ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ

0
13

ಬೆಂಗಳೂರು: ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ. ಏಳು ತಿಂಗಳಿಂದ ಹಣ ಬಾಕಿ ಇದೆ. ಇದರಲ್ಲಿ ಸ್ವಲ್ಪ ಹಣ ಬಿಡುಗಡೆಯಾಗಿದೆ. ನೂರು ಕೋಟಿ ಸಾಲಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದರು. ಅದಕ್ಕೆ ಮೂರು ವರ್ಷದಿಂದ ಅಂತ ಹೇಳಿದ್ದೇವೆ. ಅದಕ್ಕೆ ನಾನು ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದೇವೆ. ಯಾವ ಸಚಿವರು ಕಮಿಷನ್ ಕೇಳಿಲ್ಲ. ನಮಗೆ ರಾಜ್ಯಾದ್ಯಂತ ಮಾಹಿತಿ ಬಂದಿದೆ‌. ಯಾವುದೇ ಗುತ್ತಿಗಾರರು ಬಂದು ನನ್ನ ಬಳಿ ದೂರು ಹೇಳಿಲ್ಲ. ಯಾರೂ ಕೊಟ್ಟಿರಬಹುದು. ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು, ನಮ್ಮ ಪರಿಸ್ಥಿತಿ ಇದೀಗ ಬಾಂಡ್ಲಿಯಿಂದ ಬೆಂಕಿಗೆ ಬಿದ್ದಂತಾಗಿದೆ. ನಮಗೆ ಪೇಮೆಂಟ್ ಕೊಡಿ. ಕಂಟ್ರಾಕ್ಟರ್​ಗಳಿಗೂ ಭಾಗ್ಯ ಕೊಡಿ ಸ್ವಾಮಿ. ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ನಮಗೆ ಕೆಲಸ ಮಾಡಿರೋವುದಕ್ಕೆ ಭಾಗ್ಯ ಕೊಡಿ. ಸಿ ಎಂ ಸಿದ್ದರಾಮಯ್ಯ ಅವರನ್ನು ನಾವು ಭೇಟಿ ಆಗಿದ್ದೇವೆ. ಅವಾಗ ಮೂರು ವರ್ಷ ಸುಮ್ಮನಿದ್ದು ಇವಾಗ ಏಕೆ ಒತ್ತಡ ಹಾಕುತ್ತೀರಿ ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಆದರೆ ಗುತ್ತಿಗೆದಾರರ ಹಿತದೃಷ್ಟಿಯಿಂದ ಬಾಕಿ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದರು. ಸರ್ಕಾರ ಬಂದು ಮೂರು ತಿಂಗಳಾದರೂ ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಯಾವುದೇ ಭ್ರಷ್ಟಾಚಾರ ದೂರು ನನಗೆ ಬಂದಿಲ್ಲ. ಯಾರೂ ಕಮಿಷನ್ ಬೇಡಿಕೆ ಇದೆ ಎಂದು ಆರೋಪ ಮಾಡಿಲ್ಲ. ಮೂರನೇ ಪಾರ್ಟಿ ಮಾತನಾಡಿದರೆ ನಾವು ಮಾತನಾಡಲ್ಲ. ಬಿಬಿಎಂಪಿ ಗುತ್ತಿಗೆದಾರರ ಆರೋಪದ ಬಗ್ಗೆ ನಮಗೆ ಸಂಬಂಧ ಇಲ್ಲ ಎಂದರು. ಸಿಎಂಗೆ ಪತ್ರ ಬರೆಯುತ್ತೇವೆ . ನಾವು ಡೆಡ್ ಲೈನ್ ಕೊಡ್ತಿಲ್ಲ ನಮಗೆ ಈಗಲೆ ಹಣ ಬಿಡುಗಡೆ ಆಗಬೇಕು ಎಂದು ಒತ್ತಾಯಿಸಿದರು.

Previous articleಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಪತಿ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ
Next articleಕಾವೇರಿ ನದಿಗೆ ಸ್ಪಂದನಾ ಅಸ್ಥಿ ವಿಸರ್ಜನೆ