‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮಾಸ್ ಲುಕ್

1
131

‘ಕಾಟೇರ’ ಚಿತ್ರದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗ ಚಿತ್ರದಲ್ಲಿರುವ ಮತ್ತೊಂದು ಪ್ರಮುಖ ಪಾತ್ರಧಾರಿ ರಾಜ್ ಬಿ ಶೆಟ್ಟಿ ಅವರ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿದ್ದು ಸಿನಿ ರಸಿಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ರಾಜ್ ಬಿ ಶೆಟ್ಟಿ ಮಾಸ್ ಲುಕ್: ರಾಜ್ ಬಿ ಶೆಟ್ಟಿ ಅವರ ಪಾತ್ರದ ಪೋಸ್ಟರ್ ಹಾಗೂ ಟೀಸರ್ ಅನಾವರಣಗೊಂಡಿದ್ದು. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಟೀಸರ್ ಬಿಡುಗಡೆಯಾಗಿದೆ, ಅಭಿಮಾನಿಗಳ ಪ್ರತಿಕ್ರಿಯೆಯಿಂದ ನೆಟ್‌ನಲ್ಲಿ ಟ್ರೆಂಡಿಂಗ್‌ಗೆ ದಾರಿ ಮಾಡಿಕೊಟ್ಟಿದೆ. ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ ಸಂಪೂರ್ಣ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ವೈರಲ್ ಆದ ಡೈಲಾಗ್: ಚಿತ್ರದ ಟೀಸರ್‌ನಲ್ಲಿ ವಿಶೇಷವಾಗಿ ಬಂದಿರುವ ಡೈಲಾಗ್ ಈಗಾಗಲೇ ವೈರಲ್ ಆಗಿದೆ. “ಗುಡಿಯಾಗಿನ ಪೂಜೆ ಅಚಾರ ವಿಚಾರದ ಪ್ರಕಾರ ನಡೆಯುತ್ತದೆ… ಬೇಸಾಯ ಬೀಳೊ ಮಳೆ, ಬೆಳೆಯೋ ಬೆಳೆ ಪ್ರಕಾರ ನಡೆಯುತ್ತದೆ… ಹಣೆಬರಹ ಗೀಚಿದ ಪಾಪ ಪುಣ್ಯದ ಪ್ರಕಾರ ನಡೆಯುತ್ತದೆ… ಎಲ್ಲಾನೂ ಅದರ ಪಾಡಿಗೆ ನಡೆಯುತ್ತಿದ್ದರೇ ನಿಂದೆನು ಇದು ಕಾನೂನು ಪ್ರಕಾರ?” ಎಂಬ ಡೈಲಾಗ್ ರಾಜ್ ಬಿ ಶೆಟ್ಟಿ ಪಾತ್ರದ ತೀಕ್ಷ್ಣತೆ, ತತ್ವ ಹಾಗೂ ಕಥೆಯ ಗಂಭೀರತೆಯ ಬಗ್ಗೆ ಸೂಚನೆ ನೀಡುತ್ತಿದೆ.

ಚಿತ್ರವನ್ನು ಸಾರಥಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಮತ್ತು ಕೆ.ವಿ. ಸತ್ಯಪ್ರಕಾಶ್ ನಿರ್ಮಿಸಿದ್ದಾರೆ. ದುನಿಯಾ ವಿಜಯ್ ಅವರು ಈ ಚಿತ್ರದಲ್ಲಿ ಸಂಪೂರ್ಣ ವಿಭಿನ್ನ ಶೈಲಿಯ ಪಾತ್ರದಲ್ಲಿ ಕಾಣಲಿದ್ದು, ಅವರ ಅಭಿಮಾನಿಗಳಿಗೆ ಈಗಾಗಲೇ ಸರ್ಪ್ರೈಸ್ ಮೂಡಿಸಿದೆ.

ರಿಲೀಸ್ ದಿನಾಂಕ: ಜನವರಿ 23 ರಂದು ನಟ ದುನಿಯಾ ವಿಜಯ್ ಅವರ ಜನ್ಮದಿನದಂದೇ ’ಲ್ಯಾಂಡ್‌ಲಾರ್ಡ್’ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದಿಂದ ಪ್ರಕಟವಾಗಿದೆ. ಜನ್ಮದಿನದ ಸಂಧರ್ಭದಲ್ಲಿ ಅಭಿಮಾನಿಗಳಿಗೆ ಸಿನಿಮಾ ಒಂದು ವಿಶೇಷ ಕೊಡುಗೆಯಾಗಲಿದೆ.

Previous articleಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್​ನಿಂದ​​ ನೋಟಿಸ್
Next articleಕೇಂದ್ರದ ಪಾತ್ರವೇನು?: ಡಿಕೆ ಶಿವಕುಮಾರ್ ಕಿಡಿ, ಬೊಮ್ಮಾಯಿಗೆ ಪ್ರಶ್ನೆ!

1 COMMENT

LEAVE A REPLY

Please enter your comment!
Please enter your name here