂದರೆ ಮನೆಯಲ್ಲಿ ಆಧ್ಯಾತ್ಮಿಕವಾದ ಸಂಕಲ್ಪಗಳನ್ನು ಮಾಡಿ ಮನೆಯಿಂದ ಹೊರಗೆ ಕಾಲಿಡಬೇಕಾದರೆ ಮನಸನ್ನು ಶಕ್ತಿಯನ್ನು ಆ ನಾಮಸ್ಮರಣೆಯ ಮೂಲಕ ಪ್ರಫುಲ್ಲಗೊಳಿಸಿಕೊಳ್ಳಬೇಕು.

Previous articleತೇಗ ಕೊಂಡು ಹಣ ನೀಡದ ಆರೋಪಿಗೆ 75 ಸಾವಿರ ದಂಡ
Next articleಗ್ರಾಮದಲ್ಲಿ ಚಿರತೆ ಹೆಜ್ಜೆ ಪತ್ತೆ