ಸೆಪ್ಟೆಂಬರ್ 18: ಇಬ್ಬರು ಲೆಜೆಂಡರಿ ಜನ್ಮ ದಿನಕ್ಕೆ ಭಾರ್ಗವ ಝಲಕ್

0
31

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸೆಪ್ಟೆಂಬರ್ 18ರಂದು ಡಬಲ್ ಸೆಲೆಬ್ರೇಷನ್ ಆಗಲಿದೆ. ಇದೇ ದಿನ ರಿಯಲ್ ಸ್ಟಾರ್ ಉಪೇಂದ್ರ, ಪ್ರತಿಭಾವಂತ ನಟಿ ಶ್ರುತಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರ ಜನ್ಮದಿನ. ಅಭಿಮಾನಿಗಳಿಗೆ ಇವತ್ತು ಒಂದು ಹಬ್ಬದಂತ ದಿನವಾಗಿದ್ದು, ಈ ಖುಷಿಯನ್ನು ಇನ್ನಷ್ಟು ಬಣ್ಣ ಬೀರುವಂತೆ ಆನಂದ್ ಆಡಿಯೋ ಹಾಗೂ ಭಾರ್ಗವ ಸಿನಿಮಾ ತಂಡದಿಂದ ವಿಶೇಷ ಘೋಷಣೆ ಹೊರಬಂದಿದೆ.

ಸೆಪ್ಟೆಂಬರ್ 18ಕ್ಕೆ ಭಾರ್ಗವ ತಂಡದ ಸರ್ಪ್ರೈಸ್: ಆನಂದ್ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟರ್‌ನಲ್ಲಿ ಉಪೇಂದ್ರ ಹಾಗೂ ವಿಷ್ಣುವರ್ಧನ್ ಅವರ ಫೋಟೋ ಜೊತೆಯಾಗಿ ಕಂಡುಬಂದಿದ್ದು, ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ. ಈ ಪೋಸ್ಟ್ ಮೂಲಕ, “ಭಾರ್ಗವ ಬರ್ತ್‌ಡೇ ಟೀಸರ್ ಸೆಪ್ಟೆಂಬರ್ 18ರಂದು ಬಿಡುಗಡೆ” ಆಗಲಿದೆ ಎಂದು ಘೋಷಣೆ ಮಾಡಲಾಗಿದೆ. ಇಬ್ಬರು ಲೆಜೆಂಡರಿ ನಟರ ಹುಟ್ಟುಹಬ್ಬಕ್ಕೆ ತಕ್ಕಂತೆ ಈ ಟೀಸರ್ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಡಬಲ್ ಗಿಫ್ಟ್ ಆಗಲಿದೆ.

ಭಾರ್ಗವ ಸಿನಿಮಾ: ಭಾರ್ಗವ ಸಿನಿಮಾ ಸದ್ದಿಲ್ಲದೆ ಪ್ರಾರಂಭವಾಗಿದ್ದು, ಈಗಾಗಲೇ ಟೈಟಲ್ ಟೀಸರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಬಾರಿ ಬರ್ತ್‌ಡೇ ಟೀಸರ್ ಮೂಲಕ ಸಿನಿಮಾ ಬಗ್ಗೆ ಇನ್ನಷ್ಟು ನಿರೀಕ್ಷೆ ಹುಟ್ಟುವ ಸಾಧ್ಯತೆ ಇದೆ. ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದಾರೆ. ನಾಗಣ್ಣ – ಉಪೇಂದ್ರ ಕಾಂಬಿನೇಷನ್ ಈಗಾಗಲೇ ಯಶಸ್ವಿ ಆಗಿದ್ದು, ಕುಟುಂಬ, ಗೋಕರ್ಣ, ಗೌರಮ್ಮ, ದುಬೈ ಬಾಬು ಸಿನಿಮಾಗಳು ಇದಕ್ಕೆ ಸಾಕ್ಷಿ. ಈ ಹಿನ್ನೆಲೆಯಲ್ಲಿ ಭಾರ್ಗವ ಕೂಡ ಹಿಟ್ ಲಿಸ್ಟ್ ಸೇರಲಿದೆ ಎಂಬ ನಿರೀಕ್ಷೆ ಮೂಡಿದೆ.

ಭಾರ್ಗವ ತಂಡ: ಉಪೇಂದ್ರ – ನಾಯಕ. ಅಂಕಿತಾ ಅಮರ್ – ನಾಯಕಿ (ಟಿವಿ ಮೂಲಕ ಖ್ಯಾತಿ ಪಡೆದ ನಟಿ, ಇದೀಗ ಬಿಗ್ ಸ್ಕ್ರೀನ್‌ಗೆ ಎಂಟ್ರಿ). ಅರ್ಜುನ್ ಜನ್ಯ – ಸಂಗೀತ ನಿರ್ದೇಶಕ. ಎಂ.ಬಿ. ಬಾಬು – ನಿರ್ಮಾಪಕ ನಾಗಣ್ಣ – ನಿರ್ದೇಶಕ

ಚಿತ್ರದ ಟ್ಯಾಗ್‌ಲೈನ್ “Violent Family Man” ಆಗಿದ್ದು, ಇದು ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಮೂಡಿಬರುವ ನಿರೀಕ್ಷೆ ಮೂಡಿಸಿದೆ.

ಅಭಿಮಾನಿಗಳ ಸಂಭ್ರಮ: ಉಪೇಂದ್ರ ಮತ್ತು ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಪ್ರತೀ ವರ್ಷ ಭರ್ಜರಿಯಾಗಿ ಆಚರಿಸುವ ಅಭಿಮಾನಿಗಳಿಗೆ ಈ ಬಾರಿ ಡಬಲ್ ಸಿಹಿಸುದ್ದಿ ಸಿಕ್ಕಂತಾಗಿದೆ. ಒಂದು ಕಡೆ ತಮ್ಮ ಪ್ರಿಯ ನಟರ ಜನ್ಮದಿನ, ಮತ್ತೊಂದು ಕಡೆ ಹೊಸ ಸಿನಿಮಾ ಟೀಸರ್ ಸರ್ಪ್ರೈಸ್ – ಹೀಗಾಗಿ ಸೆಪ್ಟೆಂಬರ್ 18 ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಮರೆಯಲಾಗದ ದಿನವಾಗಲಿದೆ.

Previous articleಹಿಮಾಚಲ ಪ್ರದೇಶ: ಭಾರೀ ಮಳೆ, ಭೂ ಕುಸಿತ, ವಾಹನಗಳು ನೀರುಪಾಲು
Next articleಬೆಳಗಾವಿ: ಖಾಸಗಿ ಮಾರುಕಟ್ಟೆ ವಿವಾದ – ಎಪಿಎಂಸಿ ಅಧಿಕಾರಿಗಳೊಂದಿಗೆ ವರ್ತಕರ ವಾಗ್ವಾದ

LEAVE A REPLY

Please enter your comment!
Please enter your name here