ಅಂಕ ಮುಖ್ಯವಲ್ಲ, ಫಲಿತಾಂಶದಿಂದ ಬಂದ ಜ್ಞಾನ ಮುಖ್ಯ

0
23

ಇದು ಪರೀಕ್ಷಾ ಸಮಯ. “ಪರೀಕ್ಷೆ ಮುಖ್ಯವೇ !?” ಹೌದು, ಪರೀಕ್ಷೆಗಳು ಅತ್ಯಂತ ಮುಖ್ಯ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಎಷ್ಟು ಅರಿತಿದ್ದಾರೆ ಎಂಬುದರ ತೀರ್ಪು ಇದು. ಪರೀಕ್ಷೆಗಳು ಜ್ಞಾನ ಮತ್ತು ಬುದ್ಧಿಮತ್ತೆ ತಿಳಿಯಲು ಅತ್ಯಗತ್ಯ. ಪರೀಕ್ಷೆಗಳು ವಿದ್ಯಾರ್ಥಿಯ ಒಟ್ಟಾರೆ ವ್ಯಕ್ತಿತ್ವ, ಸ್ಮರಣಶಕ್ತಿ ಮತ್ತು ಪರಿಷ್ಕರಣಾ ಕೌಶಲ್ಯ ಸುಧಾರಿಸುತ್ತದೆ.
ಜೀವನದ ಪ್ರತಿ ಹೆಜ್ಜೆಯಲ್ಲೂ ನಾವು ಹೊಸ ಸನ್ನಿವೇಶಗಳನ್ನು ಎದುರಿಸುತ್ತೇವೆ ಮತ್ತು ಅವುಗಳಿಂದ ಕಲಿಯುತ್ತೇವೆ. ಹಾಗೆ ಪರೀಕ್ಷೆಯು ಒಂದು. ಪರೀಕ್ಷೆಯು ನಮ್ಮಲ್ಲಿ ಚಿಂತನೆ, ತರ್ಕವನ್ನು ಅಭಿವೃದ್ಧಿಪಡಿಸುತ್ತದೆ. ಸ್ವಂತ ಕೌಶಲ್ಯವನ್ನು ಪರಿಚಯಿಸಲು ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳಲು ಸಹಕಾರಿ.
ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ಮಾತುಗಳನ್ನು ಕೇಳಿದಾಗ ಕುಗ್ಗಿ ಹೋಗುತ್ತಾರೆ ಏಕೆಂದರೆ ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭ್ಯಾಸ ಮಾಡಿರುವುದಿಲ್ಲ. ಬಹುಶಃ ಅವರಿಗೆ ಪರೀಕ್ಷೆಗಳ ಮಹತ್ವದ ಬಗ್ಗೆ ತಿಳಿದಿಲ್ಲದಿರಬಹುದು ಅಥವಾ ಮನೆ, ಪಾಲಕರು, ಗೆಳೆಯರು, ಶಾಲೆ ಎಲ್ಲಡೆ ಇಂದ, ಒತ್ತಡಕ್ಕೆ ಒಳಗಾಗಿ ಪರೀಕ್ಷೆ ಮಹತ್ವಕ್ಕಿಂತ ಹೆಚ್ಚಾಗಿ ಭಯ ಅಥವಾ ಖಿನ್ನತೆಗೆ ಒಳಗಾಗಿ ಪರೀಕ್ಷೆಗೆ ಹೆದರುವುದು ಸಾಮಾನ್ಯ. ಚನ್ನಾಗಿ ಓದಿದ ವಿದ್ಯಾರ್ಥಿಗಳು ಕೂಡಾ ಪರೀಕ್ಷೆಗೆ ಹೆದರುವುದನ್ನು ನೋಡುತ್ತೇವೆ. ಆದರೆ ಪರೀಕ್ಷೆಗೆ ಹೆದರುವ ಅವಶ್ಯಕತೆ ಇಲ್ಲ.
ಈ ಪರೀಕ್ಷೆಗಳು ಅದರ ಫಲಿತಾಂಶಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾದರೂ ಅವು ನಿಮ್ಮ ಭವಿಷ್ಯ ಅಥವಾ ಸಾಮರ್ಥ್ಯಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದನ್ನು ಎಲ್ಲಾ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ಕಡಿಮೆ ಅಂಕಗಳನ್ನೂ ಗಳಿಸಿದವರು, ನಿಜ ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಿದ ಹಲವಾರು ಜನರನ್ನು ನಾವು ನೋಡುತ್ತೇವೆ. ಹಾಗೆ ಹೆಚ್ಚಿನ ಅಂಕಗಳಿಸಿದರೂ ಕೆಲವು ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟಿದ್ದು ನಾವು ಕಾಣುತ್ತೇವೆ. ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತ ಶ್ರಮ ಹಾಕುವುದು ಮುಖ್ಯ. ಪರೀಕ್ಷೆಯನ್ನು ನಿರಾಳವಾಗಿ, ಭಯ ಪಡದೆ, ಒತ್ತಡವಿಲ್ಲದೆ ಕಲಿತಿದ್ದನ್ನ
ಚನ್ನಾಗಿ ಮನನ ಮಾಡಿ, ನಿಮ್ಮ ಹೆಚ್ಚಿನ ಪರಿಶ್ರಮ ಹಾಕಿ ಪರೀಕ್ಷೆಯನ್ನು ಬರೆಯುವುದು ಮುಖ್ಯ.

Previous articleಅಕ್ಕಿ-ಚಿಕ್ಕಿಗಳ ಚಿಕ್ಕಾಸಿನ ರಾಜಕೀಯ!
Next articleಕಾಫಿನಾಡಿನಲ್ಲಿ ಯುವಕ ಯುವತಿಯ ನಿಗೂಡ ಸಾವು