Home Advertisement
Home ಸಿನಿ ಮಿಲ್ಸ್ ರಶ್ಮಿಕಾ ಮಂದಣ್ಣ ಫೋಸ್ಟ್‌ ವೈರಲ್: “ನಾವೀಗ ಮೂವರು”, ತಾಯಿಯಾಗುತ್ತಿರುವ ಸಂಭ್ರಮನಾ..?

ರಶ್ಮಿಕಾ ಮಂದಣ್ಣ ಫೋಸ್ಟ್‌ ವೈರಲ್: “ನಾವೀಗ ಮೂವರು”, ತಾಯಿಯಾಗುತ್ತಿರುವ ಸಂಭ್ರಮನಾ..?

0
95

ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನ ಕಣ್ಮಣಿ, ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಸದಾ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಕಳೆದ ಫೆಬ್ರವರಿ 26 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. ಆದ್ರೆ ಇದೀಗ ಮದುವೆಯಾದ ಕೇವಲ ಒಂದು ತಿಂಗಳ ಸಂಭ್ರಮದಲ್ಲಿ ರಶ್ಮಿಕಾ ಹಂಚಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಹೌದು.. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅನಿಮೇಟೆಡ್ ವಿಡಿಯೋವೊಂದನ್ನು ಹಂಚಿಕೊಂಡಿರುವ ರಶ್ಮಿಕಾ, ಅದಕ್ಕೆ “ನಾವೀಗ ಮೂವರು” (We are three now) ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಕ್ಯಾಪ್ಷನ್ ನೋಡಿದ ತಕ್ಷಣ ಅಭಿಮಾನಿಗಳಲ್ಲಿ ಅಚ್ಚರಿ ಹಾಗೂ ಕುತೂಹಲಕ್ಕೆ ಮನೆಮಾಡಿದೆ. ಕೆಲವು ಅಭಿಮಾನಿಗಳು ರಶ್ಮಿಕಾ ಗುಡ್ ನ್ಯೂಸ್ ನೀಡುತ್ತಿದ್ದಾರೆ, ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂದು ಭಾವಿಸಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಆದ್ರೆ ಈ ಸುದ್ದಿಯ ಹಿಂದಿರುವ ಅಸಲಿ ವಿಷಯವೇ ಬೇರೆ ಇದೆ.

ರಶ್ಮಿಕಾ ಮಂದಣ್ಣ ಸೃಷ್ಟಿಸಿದ ಒಂದು ವಿಶಿಷ್ಟ ಅನಿಮೇಟೆಡ್ ಪಾತ್ರದ ಹೆಸರು ‘ರೂ’ (Roo). ಈ ಪಾತ್ರವು ರಶ್ಮಿಕಾ ಸ್ವಂತ ವ್ಯಕ್ತಿತ್ವದ ಪ್ರತಿಬಿಂಬದಂತಿದೆ. ಈ ಸೂರ್ಯಕಾಂತಿ ಹೂವಿನ ರೂಪದ ಪಾತ್ರವನ್ನು ತಮ್ಮ ಪ್ರೀತಿಯ ಗೆಳತಿ ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಜೀವನದ ಅನಿಮೇಷನ್ ಲೋಕಕ್ಕೆ ಪತಿ ವಿಜಯ್ ದೇವರಕೊಂಡರನ್ನ ಆಹ್ವಾನಿಸುವ ಉದ್ದೇಶದಿಂದ ರಶ್ಮಿಕಾ ಈ ವಿಡಿಯೋ ಮಾಡಿದ್ದಾರೆ. ವಿಜಯ್, ರಶ್ಮಿಕಾ ಹಾಗೂ ಈ ‘ರೂ’ ಪಾತ್ರ ಸೇರಿ ‘ಮೂವರು’ ಎಂಬರ್ಥದಲ್ಲಿ ಆ ಸಾಲನ್ನು ಬರೆದುಕೊಂಡಿದ್ದಾರೆ.

ಇದು ರಶ್ಮಿಕಾ ವೈಯಕ್ತಿಕ ಜೀವನದ ಸಿಹಿ ಸುದ್ದಿಯಲ್ಲದಿದ್ದರೂ, ಅಭಿಮಾನಿಗಳು ಮಾತ್ರ ಈ ಕ್ರಿಯೇಟಿವ್ ಐಡಿಯಾಗೆ ಫಿದಾ ಆಗಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಅನಿಮೇಟೆಡ್ ಜೋಡಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದುವೆಯ ನಂತರದ ಸುಂದರ ಕ್ಷಣಗಳನ್ನು ರಶ್ಮಿಕಾ ಈ ರೀತಿ ಕಲಾತ್ಮಕವಾಗಿ ಹಂಚಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಒಟ್ಟಿನಲ್ಲಿ.. ಗಾಸಿಪ್‌ಗಳಿಗೆ ಆಹಾರವಾಗಿದ್ದ ‘ಮೂವರು’ ಎಂಬ ಪದದ ಹಿಂದಿನ ರಹಸ್ಯ ಈಗ ಬಹಿರಂಗವಾಗಿದ್ದು, ರಶ್ಮಿಕಾ ಈ ವಿಭಿನ್ನ ಪ್ರಯತ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.