Bigg Boss Kannada 12: ಬಿಗ್‌ ಬಾಸ್‌ ಮನೆಗೆ ಸುಧಾರಾಣಿ ಹೋಗ್ತಾರಾ? ಸ್ಪಷ್ಟನೆ ನೀಡಿದ ನಟಿ

0
4

ಸದ್ಯಕ್ಕೆ ಕನ್ನಡ ಕಿರುತರೆಯಲ್ಲಿ ʻಬಿಗ್‌ ಬಾಸ್‌ʼ ಹವಾ ಶುರುವಾಗಿದೆ. ಇದೇ ಸೆಪ್ಟೆಂಬರ್‌ 28 ರಿಂದ ಆರಂಭಗೊಳ್ಳಲಿರುವ ‘ಬಿಗ್ ಬಾಸ್ ಕನ್ನಡ 12’ ಶೋನಲ್ಲಿ ಯಾವೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ? ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಉಂಟಾಗಿದೆ.

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂಭವನೀಯ ಸ್ಪರ್ಧಿಗಳ ಹೆಸರುಗಳು ವೈರಲ್‌ ಆಗುತ್ತಿವೆ. ಅದರಲ್ಲಿ ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ನಟಿ ಸುಧಾರಾಣಿ ಅವರ ಹೆಸರು ಕೂಡ ಹರಿದಾಡುತ್ತಿದ್ದು, ಅದಕ್ಕೆ ಅವರೇ ಸ್ಪಷ್ಟಿಕರಣ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್‌ 12ರ ಕನ್‌ಫರ್ಮ್ಡ್ ಕಂಟೆಸ್ಟೆಂಟ್ ಸುಧಾರಾಣಿ ಎಂದು ಬರೆಯಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇದರಿಂದ ಅವರ ಅಭಿಮಾನಿಗಳು ಸುಧಾರಾಣಿ ಅವರನ್ನು ಬಿಗ್‌ ಬಾಸ್‌ನಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಸುಧಾರಾಣಿ ಅವರು ನಟಿಸುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಈಚೆಗೆ ಮುಕ್ತಾಯಗೊಂಡಿದೆ. ಹೀಗಾಗಿ ಬಿಗ್‌ ಬಾಸ್‌ಗೆ ಸುಧಾರಾಣಿ ಬರುವುದು ಪಕ್ಕಾ ಎನ್ನುವುದಕ್ಕೆ ಮತ್ತಷ್ಟು ಬಲ ನೀಡಿತ್ತು.

ಆದರೆ, ಇದೆಲ್ಲದಕ್ಕೂ ಸ್ವತಃ ಸುಧಾರಾಣಿ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು, ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಅಷ್ಟೇ ಅಲ್ಲ, `ಯಾರ್ ಹೇಳಿದ್ದು’ ಎಂದು ಕೇಳಿ ಸಾಕ್ಷಿ ಕೂಡ ಕೇಳಿದ್ದಾರೆ.

ಇನ್ಸ್ಟಾಗ್ರಾಮ್‌ ನಲ್ಲಿ ಮಾಡಿದ ಪೋಸ್ಟ್‌ನಲ್ಲಿ “ಸ್ಕ್ರೀನ್ ಶಾಟ್ ಫೋಟೋದೊಂದಿಗೆ ತಮ್ಮ ಡೈಲಾಗ್‌ ಸೇರಿಸಿದ್ದಾರೆ. ಅದರಲ್ಲಿ “ಯಾರು ಹೇಳಿದ್ದು?” ಎನ್ನುವ ಡೈಲಾಗ್‌ ಜತೆ “ಸಾಕ್ಷಿ ಏನಿದೆ?” ಎಂದು ಕೇಳಿದ್ದಾರೆ. ಈ ಮೂಲಕ ನಟಿ ಸುಧಾರಾಣಿ ನಾನು ಬಿಗ್‌ ಬಾಸ್‌ ಹೋಗುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಹಿಂದೆಯೂ ಸುಧಾರಾಣಿ ಹೆಸರು: ಸುಧಾರಾಣಿ ಹೆಸರು ಬಿಗ್‌ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಹರಿದಾಡಿದ್ದು ಇದೇ ಮೊದಲೇನಲ್ಲ, ಈ ಹಿಂದೆಯೂ ಅನೇಕ ಬಾರಿ ಇದೇ ರೀತಿಯಲ್ಲಿ ಅವರ ಹೆಸರನ್ನು ವೈರಲ್‌ ಮಾಡಲಾಗಿತ್ತು. ಆಗಲೂ ತಾವು ಹೋಗಲ್ಲ ಎಂದು ನಟಿ ಹೇಳಿದ್ದರು. ಈಗಲೂ ನಾನು ಬಿಗ್ ಬಾಸ್​​ಗೆ ಹೋಗುತ್ತಿಲ್ಲ ಎಂದು ಸುಧಾರಾಣಿ ಸ್ಪಷ್ಟನೆ ಕೊಟ್ಟಿದ್ದಾರೆ.

Previous articleಕೊಪ್ಪಳ: ಅಂಜನಾದ್ರಿ ಬೆಟ್ಟ ಅಭಿವೃದ್ಧಿ, ಭೂ ಸ್ವಾಧೀನ ವಿವರ
Next articleದಸರಾ 2025: ಬೆಂಗಳೂರು ನಗರ ವಿಭಾಗ ಮಟ್ಟದ ಕ್ರೀಡಾಕೂಟ, ವಿವರಗಳು

LEAVE A REPLY

Please enter your comment!
Please enter your name here