ಬಂದ್‌ನಿಂದ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ

0
22
ಡಿಕೆಶಿ

ಬೆಂಗಳೂರು: ಬಂದ್‌ ಮಾಡಿ ಬೆಂಗಳೂರಿನ ಬ್ರ್ಯಾಂಡ್‌ ಹಾಳು ಮಾಡಬೇಡಿ. ಬಂದ್ ಮಾಡೋದ್ರಿಂದ ಯಾವುದೇ ಅನುಕೂಲ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಬಂದ್ ಕರೆಯ ಹಿನ್ನಲೆಯಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಮರ್ಯಾದೆ ಹಾಳು ಮಾಡಿದರೆ ನೀವೇ ಚುಚ್ಚಿಕೊಂಡಂತೆ. ಬೆಂಗಳೂರಿನಲ್ಲಿ ಎಲ್ಲಾ ಭಾಷೆ, ಬೇರೆ ಬೇರೆ ರಾಜ್ಯದ ಜನ ವಾಸವಾಗಿದ್ದಾರೆ. ಬಂದ್‌ ಮಾಡುವುದರಿಂದ ನಿಮಗೆ ಏನು ಲಾಭ? ಏನಾದರೂ ಲಾಭ ಆಗುವುದಾದರೆ ಏನ್ ಬೇಕಾದರೂ ಮಾಡಿ. ನಿಮ್ಮ ಪರವಾಗಿ, ರಾಜ್ಯದ ಪರವಾಗಿ ಹೋರಾಟ ಮಾಡಲು ನಾವಿದ್ದೇವೆ. ದಯವಿಟ್ಟು ಅಂತಹ ತಪ್ಪುಗಳನ್ನು ಮಾಡಲು ಹೋಗಬೇಡಿ. ಕರ್ನಾಟಕ ಸರ್ಕಾರವೇ ರಾಜ್ಯದ ಹಿತ ಕಾಪಾಡುತ್ತದೆ ಎಂದರು.

Previous articleಕರ್ನಾಟಕವನ್ನು ಕುಡುಕರ ತೋಟ ಮಾಡಲಿದೆ ಸರಕಾರ
Next article29ರಂದು ಅಖಂಡ ಕರ್ನಾಟಕ ಬಂದ್‌