ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಬೆಳೆದ ಸುಮಾರು ೩.೫ ಕೆಜಿ ತೂಕದ ಗಡ್ಡೆ

0
25

ಸಿಂದಗಿ: ನಗರದ​ ಮನಗೂಳಿ ಆಸ್ಪತ್ರೆಯ ವೈದ್ಯರು ಸತತ ೩ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮಹಿಳೆ ಗರ್ಭಕೋಶಕ್ಕೆ ಸಂಬAಧಿಸಿದ ೩.೫ ಕೆಜಿ ತೂಕದ ಗಡ್ಡೆಯೊಂದನ್ನು ವೈದ್ಯರಾದ ಡಾ.ಸಂಧ್ಯಾ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.ರಮಾಕಂತ ತಂಡದ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಯಾಸ್ಮಿನ್ ಭಾಗವಾನ್ ಎಂಬ ಮಹಿಳೆಯ ಉದರದಿಂದ ೩.೫ ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು.
ಅರವಳಿಕೆ ತಜ್ಞರಾದ ಡಾ. ರವಿ ಗುಣಕಿ, ಸಹಾಯಕ ಪಿರಾ ಮಗರಬಿ ಬಸವರಾಜ್ ಸೇರಿದಂತೆ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು. ಈಗ ರೋಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರ ತಂಡ ತಿಳಿಸಿದೆ. ಮನಗೂಳಿ ಆಸ್ಪತ್ರೆಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Previous articleಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಮೇಲೆ ರೇಡ್…
Next article೨೯ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ