ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಕಲ್ಪನೆಗೆ ಆಕಾಶವೇ ಮಿತಿಯಂತಾಗಿದೆ. ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವಂತೂ ಅಸಾಧ್ಯವಾದುದನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಂತಹದ್ದೇ ಒಂದು ವಿಡಿಯೋ ಸಂಚಲನ ಮೂಡಿಸಿದೆ.
ಕೊಲೆ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರನ್ನು ಸ್ಯಾಂಡಲ್‌ವುಡ್ ಸ್ಟಾರ್‌ಗಳಾದ ಯಶ್, ಸುದೀಪ್ ಮತ್ತು ಶಿವಣ್ಣ ಭೇಟಿಯಾದರೆ ಹೇಗಿರುತ್ತದೆ? ಎಂಬ ಕುತೂಹಲಕಾರಿ ಕಲ್ಪನೆಯನ್ನು ಈ ವಿಡಿಯೋ ಮೂಲಕ ಸಾಕಾರಗೊಳಿಸಲಾಗಿದೆ.
ದಾಸನ ದರ್ಶನಕ್ಕೆ ಬಂದ ಸ್ಟಾರ್‌ಗಳು!: ಇನ್‌ಸ್ಟಾಗ್ರಾಮ್‌ನ true_kannada_media ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ನೋಡಿದವರು ಒಂದು ಕ್ಷಣ ಇದು ನಿಜವೇ ಎಂದು ಹುಬ್ಬೇರಿಸುವಂತಿದೆ.
ಎಐ ತಂತ್ರಜ್ಞಾನ ಬಳಸಿ ರಚಿಸಲಾದ ಈ ಕಾಲ್ಪನಿಕ ದೃಶ್ಯಗಳಲ್ಲಿ, ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಜೈಲಿಗೆ ಭೇಟಿ ನೀಡುವ ದೃಶ್ಯವಿದೆ. ಜೈಲಿನ ಸರಳುಗಳ ಮೂಲಕ ಸ್ನೇಹಿತನಿಗೆ ಹಣ್ಣುಗಳನ್ನು ನೀಡುವುದು, ಕುಶಲೋಪಚಾರಿ ವಿಚಾರಿಸುವುದು ಅಭಿಮಾನಿಗಳ ಮನ ಮುಟ್ಟುವಂತಿದೆ.
ಜೈಲಿನಲ್ಲಿ ಕ್ಯಾರಂ ಆಟ, ಮುದ್ದೆ ಊಟ!: ಈ ಎಐ ವಿಡಿಯೋದ ವಿಶೇಷತೆ ಇರುವುದೇ ಅದರ ಡಿಟೇಲಿಂಗ್‌ನಲ್ಲಿ. ಕೇವಲ ಭೇಟಿಯಾಗುವುದಷ್ಟೇ ಅಲ್ಲ, ಜೈಲಿನ ಒಳಗೆ ನಾಲ್ವರು ದಿಗ್ಗಜರು ಕುಳಿತು ಕ್ಯಾರಂ ಆಡುವುದು ಮತ್ತು ಎಲ್ಲರೂ ಸಾಲಾಗಿ ಕುಳಿತು ರಾಗಿ ಮುದ್ದೆ ಊಟ ಸವಿಯುವ ದೃಶ್ಯಗಳನ್ನು ಬಹಳ ನೈಜವಾಗಿ ಕಟ್ಟಿಕೊಡಲಾಗಿದೆ.
ಕೊನೆಗೆ ಭೇಟಿ ಮುಗಿಸಿ ಹೋಗುವಾಗ ದರ್ಶನ್ ಅವರು ಗೆಳೆಯರಿಗೆ ಕೈಬೀಸಿ ಬೀಳ್ಕೊಡುವ ದೃಶ್ಯ ಭಾವುಕವಾಗಿದೆ. ಈ ವಿಡಿಯೋಗೆ ಒಂದೇ ದಿನದಲ್ಲಿ 2.7 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಅಭಿಮಾನಿಗಳು “ರಿಯಲ್ ಆಗಿ ಹೀಗಾದರೆ ಎಷ್ಟು ಚೆಂದ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಪ್ಪು ನೆನಪು ಮತ್ತು ಎಐ ಮ್ಯಾಜಿಕ್: ಕೇವಲ ದರ್ಶನ್ ವಿಷಯವಷ್ಟೇ ಅಲ್ಲ, ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಎಐ ಬಳಕೆ ಹೆಚ್ಚಾಗಿದೆ. ಅಗಲಿದ ನಟ ಪುನೀತ್ ರಾಜ್‌ಕುಮಾರ್ (ಅಪ್ಪು) ಅವರಿಗೆ ಹೃದಯಾಘಾತವಾದಾಗ ಚಿತ್ರರಂಗದವರು ಆಸ್ಪತ್ರೆಗೆ ಓಡುವ ಕಾಲ್ಪನಿಕ ದೃಶ್ಯಗಳನ್ನೂ ಹಿಂದೆ ಎಐ ಮೂಲಕ ಸೃಷ್ಟಿಸಲಾಗಿತ್ತು.
ಅಲ್ಲದೆ, ದರ್ಶನ್, ಸುದೀಪ್, ಯಶ್, ಧ್ರುವ ಸರ್ಜಾ ಮತ್ತು ರಿಷಬ್ ಶೆಟ್ಟಿ ಮುಂತಾದವರು ಚಿಕ್ಕ ಮಕ್ಕಳಂತೆ ಮಳೆಯಲ್ಲಿ ಆಟವಾಡುವುದು, ಒಂದೇ ಬೈಕ್‌ನಲ್ಲಿ ಜಾಲಿ ರೈಡ್ ಹೋಗುವುದು, ಮತ್ತು ಕಾಫಿ ಅಡ್ಡೆಯ ಮುಂದೆ ಹರಟೆ ಹೊಡೆಯುವಂತಹ ದೃಶ್ಯಗಳು ಅಭಿಮಾನಿಗಳಿಗೆ ಹೊಸ ಲೋಕವನ್ನೇ ತೋರಿಸುತ್ತಿವೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟರು ಒಂದಾಗಿರುವುದನ್ನು ನೋಡಲು ಬಯಸುತ್ತಾರೆ. ವಾಸ್ತವದಲ್ಲಿ ಅದು ಸಾಧ್ಯವಾಗದಿದ್ದರೂ, ಎಐ ತಂತ್ರಜ್ಞಾನವು ಅಭಿಮಾನಿಗಳ ಈ ಆಸೆಯನ್ನು ಡಿಜಿಟಲ್ ಪರದೆಯ ಮೇಲಾದರೂ ಈಡೇರಿಸುತ್ತಿದೆ ಎಂಬುದು ಸುಳ್ಳಲ್ಲ. ಆದರೆ ಇವೆಲ್ಲವೂ ಮನರಂಜನೆಗಾಗಿ ಮಾತ್ರ ಎಂಬುದನ್ನು ನೋಡುಗರು ಮರೆಯಬಾರದು.
























If you are looking for somewhere to play, check out 7vvbetgame, I like the gameplay and UI could make it your place. 7vvbetgame