Home Advertisement
Home ತಾಜಾ ಸುದ್ದಿ ಬಲೆಗೆ ಬಿದ್ದ 400 ಕೆಜಿ ಮೀನುಗಳು

ಬಲೆಗೆ ಬಿದ್ದ 400 ಕೆಜಿ ಮೀನುಗಳು

0
132
ಮೀನು

ಮಂಗಳೂರು: ಸುರತ್ಕಲ್ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಇಂದು ಬೆಳಗ್ಗೆ ಮೀನುಗಾರನೊಬ್ಬ ಹಾಕಿದ ಬಲೆಗೆ ರಾಶಿ ರಾಶಿ ಮೀನು ಬಿದ್ದಿದೆ. ವಿವಿಧ ಮೀನುಗಳ ರಾಶಿಯ ಖರೀದಿಗೆ ಮೀನುಪ್ರಿಯರು ಮುಗಿಬಿದ್ದಿದ್ದಾರೆ.
ಜೀವನ್ ಪಿರೇರಾ ಎಂಬ ಮೀನುಗಾರ ಹಾಕಿರುವ ಕೈರಂಪೊನಿ ಬಲೆಗೆ ಮತ್ಯ್ಯ ಸಮೂಹವೇ ಬಿದ್ದಿದೆ. ದಡದಿಂದ ಬೀಸುವ ಕೈರಂಪೊನಿ ಬಲೆಗೆ ಸುಮಾರು 400 ಕೆಜಿಯಷ್ಟು ಮೀನು ಬಿದ್ದಿರುವುದು ಮೀನುಗಾರನಿಗೆ ಅದೃಷ್ಟ ಲಕ್ಷ್ಮೀ ಒಲಿದಂತಾಗಿದೆ. ಬಲೆಗೆ ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ ಸಮೂಹವೇ ಬಿದ್ದಿದೆ. ಈ ರಾಶಿ ರಾಶಿ ಮೀನುಗಳನ್ನು ಕಂಡು ಜನರು ಖರೀದಿಗೆ ಮುಗಿಬಿದ್ದಿದ್ದಾರೆ.

Previous articleಮಂಗಳೂರು ಪಾಲಿಕೆ ಚರಾಸ್ತಿ ಜಪ್ತಿಗೆ ಆದೇಶ
Next articleಸಿಐಎಸ್‌ಎಫ್ ಎಸ್‌ಐ ಆತ್ಮಹತ್ಯೆ ಯತ್ನ