Home Advertisement
Home ಸಿನಿ ಮಿಲ್ಸ್ ಗತವೈಭವದ ಶಿಪ್ ಸಾಂಗ್ ಬಿಡುಗಡೆ ಮಾಡಿದ ಕರುನಾಡ ಕಿಂಗ್ ಶಿವಣ್ಣ

ಗತವೈಭವದ ಶಿಪ್ ಸಾಂಗ್ ಬಿಡುಗಡೆ ಮಾಡಿದ ಕರುನಾಡ ಕಿಂಗ್ ಶಿವಣ್ಣ

1
429

ಪ್ರತಿಯೊಂದು ಸಿನಿಮಾದಲ್ಲೂ ನಿರ್ದೇಶಕ ಸಿಂಪಲ್ ಸುನಿ ಅವರು ಡಿಫರೆಂಟ್​ ಕಥಾವಸ್ತುವನ್ನು ಪ್ರೇಕ್ಷಕರ ಮುಂದಿಡುತ್ತಾರೆ. ಈಗ ಅವರು ‘ಗತವೈಭವ’ ಚಿತ್ರದ ಮೂಲಕ ಫ್ಯಾಂಟಸಿ ಮೈಥಾಲಜಿ ರೋಮ್ಯಾಂಟಿಕ್ ಲವ್ ಸ್ಟೋರಿ ಹೇಳೋದಿಕ್ಕೆ ಹೊರಟಿದ್ದಾರೆ. ನವ ಪ್ರತಿಭೆ ದುಶ್ಯಂತ್ ನಾಯಕನಾಗಿ ಆಶಿಕಾ ರಂಗನಾಥ್ ನಾಯಕಿ ಯಾಗ ಅಭಿನಯಿಸಿದ್ದಾರೆ. ಈಗಾಗಲೇ ತನ್ನ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ನವೆಂಬರ್‌ 14ಕ್ಕೆ ತೆರೆಗೆ ಬರ್ತಿದೆ. ಸದ್ಯ ಗತವೈಭವ ಚಿತ್ರದ ಪ್ರಚಾರ ಕೆಲಸ ಭರದಿಂದ ಸಾಗಿದ್ದು, ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶಿಪ್ ಸಾಂಗ್ ನ್ನು ಶಿವಣ್ಣ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಶಿವಣ್ಣ, ಗತವೈಭವ ಶೂಟಿಂಗ್ ಸೆಟ್ ಗೆ ಒಮ್ಮೆ ಹೋಗಿದ್ದೆ. ತುಂಬಾ ಇಷ್ಟವಾಗಿತ್ತು. ಸಿಂಪಲ್ ಸುನಿ ಅವರ ಯೋಚನೆ ಚಿಕ್ಕದಿದ್ದರೂ ಸಿನಿಮಾ ನೋಡುವಾಗ ಅದು ದೊಡ್ಡದಾಗಿ ಕಾಣಿಸುತ್ತದೆ.‌ ಅವರ ಚಿತ್ರಗಳಲ್ಲಿ ಕಮರ್ಷಿಯಲ್, ಜೀವನದ ಮೌಲ್ಯ, ಮೇಕಿಂಗ್, ಇಂದಿನ ಟ್ರೆಂಡ್ ಗೆ ತಕ್ಕಂತೆ ಅಚ್ಚುಕಟ್ಟಾಗಿ ಮಾಡುತ್ತಾರೆ. ಒಬ್ಬ ಅಣ್ಣನಾಗಿ ಅವರ ಸಿನಿಮಾ ಹಿಟ್ ಆಗಲಿ. ಮನೋಹಕ ಸಿನಿಮಾ ಆಗುತ್ತದೆ. ಅದು ಅಮೇಜಿಂಗ್ ಸಿನಿಮಾ ಆಗುತ್ತದೆ. ಗತವೈಭವ ಚಿತ್ರದ ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು. ನಂಬಿಕೆ ಇಟ್ಕೊಂಡು ಹಣ ಹಾಕಿದ್ದಾರೆ. ದುಶ್ಯಂತ್ ಅವರದ್ದು ಮೊದಲ ಸಿನಿಮಾ ಅನಿಸುವುದಿಲ್ಲ. ಅವರು ಮಾಡಿರುವುದು ಸುಲಭದ ಪಾತ್ರವಲ್ಲ. ಮೊದಲ ಚಿತ್ರದಲ್ಲಿ‌ ಒಳ್ಳೆ ಟ್ಯಾಲೆಂಟ್‌ ತೋರಿಸಿದ್ದಾರೆ. ಮ್ಯೂಸಿಕ್, ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ಆಶಿಕಾ ಮೊದಲು ಹೇಗೆ ಇದ್ದರೂ ಈಗಲೂ ಹಾಗೇ ಇದ್ದಾರೆ. ಕಿಶನ್ ಅದ್ಭುತ ಡ್ಯಾನ್ಸರ್. ಈ ಸಿನಿಮಾ ಚೆನ್ನಾಗಿ ಆಗುತ್ತದೆ. ಚಿತ್ರದಲ್ಲಿ ಪಾಸಿಟಿವ್ ವೈಬ್ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಸಿಂಪಲ್ ಸುನಿ ಮಾತನಾಡಿ, ನಾನು ಡೈರೆಕ್ಟರ್ ಆಗಿದ್ದರೂ ಯಾವ ಶಿವಣ್ಣ ಫ್ಯಾನ್ ಆಗಿ ಇರಲು ಇಷ್ಟಪಡುತ್ತೇನೆ. ಮನಮೋಹಕ ಶಿವಣ್ಣನಿಗೆ ಸ್ಕ್ರೀಪ್ಟ್ ಕೊಟ್ಟಾಗ ಅಡ್ವಾನ್ಸ್ ಆಗದೇ ಫೋಟೋಶೂಟ್ ಮಾಡಲು ಒಪ್ಪಿದ್ದರು. ಈ ವಯಸ್ಸಿನಲ್ಲಿ ಬಹಳಷ್ಟು ಸಂಖ್ಯೆಯ ಸಿನಿಮಾಗಳನ್ನು ಹೊಂದಿರುವ ಹೀರೋ ಅಂದರೆ ಜಗತ್ತಿನಲ್ಲಿ ಅದು ಶಿವಣ್ಣ ಒಬ್ಬರೇ ಎನ್ನುವುದನ್ನು ಎದೆ ತಟ್ಟಿಕೊಟ್ಟಿಕೊಂಡು ಹೇಳಬಹುದು ..
ಗತವೈಭವ ಸಾಂಗ್ ಬಗ್ಗೆ ಹೇಳುವುದಾದರೆ ಪೋರ್ಚುಗಲ್ ನಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಹಾಡಿಗೆ ಭೂಷಣ್ ಮಾಸ್ಟರ್ ಒಳ್ಳೆ ಎಫರ್ಟ್ ಹಾಕಿದ್ದಾರೆ. ದುಶ್ಯಂತ್ ಹಾಗೂ ಆಶಿಕಾ ಈ ಗೀತೆಗೆ ಸಖತ್ ಸ್ಟೆಪ್ ಹಾಕಿದ್ದಾರೆ ಎಂದರು.

ನಾಯಕ ದುಶ್ಯಂತ್ ಮಾತನಾಡಿ,‌ ನಮ್ಮಂತ ಯುವ ನಟರಿಗೆ ಶಿವಣ್ಣ ಮಾದರಿ. ಅಪ್ಪು ಸರ್ ಕಥೆ ಕೇಳಿದಾಗ ಇದು ಕಲ್ಟ್ ಸಿನಿಮಾ ಎಂದು ಹೊಗಳಿದ್ದರು. ಶಿವಣ್ಣ ಒಮ್ಮೆ ನಮ್ಮ ಸೆಟ್ ಗೆ ಸೈಲೆಂಟ್ ಆಗಿ ಬಂದು ಶೂಟಿಂಗ್ ನೋಡುತ್ತಿದ್ದರು. ಚಿತ್ರದ ಫುಟೇಜ್ ನೋಡಿ‌ ಇಷ್ಟಪಟ್ಟಿದ್ದರು. ಚಿಕ್ಕ ಹುಡ್ಗನಿದ್ದಾಗ ಸಿನಿಮಾ ಅಂದರೆ ಮ್ಯಾಜಿಕ್ ಎಂದುಕೊಂಡಿದ್ದೆ. ಆದರೆ ಈಗ ನನ್ನ ಜೀವನದಲ್ಲಿ ಮ್ಯಾಜಿಕ್‌ ನಡೆದಿದೆ. ಹತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ ಸುನಿ ಸರ್ ಜೊತೆ ಕೆಲಸ ಮಾಡಿದ್ದೇನೆ. ಮೂರು ಭಾಷೆಗಳಲ್ಲಿ ಕೆಲಸ ಮಾಡಿದ ಆಶಿಕಾ ರಂಗನಾಥ್, ಒಳ್ಳೆ ಮ್ಯೂಸಿಕ್ ಡೈರೆಕ್ಟರ್, ಕ್ಯಾಮೆರಾ ಮೆನ್ ನಮ್ಮ ಚಿತ್ರದಲ್ಲಿ ಕೆಲಸ ಮಾಡಿರುವುದು ಮ್ಯಾಜಿಕ್‌ ಎಂದರು.

ನಟಿ ಆಶಿಕಾ ರಂಗನಾಥ್ ಮಾತನಾಡಿ, ಶಿಪ್ ಸಾಂಗ್ ವಿಷ್ಯುವಲ್ ಆಗಿ ತುಂಬಾ ಚೆನ್ನಾಗಿ ಇರುವ ಹಾಡು. ಪೋರ್ಚುಗಲ್ ನಲ್ಲಿ ಹೋಗಿ ಚಿತ್ರೀಕರಣ ಮಾಡುವುದು ಕಷ್ಟವಾಗಿತ್ತು. ಕಷ್ಟವನ್ನು ಸುನಿ ಸರ್ ಫನ್ ಆಗಿ ಮಾಡಿದ್ದಾರೆ. ಶಿಪ್ ನಲ್ಲಿ‌‌ ನಿಲ್ಲುವುದೇ ಕಷ್ಟ. ಅದರಲ್ಲಿಯೂ ಡ್ಯಾನ್ಸ್ ಮಾಡುವುದು ಸ್ವಲ್ಪ ಕಷ್ಟ ಎನಿಸಿತು. ಶೂಟಿಂಗ್ ನಲ್ಲಿ ಭಾಗಿಯಾಗಿದ್ದು ಒಂದು ವಿಭಿನ್ನ ಅನುಭವ. ದುಶ್ಯಂತ್ ಹಾಡಿನ ಜೊತೆಗೆ ಆಕ್ಷನ್ ಕೂಡ ಶಿಪ್ ನಲ್ಲಿ ಮಾಡಿರುವುದು ವಿಶೇಷ ಎಂದರು.

ಹೇಗಿದೆ ಶಿಪ್ ಸಾಂಗ್?: ಶಿಪ್ ಸಾಂಗ್ ಸ್ಪೆಷಲ್ ಆಗಿ ಮೂಡಿ ಬಂದಿದೆ. ಇದೊಂದು ಹೊಸ ಪ್ರಯತ್ನ. ಇಡೀ ಹಾಡನ್ನು ಪೋರ್ಚುಗಲ್ ನಲ್ಲಿ ಶೂಟಿಂಗ್ ನಡೆಸಲಾಗಿದೆ. ನಾಯಕ ದುಶ್ಯಂತ್ ನಾಯಕಿ ಆಶಿಕಾ ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಗೆ ಹೆಜ್ಜೆ ಹಾಕಿದ್ದಾರೆ. ಸಿಂಪಲ್ ಸುನಿ ಕ್ಯಾಚಿ ಮ್ಯಾಚಿ ಪದ ಪೊಣಿಸಿದ್ದು, ಕೈಲಾಸ್ ಖೇರ್, ಚೇತನ್ ನಾಯಕ್ ಹಾಗೂ ಚಿನ್ಮಯಿ ಎಲ್ ಹಾಡಿಗೆ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಅದ್ಭುತ ಸಂಗೀತ ಒದಗಿಸಿದ್ದಾರೆ.

ಗತವೈಭವ ಸಿನಿಮಾಗೆ ಸುನಿ ಅವರು ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡಿಗೆ ಸಾಹಿತ್ಯ ಕೂಡಾ ಬರೆದಿದ್ದಾರೆ. ಸರ್ವ್‌ಗರಾ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ತಿಮ್ಮಯ್ಯ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Previous articleನವೆಂಬರ್ 1 ರಿಂದ ಹೊಸ ರೂಲ್ಸ್: ನಿಮ್ಮ ಜೇಬು, ರೇಷನ್ ಕಾರ್ಡ್‌ ಮೇಲೆ ನೇರ ಪರಿಣಾಮ!
Next articleಧಾರವಾಡ: ಸರಕಾರ ಆದೇಶಕ್ಕೆ ಹಿನ್ನಡೆ — ಹೈಕೋರ್ಟ್ ಮಧ್ಯಂತರ ತಡೆ

1 COMMENT

LEAVE A REPLY

Please enter your comment!
Please enter your name here