ಡಿಕೆಶಿ, ಸಿದ್ದರಾಮಯ್ಯ ನರಿಗಳಿದ್ದಂತೆ: ಶ್ರೀರಾಮುಲು

0
14
ಶ್ರೀರಾಮುಲು

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನರಿಗಳಿದ್ದಂತೆ. ಪ್ರತಿದಿನ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ ಆದರೆ ಅವರು ಮೊದಲು ಕನ್ನಡಕ ಒರೆಸಿಕೊಂಡು ನೋಡಲಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಜಾಮೀನು ಮೇಲೆ ಹೊರಗಡೆ ಇದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಸಿದ್ದರಾಮಯ್ಯ ಅರ್ಕಾವತಿ ಹಗರಣದ ಬಗ್ಗೆ ಮಾತನಾಡುವದಿಲ್ಲ ಇದು ಅವರ ಪ್ರಾಮಾಣಿಕ ಆಡಳಿತದ ನಿದರ್ಶನ ಎಂದು ಟೀಕಿಸಿ ಬಹಿರಂಗ ಉತ್ತರ ಕೊಡಲಿ ಎಂದು ಸವಾಲು ಹಾಕಿದರು. ಬಡವರ ಮನೆಗಳ ಹಂಚಿಕೆ ವಿಷಯದಲ್ಲಿ ಲೂಟಿ ಮಾಡಿದ ಕಾಂಗ್ರೆಸ್ ಪಕ್ಷದಿಂದ ಪಾಠ ಕಲಿಯಬೇಕಾಗಿಲ್ಲ ಎಂದರು.
ನರಿಗಳು ಕುರಿಗಳ ವೇಷ ಹಾಕಿದರೇ ಕುರಿಗಳಾಗುತ್ತವೆ ಎಂದು ಅವರು ನಂಬಿದ್ದಾರೆ ಅದಕ್ಕೆ ಬಿಜೆಪಿ ಅವಕಾಶ ನೀಡುವದಿಲ್ಲ. ರಾಹುಲ್ ಗಾಂಧಿ ಮೊದಲು ಮಾಡಿ ಎಲ್ಲರೂ ಬೇಲ್ ಮೇಲೆ ಇದ್ದಾರೆ ಇವರದ್ದೇನೂ ಭ್ರಷ್ಟಾಚಾರದ ಹೋರಾಟ ಎಂದು ಪ್ರಶ್ನಿಸಿದರು.

Previous articleಮುಧೋಳ ತೊರೆಯುವುದಿಲ್ಲ: ಕಾರಜೋಳ
Next articleನೆಗೆಟಿವ್ ಪ್ರಚಾರ ಎಲ್ಲರಿಗೂ ಬರುತ್ತೆ, ಜನರು ನಂಬಬೇಕಲ್ಲ?